ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಕೊಂಬೆಗಳಲ್ಲಿ ಸ್ಟೇ ಗೊ ಆಡಿಸುತ್ತಿದ್ದ ಜನತದೃಷ್ಟಿಯನ್ನು ಮಧ್ಯಮೈಮರೆತು ಕೆಗಳ ಕಪಟ ನಿದ್ರೆಯನ್ನು ನಟಿಸಲಾರಂಭಿಸಿದನು. ಮೈಮರೆತು ನಿದ್ರೆಮಾಡುವರಂತ, ಶಚೀಂದ್ರನು ಮಧ್ಯೆ ಮಧ್ಯೆ ರಿಕೆಯನ್ನು ಹಾಕುತ ವೃಹಗಳ ಕೊಂಬೆಗಳಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ಪಕ್ಷಿಗಳ ಸ್ವಾಸ್ಥ್ಯಕ್ಕೆ ಭಂಗವನ್ನುಂಟುಮಾ ಡ ತೊಡಗಿದನು. ಆ ಅಪರಿಚಿತ ವ್ಯಕ್ತಿಯು ಬೇಗನೆ ಶಚೀಂದ್ರನಿದ್ದಲ್ಲಿಗೆ ಬಂದು, ಆತನ ಬೆನ್ನಿನಮೇಲೆ ಬಲವಾದದೊಂದು ಏಟನ್ನು ಕೊಟ್ಟನು. ಶಚಂದ್ರನು ಕಣ್ಣು ಮುಚ್ಚಿದವನಾಗಿಯೇ ಮ ತ್ತೂಂದು ಕಡೆಗೆ ಹೊರಳಿದನು' ಆತನ ಬೆನ್ನಿನ ಮೇಲೆ ಮ ತೊಂದು ಏಟುಬಿದ್ದಿತು. ಶಚೀಂದ್ರನು ಮುಚ್ಚಿದ ಕಣ್ಣು ಮುಚ್ಚಿದವನಾಗಿಯೇ, ನೀನಾರು, ದಾರಿ ಹಿಡಿದು ಹೋಗ ಬಾರದೇನಪ್ಪಾ, ಎಂದು ಅಸ್ಪುಟವಾಗಿ ಮಾತನಾಡಿದನು. ಪುನಃ ಏಟು ಮೊದಲಿಗಿಂತಲೂ ಅಧಿಕವಾಗಿ ಬೀಳೆ ಲಾರಂಭವಾಯಿತು. ಇದನ್ನು ತಡೆಯಲಾರದೆ, ಶಚೀಂದ್ರ ನು, ಪೋಲೀಸಿನವನೇನಪ್ಪಾ, ನಾನು ಎಲ್ಲಿಯೂ ಒಂದು ಗಿಡದ ಕೆಳಗೆ ಒಂದೇ ಪಕ್ಕದಲ್ಲಿ ಮಲಗಿ ನಿದ್ರೆ ಮಾಡುತಿದ್ದ ರೂ, ನಿನ್ನ ಕೋಮಲವಾದ ಪ್ರಾಣಿಗಳು ಅದನ್ನು ಸಹಿಸ ಲೊಲ್ಲದೆಂದು ತೋರುವುದು. ನೀನು ಮೇಲೆ ಮೇಲೆ ಹೊ ಡೆಯುತ್ತಿರುವುದು ನೋಡಿದರೆ, ನಾನೇನೂ ತಪ್ಪು ಮಾಡಿ ದವನಂತೆ ಕಾಣುತ್ತದೆ, ನನ್ನಲ್ಲಿ ಅದೇನು ತಪ್ಪು ನೀನುಕಂ ಡದ್ದು ? ಎಂದನು. ಆಗಂತುಕ-ಎಲೆ, ನಾನು ಪೋಲೀಸ್ ಗಿಲೀಸ್ ನವನಲ್ಲ.