ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Universal Declaration of Human Rights - Kannada (ಕ್ನನಡ)

ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ

United Nations General Assembly, 10 December 1948
ಸಂಯುಕ್ತ ರಾಷ್ಟ್ರ ಸಂಸ್ಥೆಯ (ವಿಶ್ವಸಂಸ್ಥೆಯ) ಮಹಾಸಭೆ, ೧೦ ಡಿಸ್ಥಂಬರ್ ೧೯೪೮

ಪ್ರಸ್ತಾವನೆ


ಮಾನವ ಕುಟುಂಬದ ಸಮಸ್ತ ಸದಸ್ಯರ ಸಹಜ ಗೌರವವನ್ನೂ ಸಮಾನವೂ ಅನನ್ಯಹಾರ್ಯವೂ ಆದ ಹಕ್ಕುಗಳನ್ನು ಅಂಗೀಕರಿಸುವುದು ಪ್ರಪಂಚದಲ್ಲಿ ಸ್ವಾತಂತ್ರ್ಯದ ಧರ್ಮಶಾಂತತೆಗಳ ತಳಹದಿಯಾಗಿರುವುದರಿಂದಲೂ,

ಮಾನವ ಹಕ್ಕುಗಳಗೆ ತೋರಿಸಲ್ಪಟ್ವ ಉಪೇಕ್ಷೆ ತಿರಸ್ಕಾರಗಳು, ಮಾನವನ ಅಂತಃಕರಣವನ್ನು ದಾರುಣಗೊಳಿಸಿದಂತಹ ಕ್ರೂರಕೃತ್ಯಗಳಾಗಿ ಪರಿಣಮಿಸಿರುವುದರಿಂದಲೂ, ಮತ್ತು ಯಾವ ಪ್ರಪಂಚದಲ್ಲಿ ಮನುಷ್ಯ ಜೀವಿಗಳು ವಾಕ್‌ಸ್ವಾತಂತ್ರ್ಯ ವಿಶ್ವಾಸ ಸ್ವಾತಂತ್ರ್ಯಗಳನ್ನು ಅನುಭವಿಸುವವೋ ಯಾವ ಪ್ರಪಂಚದಲ್ಲಿ ಅಂಜಿಕೆ ಮತ್ತು ಅಭಾವಗಳಿಂದ ಮುಕ್ತವಾಗಿರುವುದು ಸಾಮಾನ್ಯ ಜನತೆಯ ಮಹದಾಶಯವೆಂಬುದಾಗಿ ಸಾರಲ್ಪಟ್ಟಿರುವುದೋ ಅಂಥಾ ಪ್ರಪಂಚದಾಗಮನವಾಗಿರುವುದರಿಂದಲೂ,

ಮಾನವ ಹಕ್ಕುಗಳು ಕಾನೂನಿನ ಕಟ್ಟಳೆಯಿಂದ ಸಂರಕ್ಷಿಸಲ್ಪಡಬೇಕಾದರೆ ಮನುಷ್ಯನು ಅವಲಂಬನೆ ಹೊಂದಲು ಒತ್ತಾಯಪಡಿಸಲ್ಪಡದಿದ್ದರೆ, ಕೊನೆಯ ಉಪಾಯವಾಗಿ, ದುಷ್ಪ್ರಭುತ್ವ ಮತ್ತು ಕ್ರೂರತನಗಳನ್ನು ವಿರೋಧಿಸಿ ದಂಗೆಮಾಡುವುದು ಅತ್ಯ ಗತ್ಯವಾಗಿರುವುದರಿಂದಲೂ,