ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ಹೀಗೆ ಹೇಳಿ ದೇವೇಂದ್ರನು ಶಚೀಂದ್ರನನ್ನು ಕರೆ ದುಕೊಂಡು ಹೊರಗೆ ಹೋಗಿ ಮತ್ತೊಂದುಕಡೆ ಕೆಲ ವನ್ನು ನಿರೀಕ್ಷಿಸಿಕೊಂಡಿದ್ದ ನು. - ಹತ್ತು ಹದಿನೈದು ನಿಮಿಷಗಳು ಕಳೆದು ಹೋದು ವು, ಯಾವ ವರ್ತಮಾನವೂ ಇಲ್ಲ. ಮತ್ತೆ ಹತ್ತು ನಿಮಿಷಗ ಳು ಕಳದುವು, ಆದರೂ ಯಾವ ವರ್ತಮಾನವೂ ಇಲ್ಲ. ದೇ ವೇಂದ್ರನಿಗೆ ಯೋಚನೆಗಿಟ್ಟಿತು. ಅವನು ಹೊರಗಿನಿಂದಲೇನಾನು ಬಹಳ ಹೊತ್ತು ಕಾದಿರಲಾರೆ, ಇನ್ನು ಐದು ನಿಮಿ ಸಮಾತ್ರ ನಿರೀಕ್ಷಿಸುವೆನು. ಅಷ್ಟರಲ್ಲಿಯೇ ಎಲ್ಲವೂ ಇತ್ಯ ರ್ಥವಾಗಬೇಕು ಎಂದು ಗಟ್ಟಿಯಾಗಿ ಕೂಗಿ ಹೇಳಿದನು, ಅದೇ ರೀತಿಯಲ್ಲಿಯೇ ಇನ್ನೂ ಐದು ನಿಮಿಷಗಳು ಕಳೆದು ಹೋದುವು. ಐದು ನಿಮಿಷವಾದರೂ ಯಾವ ಉತ್ತರವೂ ಬಾರ ದಿರಲು, ದೇವೇಂದ್ರನು ಕೋಪದಿಂದ ಬಾಗಿಲನ್ನು ತೆಗೆದು ಕಂಡು ಕೋಣೆಯೊಳಗೆ ಪ್ರವೇಶ ಮಾಡಿದನು. ಅಲ್ಲಿನ ವಿ ದೈಮಾನವನ್ನು ನೋಡಿದಾಕ್ಷಣವೇ, ದೇವೇಂದ್ರಸ ಶರೀರವೆ ಲ್ಲವೂ ಥರಥರ ನಡುಗಿತು. ತಲೆಯು ತಿರುಗಿ ಬಾಯಿಯು ಒಣಗಿ ಹೋಗಿ ಮಾತೇ ಹೊರಡದೇ ಹೋಯಿತು. ಯಾವ ಕೋಣೆಯಲ್ಲಿ ದೇವೇಂದ್ರನು, ರೇವತಿಯ ನ್ಯೂ, ಜಮಲೆಯನ್ನೂ ಬಿಟ್ಟು ಹೊರಗೆ ಬಂದಿದ್ದನೋ, ಆ ಕೋಣೆಯು ಈಗ ಶೂನೈವಾಗಿಬಿಟ್ಟಿದ್ದಿತು ರೇವತಿ ಯಿಲ್ಲ, ಆಮೆಲೆಯ ಇಲ್ಲ. ಆಲ್ಲಿ ಅವರಿದ್ದದ್ದಕ್ಕೆ ಯಾವ ಚಿಹ್ನೆಯೂ ಇರಲಿಲ್ಲ.