ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ೪ಾಗುವನೋ, ಅಂಥ ಮಾರ್ಗವೊಂದನ್ನು ನನಗೆ ತೋರಿ ಸು. ನೀನು ನನ್ನನ್ನು ಯಾವಾಗಲೂ ಪಿಶಾಚೀ, ರಾಕ್ಷಸೀy ಶಾಕಿನೀ, ಢಾಕಿನೀ, ಎಂದು ಮುಂತಾಗಿ ಕರೆದಿರುವೆ. ಅಂ ತಹ ನನ್ನನ್ನು ದೇವತಾಸ್ವರೂಪಳನ್ನಾಗಿ ಮಾಡು, ಜಮೆಲೆ ! ನಿನ್ನೀಮಾತಿಗೆಲ್ಲ ಅರ್ಥವೇನು ? ದೇವೇಂದು! ನನ್ನ ಪ್ರಾರ್ಥನೆಗೆಲ್ಲ ಸರಿಯಾದ ಉತ್ತರ ಕೊಡು. ನಿಜವಾಗಿಯೂ ಹೇಳು, ನಾನು ತ್ರಿಪುರ ಸುಂದ ರಿಯಲ್ಲವೇ ? ನೀನು ಮಹಾ ತ್ರಿಪುರಸುಂದರಿಯೇ ಸರಿ, ಅದನ್ನು ಯಾರು ತಾನೇ ಅಲ್ಲವೆನ್ನುವರು? ನಾನು ಎಂತಹ ಮಹಾ ಪುರಸುಂದರಿ ? ನಿನ್ನ ಹೃದಯಂತರ್ಗತವಾದ ಮಹಾಪಾಪಕಾರಗ ಳು ನಿನ್ನ ಮುಖದಲ್ಲಿ ಪ್ರತಿಫಲಿತವಾಗದಿರುವುದಾದರೆ, ನೀ ನೇ ಪರಮಸುಂದರಿ, ನಿನ್ನಂತಹ ಸುಂದರಿಯಾದ ವತ್ತೂ ಬ್ಬ ಹೆಂಗಸು ಈ ಬ್ರಹ್ಮಾಂಡದಲ್ಲಿರುವಳೋ, ಇಲ್ಲವೋ. ತಿಳದು ಹೇಳುವುದಕ್ಕಾಗುವುದಿಲ್ಲ. ನಾನು ಮನೆ.೧ರಗಿಂತಲೂ ಸುಂದರಿಯೆ ? ಸಂದೇಹವಿಲ್ಲದೆ, ರೇವತಿಗಿಂತಲೂ ? ನೀನು ರೇವತಿಗಿಂತಲೂ ಸುಂದರಿ. ನೀನು ಸುಂದರಿಯ ಸೌಂದರವನ್ನು ಪ್ರೀತಿಸು ವುದಿಲ್ಲವೆ ? ಸುಂದರಿಯ ಸೌಂದರ್ಯವನ್ನು ನಾನು ಪ್ರಶಂಸ ಮಾಡುವೆನೇ ಹೊರತು, ಅದನ್ನು ನಾನು ಪ್ರೀತಿಸುವುದಿಲ್ಲ,