ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ್ನು ನಿನಗೆ ನಾನು ಕಲಿಸಿಕೊಡುವೆನು. ಸುಲಭವಾಗಿಯೂ ನೀನದನ್ನು ಕಲಿತುಕೊಳ್ಳಬಹುದು. ಅದರಿಂದ ನಿನಗೆ ಉಪಕಾರವೇ ಹೊರತು ಅಪಕಾರವಿಲ್ಲ. ನೀನು ಈ ದೇಶ ವನ್ನೇ ಬಿಟ್ಟು ಹೊರಡಬೇಕು. ಹೊರಡುವಾಗ ಮಾತ್ರ ನನಗೊಂದು ಭಾಷೆಯನ್ನು ಕೊಡಬೇಕು. ಒಂದು ವರ್ಷ ದಲ್ಲಿ ನೀನು ನಿನ್ನ ಹೆಂಡತಿಗೆ ಬೇಕುಬೇಕಾದ ಹಾಗೆ ಆ ಗದಗಳನ್ನು ಬರೆಯುತ್ತಿರಬಹುದು, ಆದರೆ, ಒಂದು ಸಲ ವೊ ಕೂಡ ನನ್ನಿದಿರಿಗೆ ನಿನ್ನ ಹೆಂಡತಿಯ ಹೆಸರನ್ನು ಎತ್ತ ಕೂಡದು. ಒಂದು ವೇಳೆ ಹಾಗೆ ನೀನು ಮಾಡುವುದಾ ದರೆ, ನಿನಗೆ ನನ್ನಲ್ಲಿ ಪ್ರೀತಿಯಿಲ್ಲವೆಂದು ನಾನು ತಿಳಿದು ಕೊಳ್ಳಬೇಕಾಗುವುದು. ಆದುದರಿಂದ ಅಪ್ರೀತಿಗೆ ಕಾರಣ ವನ್ನು ನನಗೆ ತೋರಿಸಲ ಬೇಡ, ತಿಳಸಲೂ ಬೇಡ, ನನ ಗೆ ನಾನೇ ವಂಚಿತಳಾಗುವೆನು. ನೀನು ನನ್ನ ಹೃದಯ ಸಿಂಹಾಸನದಲ್ಲಿ ಕುಳಿತು, ಏಕಾಧಿಪತೈವಾಡವೆ ; ನೀನು ನನ್ನ ಹೃದಯ ಶರ, ನೀನೇ ನನಗೆ ಸರ್ವಸ್ವ ಸ್ವರೂಪನು, ಒಂದು ವರ್ಷವಾಯಿತೆಂದರೆ, ನಾನು ನರಕದ ಕಡೆಗೆ ತೆರ ಳವನು. ಒಂದು ವರ್ಷದವರೆಗೂ ನಾನು ನಿನ್ನ ಸಹವಾಸ ದಲ್ಲಿದ್ದು, ಯಾವ ಸುಖವನ್ನು ಅನುಭವಿಸುವೆನೋ, ಆ ಸು ಖದಿಂದಲೇ ನರಕವನ್ನು ಕುರಿತು ಸಂತೋಷವಾಗಿ ತೆರ ಳುವನು. ಈ ವರ್ಷ ಮಾತ್ರ ನನಗೆ ಜಯಕಾಲ, ದೇವೇಂ ದು, ನನ್ನ ಪ್ರಾಣೇಶ್ವರ, ನೀನು ನನ್ನ ಭಾವವನ್ನು ತಿಳಿ ಯಲಾರೆಯ ? ನನ್ನ ಯಾತನೆಯನ್ನು ಕಿಂಚಿತ್ತಾದರೂ ಊಹಿಸಲಾರೆಯ ? ನಾನು ನಿನ್ನನ್ನು ಎಷ್ಟೋ ವಿಧದಲ್ಲಿ ಪೂಜಿಸುವನು. ನೀನು ಒಂದು ಸಲವಾದರೂ ಪ್ರೀತಿಸು