ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆದನ್ನು ಚೆನ್ನಾಗಿ ನೆರವೇರಿಸಿ ಕೊಂಡುಬಾ, ಒಂದುವೇಳೆ ಈ ಜನ್ಮದಲ್ಲಿ ನನಗೂ ನಿನಗೂ ಪರಸ್ಪರ ದರ್ಶನವಾಗದೇ ಹೋದಲ್ಲಿ, ಸರ್ವಶಕ್ತಿವಂತನಾದ ಪರಮೇಶರನಿರುವನು. ಅವನು ನಿನಗೆ ರಕ್ಷಣೆಯನ್ನುಂಟು ಮಾಡುವನು, ಆ ವನು ನಿನಗೆ ಸಹಾಯಕನಾಗುವನು, ಅವನು ನಿನಗೆ ಮ? ಗಳವನ್ನುಂಟು ಮಾಡುವನು - ಹೊರಡು, ಶಚೀಂದ) ! ಹೊರಡು. ಶಚೀಂದ್ರನು ಬಾಡಿದಮುಖವುಳ್ಳವನಾಗಿ, ಮೂತನ್ನು ಹೆಚ್ಚಾಗಿ ಬಳೆಯಿಸದೇ, ಕಣ್ಣುಗಳಲ್ಲಿ ಕಾಣಿಸಿಕೊಂಡ ಕಂಬನಿಗಳನ್ನು ಅಲ್ಲಿಯೇ ತಡೆದುಕೊಂಡು, ಅಲ್ಲಿಂದೆದ್ದು ಹೊರಟು ಹೋದನು. ಸಂಪೂರ್ಣ೦