ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭ ದೇ-ಒಳ್ಳೆಯದು, ಈಗ ನೀನು ಹೊರಡು. ಶೀಶಚಂದ್ರನು ಹೊರಟು ಹೋದನು. (ಈ ಕಾಗದವನ್ನು ಓದು, ಎಂದು ದೇವೇಂದ್ರನು ಹೇಳಲಾಗಿ, ಶಚೀಂದ್ರನು ಕಾಗದವನ್ನು ತೆಗೆದುಕೊಂಡು, ತನೆಳಗೆ ತಾನೇ ಓದಿ 'ಮಮ, ಹಾಗಾದರೆ ತಾವು ಅಲ್ಲಿಗೆ ಹೋಗುವಿರಾ' ಎಂದು ಕೇಳಿದನು. ದೇ-ಅಹುದು, ಹೋಗದೇ ಇದ್ದರೆ ಆದೀತ. ಇ-ಹೋಗಿ ಏನು ಮಾಡುವಿರಿ? cಹೋಗದೇ ಮಾಡುವುದೇನು? ( ಹೊಗಿ ತಾನೇ ಮಾಡುವುದೇನು? (ಮಲೆಯು ಕಾಗದದಲ್ಲಿ ನಿಜವಾದುದನ್ನೆ ಬರೆ ದಿರುವಳು, ಇದರ ಸತ್ಯವೂ, ಆಕೆಯ ಉಳಿದ ಸತ್ಯದಂತೆಯೇ, (ಈ ಕಾಗದದಲ್ಲಿ ಅವಳು ಸತ್ಯವನ್ನೇ ಬರೆದಿರುವಳೆಂ ದು ನನಗೆ ನಂಬುಗೆಯುಂಟು, (ಹಾಗಾದರೆ ತಾವು ಅಲ್ಲಿಗೆ ಹೋಗುವಿರಿ? ಹೌದು, ಹೋಗುವೆನು, « ಅವಳು ತನ್ನನ್ನು ಕೊಲ್ಲುವಳೆಂದು ಪ್ರತಿಜ್ಞೆ ಮಾ ಡಿಲ್ಲವೇ? (ಅಹುದು, ಅದನ್ನು ನಾನು ಬಲ್ಲೆನು, ನನ್ನ ಮನದ ಲ್ಲಿರುವುದು, ತನ್ನೊಬ್ಬರನ್ನೇ ಅಲ್ಲ, ಅತ್ತೆಯನ್ನೂ, ಶ್ರೀಶನನ್ನೂ ಮತ್ತು ನನ್ನನ್ನೂ, ನಿಜ ಮಾವ ! ಇದು ಮಲೆಯ ಹೊಸತಂತ್ರವು,