ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೆನೆಂದು ಹೇಳಿಬಿಡು, ನಾನು ಅದನ್ನೇ ಬಲವಾಗಿ ನಂಬಿ ಕೊಂಡು ದಿನಗಳನ್ನು ಕಳೆಯುವೆನು. ಆದ್ದರಿಂದ ನಾನು ನಿನ್ನನ್ನು ಪ್ರಾರ್ಥಿಸುವುದೇನೆಂದರೆ-ನೀನು ನನ್ನನ್ನು ಪ್ರೀತಿ ಸಬೇಕು. ದೇವೇಂದ್ರ ! ನನ್ನ ಪ್ರಶ್ನೆಗೆ ಉತ್ತರಕರು, ಪ್ರತಿಜ್ಞೆ ಮಾಡು ನೀನು ಮಾತುಕೊಟ್ಟ ಮಾತ್ರಕ್ಕೇ, ನಿನ ಗೇನೂ ನಷ್ಟವಾಗುವುದಿಲ್ಲ. ನಾನು ಈಗಲೇ ನಿನ್ನನ್ನು ರೇವತಿಯ ಬಳಿ ಕರೆದುಕೊಂಡು ಹೋಗುವೆನು, ಆಕೆಯು ಈಗ ಹೆಣದಂತೆ ಒಂದು ಕಡೆ ಬಿದ್ದಿರುವಳು, ಯಾವ ಔಷ ಧದಿಂದ ಜ್ಞಾನಲಾಭವಾಗುವುದೋ, ಆ ಔಷಧವನ್ನು ನಾನು ನಿನ್ನ ಕೈಯಲ್ಲಿ ಕೊಡುವೆನು; ನೀನೇ ಅದನ್ನು ಆಕೆಗೆಕುಡಿಸು, ಕುಡಿಸಿದಾಕ್ಷಣವೇ ಆಕೆಗೆ ಎಚ್ಚರಿಕೆಯಾಗುವುದಲ್ಲದೇ, ಶರೀರದ ಅವಸ್ಥೆಯ ಮೇಲಾಗುವುದು, ಅಂದರೆ-ಮೊದಲು ನಿನ್ನ ಹೆಂಡತಿಯು ಆವರೀತಿಯಲ್ಲಿ ಆರೋಗ್ಯವಾಗಿರುತಿದ್ದ ಳೊ, ಔಷಧಾನಂತರದಲ್ಲಿಯೂ ಅದೇ ರೀತಿಯಲ್ಲಿಯೇ ಆಗುವಳು. ಒಂದು ವೇಳೆ ನೀನು ಒಪ್ಪದಿರುವೆಯಾದರೆ, ನಿಜವಾಗಿಯೂ ನಿನ್ನ ಹೆಂಡತಿಗೆ ಮೃತ್ಯುವುಂಟಾಗುವುದು, ಮನ್ಮಥವಿಕಾರದಿಂದ ಉನಾದಿನಿಯಾಗಿ ಕಣ್ಣುಗಳಿಂದ ಧಾರಾಕಾರವಾಗಿ ನೀರನ್ನು ಸುರಿಸುತ್ತಾ, ನಾನು ನಿನ್ನಿದಿ ರಿಗೆ ನಿಂತಿರುವುದೂ, ನನ್ನ ಪ್ರಶ್ನೆಗೆ ಯಾವ ಉತ್ತರವನ್ನೂ ಕೂಡಲಾರದವನಾಗಿ, ಕಲ್ಲಿನ ಬೊಂಬೆಯಂತೆ ನೀನು ನನ್ನಿ ದಿರಿನಲ್ಲಿ ನಿಂತಿರುವುದ ಹೇಗೆ ನಿಶ್ಚಯವೋ, ನಿನ್ನ ಹೆಂಡ ತಿಗೆ ಮೃತ್ಯುವೂ ಹಾಗೆಯೇ ನಿಶ್ಚಯವಾದುದು, ಜಗತ್ತಿನಲ್ಲಿ ಎಂತಹ ತಿಳವಳಕಯಿದ್ದರೂ, ಅದರ ಬಲದಿಂದ ಆಕೆಯ ಲುಪ್ತವಾಗಿರುವ ಚೈತನ್ಯವು ಮತ್ತೆ ಸಂಪಾದಿಸಲಾಗಲು