ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&v ದೇ-ಹೇಳಿದವರಾರು? ಯಾವಾಗ ? ಶ್ರೀ-ನಾನು ಕೇಳಿ ಸುಮಾರು ಎರಡು ಗಂಟೆಯಾಗಿ ರಬಹುದು. ದೇ-ಹೇಳಿದವರಾರು? ಶ್ರೀ-ಒಬ್ಬ ಪೊಲೀಸಿನವನು. ದೇ-ಅವನೇನೆಂದು ಹೇಳಿದನು. ಶಿ-ಈಗ್ಗೆ ಎರಡು ಗಂಟೆಗಳ ಮುಂಚೆ ಒಬ್ಬ ಪ ಹರೆಯವನು ಇಲ್ಲಿಗೆ ಓಡಿಬಂದು, ಯಾವ ಬಬ್ಬ ಹೆಂಗ ಸು ತಮಗೆ ವಿಷವನ್ನು ಹಾಕಿರುವಳು, ತಾವು ಅಜ್ಞಾನದಿಂ ದ ಪೋಲೀಸ್ ಠಾಣಾದಲ್ಲಿ ಬಿದ್ದಿರುವಿರಿ, ತಮ್ಮ ಪ್ರಾಣವು ಉಳಿಯುವ ಹಾಗಿಲ್ಲವೆಂದು ಅಲ್ಲಿರತಕ್ಕವರೆಲ್ಲರೂ ಭಯಪ ಡುತ್ತಿರುವರು. ಆದುದರಿಂದಲೇ ನಮ್ಮ ಅತ್ತೆಮ್ಮನನ್ನು (ದೇವೇಂದ್ರನ ಹೆಂಡತಿಯಾದ ರೇವತೀದೇವಿಯು ನು) ಕರೆ ದುಕೊಂಡು ಬರಬೇಕೆಂದು ಹೇಳಿದನು, ದೇ-ಎಲ್ಲಿಗೆ ಹೋಗುವುದಕ್ಕೆ? ಶ್ರೀ-ಠಾಣಾಕ್ಕೆ' ದೇ-ಆತನೊಡನೆ ಅವಳು ಹೋದಳೆ? ಶ್ರೀ-ಇಲ್ಲ. ದೇ– ಈಶ್ವರ! ಇಂದಿಗೆ ನಾನೇ ಧನ್ಯ! ಶ್ರೀ-ನಮ್ಮತೆಯು ಆತನೊಡನೆಯೇ ಹೊರಡು ವುದರಲ್ಲಿದ್ದಳು, ಅಷ್ಟು ಹೊತ್ತಿಗೆ ಸರಿಯಾಗಿ ಶಚೀಂದ್ರ ನು ಬಂದನು. ದೇ-ಅದೇ ಸಮಯಕ್ಕೆ? ಶ್ರೀ-ಅಹುದು, ದೇ-ಒಳ್ಳೆಯದು, ಆಮೇಲೆ?