ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hv ವಾಗಿ ಗಿರಿಧಾರಿಯನ್ನು ಆಕ್ರಮಣವಾಡಿದನು. ಅವನು ಯಾವರೀತಿಯಲ್ಲಿ ಅಚಲಸಿಂಹನನ್ನು ಬಂದಿಯನ್ನಾಗಿ ಮಾಡಿ ನೆಲದಮೇಲೆ ಕೆಡಹಿದ್ದನೋ, ಅದೇ ರೀತಿಯಲ್ಲಿಯೇ ಗಿರಿಧಾ ರಿಯನ್ನೂ ಬಂದಿಯನ್ನಾಗಿಮಾಡಿ ಕೆಡಹಿದನು. ಈ ಆಕ್ರ ಮಣದಿಂದ ಯಾವ ಶಬ್ದವೂ ಆಗಲಿಲ್ಲ. ಆದುದರಿಂದಲೇ ದೇವೇಂದ್ರನ ಕಾರೈಸಿದ್ದಿಯು ಸುಮುಖವಾಗಿ ನೆರವೇ ರಿತು, ಗಿರಿಧಾರಿಯ ಮೃತಪ್ರಾಯವಾದ ದೇಹವನ್ನು ಮುಂ ಚದ ಕೆಳಗೆ ಒತ್ತರಿಸಿದನು, ಆಬಳಿಕ ದೇವೇಂದ್ರನು ರೇವತಿಯಿದ್ದಲ್ಲಿಗೆ ಹೋಗಿ, ಅವಳ ಮುಖದಲ್ಲಿ ಮುಖವಿಟ್ಟು ನೋಡಿ, ರೇವತಿಯು ಪೂರ್ವದಂತೆಯೇ ಕೈರೋ ಘರಮಿನ ಆವೇಗದಿಂದ ಅಚೇತನಳಾಗಿರುವಳೇ ಹೊರತು, ಮೃತಳಾಗಿಲ್ಲವೆಂದು ತಿ ಆದುಕೊಂಡನು, ಹೆಚ್ಚಾದ ವ್ಯಸನಕ್ಕೆ ಆತನಿಗೇನೂ ಕಾ ರಣವಿರಲಿಲ್ಲ, ಹತಭಾಗ್ಯ! ನಿನ್ನ ದುರ್ದಿನವು ಇಂದಿಗೆ ಪೂರೈ ಸುವುದು; ಎಂದು ಮನದಲ್ಲಿಯೇ ಯೋಚಿಸಿಕೊಂಡನು. ಆಗ ಹೊರಗಿನಿಂದ ಜ್ವಲೆಯು ಗಿರಿಧಾರಿ, ಗಿರಿಧಾರಿ ಎಂದು ಕೂಗಿದಳು, ದೇವೇಂದ್ರನು ಗಿರಿಧಾರಿಯ ಕಂಠಸ್ಪರವನ್ನು ಅನು ಕರಣಮಾಡುತ್ತಾ, ಮತ್ತೇನಾಗಿರುವುದು ? ನೀನೇ ಇಲ್ಲಿಗೆ ಬರಬಾರದೆ? ಎಂದನು. ಜ್‌ಮಲೆಯು ಹೊರಗಿನಿಂದ ಇಲ್ಲಿಂದ-ಔಷಧದ ಪೆ ಟ್ಟಿಗೆಯನ್ನೂ ಬಟ್ಟೆ ಬರೆಗಳನ್ನೂ ಒಳಗೆ ತೆಗೆದುಕೊಂಡು ಹೋಗು, ಎಂದು ಹೇಳಿದ್ದನ್ನು ಕೇಳಿ, ದೇವೇಂದ್ರನು ಮೊದಲಿನಂತೆಯೇ ನಿನ್ನ ಬಟ್ಟೆ, ಪೆಟ್ಟಿಗೆ, ನೀನೇ ತೆಗೆದಿಡು,