ನನ್ನನ್ನು ಪ್ರೀತಿಸಿರುವರು. ನಾನು ಪ್ರತಿಯಾಗಿ ಪ್ರೀತಿಸು ವುದಕ್ಕೆ, ಅವರಲ್ಲಿ ನಿನಗೆ ಸಮನಾದವನೊಬ್ಬನೂ ಇಲ್ಲವೆಂ ದು ವ್ಯಸನಪಡುವೆನು. ನಿನ್ನನ್ನು ನೋಡಿದ ಮಾತ್ರದಿಂದ ಲೇ, ನನ್ನ ಹೃದಯವು ಕರಗಿ ನೀರಾಗಿ ಹೋಗುವುದು, ನೀ ನು ಮಾತ್ರ ನನ್ನನ್ನು ಪ್ರೀತಿಸುವುದಿಲ್ಲವೆಂದು ಹೇಳಿ ಬಿಟ್ಟೆ ನೀನು ನನ್ನನ್ನು ಪ್ರೀತಿಸುವುದು ಹಾಗಿರಲಿ, ನೀನು ನನಗೆ ಶತ್ರು-ಪರಮಶತ್ತು. ಹೀಗಿದ್ದರೂ ನನ್ನ ಪ್ರಾಣವು ನಿನ್ನ ಪಾದ ಮೂಲದಲ್ಲಿ ಆಶ್ರಯವನ್ನು ಹೊಂದಲು ತತ್ತರಗುಟ್ಟು ರುವುದು, ನನ್ನ ಆಶಾಲತೆಯು ನಿರಾಶ್ರಯವಾದುದೆಂದು ನಾನು ಮೊದಲೇ ತಿಳಿದುಕೊಂಡಿದ್ದೆನು. ಅದು ಈಗ ನಿಷ್ಟ ಲವೆಂದು ಕಂಡುಬಂದು ದರಿಂದ, ನಾನು ನಿನ್ನನ್ನು ಕೊಲ್ಲು ವುದಾಗಿ ಪ್ರತಿಜ್ಞೆ ಮಾಡಿರುವೆನು, ನನ್ನ ಪ್ರತಿಜ್ಞೆಯನ್ನು ನಾ ನು ಈಗಲೇ ನೆರವೇರಿಸಿಕೊಳ್ಳುವುದಾದರೆ ಕಾಲಕ್ರಮದ ಲ್ಲಿಯಾದರೂ ನಿನ್ನ ಹೆಸರು ಮರೆತುಹೋಗಿ ನನಗೆ ಮನೆ ಕ್ಯಾಂತಿಯೆಂಬುದು ಉಂಟಾಗಬಹುದು ' ಇಲ್ಲದಿದ್ದರೆ ನನ್ನ ಈ ಅಂತಸ್ವಾಸವು ನನ್ನನ್ನು ಸುಟ್ಟು ಬ೦ದಿ ಮಾಡಿ ಬಿಡು ವುದು. ದೇವೇಂದ್ರ ! ನಾನೀಗ ನಿನ್ನನು ಕರೆಯಿಸಿದುದು ಏತಕೆಂಬುದನ್ನು ಬಲ್ಲೆಯ ? ನಿನ್ನೊಡನೆ ನಾನು ಕರಾರು ಮಾಡಿಕೊಳ್ಳಬೇಕೆಂದಿರುವೆನು. ಆದೇನು, ಹೇಳು ? ನನ್ನ ಮಾತನ್ನು ನೀನು ನೆರವೇರಿಸಿ ಕೊಡಬಲ್ಲ ಯೆಂದು ನಾನು ದೃಢವಾಗಿಯೂ ನಂಬಿರುವೆನು. ನಿನ್ನ ಮಾತನ್ನು ನಾನು ನೆರವೇರಿಸಿ ಕೊಡುವುದರಿಂದ ನನಗೆ ಆವ ವಿಧವಾದ ತೊಂದರೆಯೂ ಉಂಟಾಗದಿದ್ದಲ್ಲಿ
ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೬
ಗೋಚರ