ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಠಕ ಮಹಾಶಯ, ಈ ನೋಟವು ಕಲ್ಪನಾತೀ ತನೆಂಬುದನ್ನು ಒಂದು ಸಲ ಯೋಚಿಸಿ ನೋಡಿರಿ, ಮೇ ಲ್ಯಾಗದಲ್ಲಿ ನೀಲವಾದ ಅಪಾರವಾದ ನಿರ್ಮಲಾಕಾಶದಲ್ಲಿ ಆ ನಂದಕರನಾದ ಚಂದ್ರನು ತನ್ನ ಜಗನ್ನೊಹನಾಸ್ತವೆನಿಸಿದ ಕಿರಣಗಳನ್ನು ಎಡೆವಿಡದೆ ಪಸರಿಸುತ್ತಿರುವನು. ನಕ್ಷತ್ರಗ ಳು ದೂರದಲ್ಲಿದ್ದುಕೊಂಡು ಮಿನುಗುತ್ತಿರುವುವು. ಗಿಡಗಳ ಮೇಲ್ಬಾಗದಲ್ಲಿರುವ ಎಲೆಗಳು ಮಂದಮಾರುತಾಂದೊಳಿತಗ ೪ಾಗಿ ನಲಿದಾಡುತ್ತಿರುವುವು ; ಹಿಂದೆ, ಮುಂದೆ, ಎರಡು ಪ ಕ್ಯಗಳಲ್ಲಿಯೂ, ಮೇಲೆ, ಕೆಳಗೆ, ಎಲ್ಲಿನೆಡಿದರೂ ನಿಕ್ಕಲ್ಲ. ಇಂತಹ ನಿಶ್ಚಬ್ದ ತೆಯಲ್ಲಿ ಶ್ಯಾಮಲತೆಯು ಭೂಮಿಯ ಮೇ ಲೆ ಬಿದ್ದು ಒದ್ದಾಡುತಿರುವಳು, ಕಂಪು, ಬಿಳುಪು, ಹಳದಿ ರಂಗಿನ ಹೂಗಳು ಅಲ್ಲಲ್ಲಿ ವಿಕಾಸನ್ನು ಖಗಳಾಗಿದ್ದುವು. ಅಂತಹ ನಿರ್ಜನವಾಗಿಯ, ನಿಶ್ಯಬ್ದವಾಗಿಯೂ, ಇರುವ ತೋಟದ ಮಧ್ಯದಲ್ಲಿ ದೇವೇಂದ್ರವಿಜಯನು ಅವಾಕ್ಕಾಗಿ ನಿಂತಿರುವನ್ನು ಆತನ ಇದಿರಿಗೆ ಜಮಲೆಯು ತನ್ನ ಸೆರಗನ್ನು ತೆಗೆದುಹಾಕಿ ಅವಿಚ್ಛಿನ್ನವಾದ ಬೆಟ್ಟಿಂಗಳಲ್ಲಿ ತನ್ನ ಪೀನ ನ್ಯ ತಗಳಾದ ಕುಚಗಳನ್ನು ಚಾಚಿದಳು. ದೇವೇಂದ್ರನು ಮನಕರಗಿದವನಾಗಿ ಎರಡು ಹೆಜ್ಜೆ ಹಿಂದಕ್ಕೆ ಸರಿದನು, ಆತನ ಸರ್ವಾಂಗವೆಲ್ಲವೂ ನಡುಗಿತು, ಆತನಪ್ರತಿಯೊಂದು ನರದಲ್ಲಿಯ ಕುದಿಯುತಿರುವ ರಕ್ತ ವುನದಿಯ ವೇಗದಲ್ಲಿ ಹರಿಯಲಾರಂಭಿಸಿತ್ತು. ದೇವೇಂದ್ರ ನು ಏನು ಮಾಡುವುದಕ್ಕೂ ತೋಚದವನಾಗಿ ಸುಮ್ಮನೆ ನಿಂತುಬಿಟ್ಟನು. ಆಮೆಲೆಯು, ದೇವೇಂದ್ರನು ಈ ರೀತಿಯಲ್ಲಿ ದಿಕ್ಕು