ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲನ್ನು ಮತ್ತೆ ಒಳಗೆ ಮುಜ್ಜಿಟ್ಟನು, ಜಮೆಲೆಯು ಭಯದಿಂದ ಚೀತಾರಮಾಡುತ್ತಾ ಹತ್ತು ಹೆಜ್ಜೆ ಹಿಂದಕ್ಕೆ ಸರಿದು ಒಂದು ಮೂಲೆಯಲ್ಲಿ ಅವಿ ತುಕೊಂಡು ದೇವೇಂದ್ರನ ಮೇಲೆ ಕೈಮಾಡುವುದಕ್ಕೆ ಯ ತಮಾಡಲು, ದೇವೇಂದನು, “ ಎರಿಕ ! ಕೈಯತ್ತ ಬೇಡ, ಎತ್ತಿದರೆ ನಿನ್ನ ಕೈಗಳನ್ನು ಸುಟ್ಟುಬಿಡುವೆನು, ಆಮೆಲೆ ! ಇದು ಹಾಸ್ಕೋದ್ದಿಪಕವಾದ ಪ್ರಹಸನವಲ್ಲ ; ಇದು ಪೈಶಾಚಿಕ ಘಟನಾವಳಿಗಳಿಂದ ಪರಿಪೂರ್ಣವಾಗಿ ಅತಿ ಭಯಂಕರವಾದ ವಿಯೋಗಾಂತ ನಾಟಕ (Tragedy) ಏಳನೆಯ ಸಂಧಿ, (ಸಿಕ್ಕಿಬಿದ್ದಳು) ದೇವೇಂದ್ರ ವಿಜಯನು, ಎರಡುಸಲ ಪಿಸ್ತೂಲಿನ ಶಬ್ದವನ್ನು ಮೇಲೆ ಮೇಲೆ ಮಾಡಿದ ಕೂಡಲೆ, ಶಚೀಂದ್ರ ನು ತಾನಿದ್ದಲ್ಲಿಗೆ ಬರುವುದಾಗಿ ತಿಳಿದುಕೊಂಡನು. ಎರ ಡಾವೃತ್ತಿ ವಿಸಲಿನ ಶಬ್ದವನ್ನು ಮಾಡಿದರೆ, ಶಚೀಂದ್ರ ನು ತಾನಿದ್ದಲ್ಲಿಗೆ ಬರಬೇಕೆಂದು ಮೊದಲೇ ಸಂಕೇತವಾಗಿ ದ್ದ ಕಾರಣ, ಶಚೀಂದ್ರನು ತಡಮಾಡದೆ ನಿಶ್ಚಬ್ಬವಾಗಿ ಬಂದು ಜುಮಲೆಯ ಹಿಂಭಾಗದಲ್ಲಿ ನಿಂತುಕೊಂಡನು, ಶ ಚೀಂದ್ರನು ಬಂದುದು ದೇವೇಂದ್ರನಿಗೆ ತಿಳಿಯಿತು; ಜುಮ ಲೆಗೆ ಮಾತ್ರ ಗೊತ್ತಾಗಲಿಲ್ಲ. ಶಚೀಂದ್ರನು ತನ್ನ ಭಿಕ್ಷುಕ ವೇಷವನ್ನು ಬದಲಾಯಿಸಿ, ಪೋಲೀಸಿನವರ ವೇಷವನ್ನುಅಂದರೆ ಯೂನಿಫರವನ್ನು ಧರಿಸಿಕೊಂಡು ಬಂದು ನಿಂ ತಿದ್ದನು. ದೇವೇಂದ್ರನು ಮಾತನಾಡಿದನು. ಜುಮಲೆ! ನೀನು