ಪುಟ:ಮಾತೃನಂದಿನಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

i ಶ್ರೀ || !! ಅಯ್ಕೆ ನಮಃ || ಕರ್ಣಾಟಕ ಮಾತೃನಂದಿನಿ.

(C ಸಲ್ಪ ಕಲ್ಪಲತಿಕಾಮವಧೀಂ ಕ್ಷಮಾಯಾ-ಸೈಜ್ಞಾ ವರಾಹಮಹಿಷಿಂ ಸುಲಭಾನುಕಾಮ್ ! ವಿಶ್ವಸ್ಯ ಮಾತರಮುಕಿನ ಕಾಮಧೇನುಂವಿಶ್ವಂಭರಾಮಶರಣಶರಣಂ ಪ್ರಪದ್ಯ 11-» ಪ್ರ ಥ ಮ ಪ ರಿ ಚೊ ದ. -GK( ಮಾತಾಪುತ್ರರ ಸಂಭಾಷಣ ) ಶಿವಪುರದ ರಾಜಬೀದಿಯಲ್ಲಿ ಮೊದಲ ಉಪ್ಪರಿಗೆಯ ಮನೆ ಶ್ರೀಮಂತ ನಗೇಶರಾಯನ ವಾಸಸ್ಥಲ. ನರೇಶರಾಯನು ದೊಡ್ಡ ಜಮೀನ ದಾರನೂ ವಿದ್ಯಾ-ವಿನಯ ಸಂಪನ್ನನೂ ಆದ ಪುಣ್ಯಪುರುಷನು. ಈತನು ಇನ್ನೂ ನಡುಹರೆಯ (ಮಧ್ಯಮ ವಯಸ್ಕ) ದವನು. ಈತನ ಸಂಸಾರದಲ್ಲಿ ಪತ್ನಿಯಾದ ಚಿತ್ರಕಲೆ, ಮತ್ತು ಮದುವೆಗಿರುವ ಮಗಳು, ಮಗನು, ಇವರು ಮಾತ್ರವೇ ಇದ್ದರು. ಉಳಿದ ನಂಟರಿಷ್ಟರ ವಿಚಾರವು ನಮಗೇಕೆ ? ಪ್ರಕೃತದಲ್ಲಿ, ಮನೆಯ ಮುಂಗಡೆಯ ತೋಟದಲ್ಲಿ, ಕಲ್ಲು ಜಗಲಿಯ ಮೇಲೆ ನಮ್ಮ ಆದರ್ಶ ಮಹಿಳೆಯನ್ನಿ ಸಿದ ಚಿತ್ರಕಲೆಯೊಬ್ಬಳೇ ಕುಳಿತು,