ಮಾತೃನಂದಿನಿ ನಂದಿ ವಗೇಶರಾಯರ ವಿಷಯದಲ್ಲಿ ಒಬ್ಬೊಬ್ಬರು ಒಂದೊಂದ: ಒಗೆ ಯಾಗಿ ಪ್ರೀತಿಸುತ್ತಿರುವರು. ತಾವ ಸಂದು ಗೆಣಂಗಗಳಲ್ಲಿ ನೋಡಿದರೆ, ಮತ್ತyವ -ಿ, ದೇವಾಲಯ, ಮಠ, ಚಾವಡಿಗಳಲ್ಲಿ ಗುಂಪು ಗುಂಪಾಗಿ ಸಿತು, ನುಡಿ ಬಿರುನುಡಿ ಕೊಂಕುನುಡಿಗಳಿಂದ ಒಗೆಬಗೆಯಾದ ಅಗ ವಿಕ್ಷೆ ವಿನ್ಯಾಸಗಳಿಂದ ನಲಿದಾಡುವ ಸ್ತ್ರೀಪುರುಷರ ಸುಖಗಳ ಕಾಣುತ್ತಿರುವುವು. ಹಟ್ಟೇಕೆ, - ಸಗೇಶರಾಯನ ಮೇಲೆ ಶಿವಪುರವೇ ಮುರಿದು ಬೀಳುವಂತಾಗಿದೆಯೆಂದರೆ ಸಾಕು. ಹೇಗೂ ಇಂದು ಶಿವಪುರದಲ್ಲಿ ವಿಶೇಷವಾದ ಸಡಗರವ ತೋರು ಇದೆ. ಓಣಿ-ಸಂದು-ಬೀದಿಗಳಿಂದ ಮೊದಲು, 'ದೊಡ್ಡ ದೊಡ್ಡ ಬೀದಿಗಳ ವರೆಗೆ ಎಲ್ಲೆಡೆಯಲ್ಲಿಯೂ ಜನಗಳ ಗೊಂದಲವೇ ಗೊಂದಲವಾಗಿದೆ. ಎಲ್ ಮನೆಬಾಗಿಲುಗಳಿಗೂ ಬೀಗಹಾಕಲ್ಪಟ್ಟಿವೆ. ಹುಡುಗ ಹುಡುಗಿಯರಿಂದ ಮೊದಲು ತಲೆ ನಡುಗುವ ಮುದುಕರವರೆಗೆ ಎಲ್ಲರೂ ಹಾರಿ ಹಾರಿ ನಡೆದು ಹೋಗುತ್ತಿರುವರು. ಖಾಸೆಯನ್ನು ಹುರಿಮಾಡುವ ಗಂಡಸರ ವಿಷಯ ನಂತೂ ಹೇಳಲಳವಲ್ಲ. “ನತೆಯಿರಯ್ಯ, ಬೇಗ ನಡೆಯಿರಿ; ಸ್ವಾಮಿಗಳ ದರ್ಶನಕ್ಕೆ ಆತಂಕವಾದೀತು. ನಿಲ್ಲದೆ ಬೇಗ ಬೇಗ ನಡೆಯಿರಿ, ಇಂದು ಅವರೇನು ಇತ್ಯರ್ಥ ಮಾಡುವರೋ ನೋಡಬೇಕು. ಇಷ್ಟು ದಿನಗಳೂ ನಮ್ಮನ್ನು ಹಿಂದೆಮುಂದೆ ನಿಂದಿಸಿದುದಕ್ಕೆ ಈದಿನ ಚೆನ್ನಾಗಿ ದಂಡವನ್ನು ತೆಗೆ ಯಿಸದೆ ಬಿಡಬಾರದು. ನಾವೆಲ್ಲರೂ ಸೇರಿ ಹೇಗಾದರೂ ಮಾಡಿ ನನ್ನ ರಾಯನ ಹಣದ ಸೊಕ್ಕನ್ನೂ, ಆವಳ (ನಂದಿನಿ) ಕೊಂಕುನುಡಿಯ ಓಂಕ ತನವನ್ನ ಮರಿದೇ ಹಾಕಬೇಕು. ಇಲ್ಲದಿದ್ದರೆ ನಮ್ಮಲ್ಲಿ ಯಾರಿಗೆ ? ಮಾನ ಮರ್ಯಾದೆಗಳುಳಿಯುವಂತೆ ತೋರುವುದಿಲ್ಲ. ಬನ್ನಿರಿ; ಈಗಲೇ ಅವರು ಬಂದು ಸ್ವಾಮಿಗಳ ಪಾದದಲ್ಲಿ ಕಾಣಿಕೆಯನ್ನು ಒಪ್ಪಿಸಿ, ಅವರು ಹೇಳಿದಂತೆ ದಂಡ-ಪ್ರಾಯಶ್ಚಿತ್ರಗಳಿಗೆ ಹೊಣೆಯಾಗಬೇಕಾಗಿರುವುದು. ಹೇಗೂ ಬಿಡುವಂತಿಲ್ಲ. ಇದರಿಂದ ನಿಮಗಿದೊಂದು ನೋಟವೇ ಆಗಿದೆಯ ಲ್ಲವೆ? ನಡೆಯಿರಿ, ಅಲ್ಲಿ ಆವಾವ ವಿದ್ಯಮಾನಗಳು ಕಾಣುವುವೋ; ಮತ್ತಾ ನಾವ ವೈಚಿತ್ರಗಳು ತೋರಿಬರುವವೋ ಎಲ್ಲವನ್ನೂ ಚೆನ್ನಾಗಿ ನೋಡಿಬ ರುವ.” ಹೀಗೆಂಬ ಕೌತುಕದ ವಾಜೂಾಲೆಗಳೇ ಹೊರ ಹೊರಡುತ್ತಿರುವುವು.
ಪುಟ:ಮಾತೃನಂದಿನಿ.djvu/೮೫
ಗೋಚರ