ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ಡು ಹೋಗಿದ್ದನು. ಅದು ಬೆಳ್ಳಂಗಳಲ್ಲಿ ಅಷ್ಟು ವಿಶದ ವಾಗಿ ಕಾಣದಿರಲು, ಶಚೀಂದ್ರನು ಕೋಲನ್ನು ಕೆಳಗೆ ಕ ಡಹಿ ಅದನ್ನು ಎತ್ತುವ ನೆಪದಿಂದ ದೇವೇಂದ್ರನ ಮಾರ್ಗವ ನ್ನು ಕಂಡುಹಿಡಿಯಲಾರಂಭಿಸಿದನು. ಪದೇ ಪದೇ ತನ್ನ ಉದ್ದೇಶವು ನೆರವೇರುತ್ತಿರುವುದೆಂದು, ಅವನು ತನ್ನಲ್ಲಿ ತಾ ನೇ ಸಂತೋಷ ಪಡುತ್ತಿದ್ದನು. ಆ ಸಂತೋಷದ ಅಧಿಕಾರಿ ಕವೇ ಮುಗುಳು ನಗೆಯ ವ್ಯಾಜದಿಂದ ಅವನ ಮುಖವುಂಡ ಲದಲ್ಲಿ ನಲಿದಾಡುತ್ತಿದ್ದಿತು. ನಾಲ್ಕನೆಯ ಸಂಧಿ, (ಅಪೂರ್ವ ಭಾವಾವಿರ್ಭಾದ) ಕೊಂಚಹೊತ್ತಿನ ಮೇಲೆ, ದೇವೇಂದ್ರನು ಜುಮಲೆ ಯ ಸಂಗಡ, ಅಂಧಕಾರಾವೃತವಾಗಿದ್ದ ಮನೆಯ ಮುಂಭಾಗ ದಲ್ಲಿ ಬಂದು ನಿಂತನು. ಆಗ ಮಲೆಯು ದೇವೇಂದ್ರನನ್ನು ಕುರಿತು-ಈ ಮನೆಯೊಳಗೆ ನೀನು ನನ್ನ ಜತೆಯಲ್ಲಿ ಬರಬೇ ಕಾಗಿರುವುದು, ಎಂದಳು. ಆಗಬಹುದು. ಇಲ್ಲಿಯೇ ರೇವತಿಯೂ ಇರುವಳು. ಒಳ್ಳೆಯದು, ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋ ರಡು, ಈಗಾಗಲಾರದು, ನಾನು ನಿನ್ನನ್ನು ಅಲ್ಲಿಗೆ ಕರೆದು ಕೊಂಡು ಹೋಗುವುದಕ್ಕೆ ಮೊದಲು, ನಾನು ನಿನ್ನೊಡನೆ ಬಹಳವಾಗಿ ಮಾತನಾಡಬೇಕಾಗಿರುವುದು, ನಡೆ ; ನನ್ನನ್ನು ಅನುಸರಿಸಿಕೊಂಡೇ ಬಾ.