ಪುಟ:ಮಾಲತಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂರನೆಯ ಪರಿಚ್ಛೇದ

೨೧

ತಲೂ ನನ್ನ ಪ್ರಾಣವು ಹೋಗಿದ್ದರೆ ಚೆನ್ನಾಗಿದ್ದಿತು. ಎಷ್ಟೋಪುಣ್ಯವನ್ನು ಮಾ
ಡಿ ಹೊಂದಿರುವ ಸ್ವಾಮಿಯನ್ನು ಸುಖಪಡಿಸಲಾರದೆಹೋದೆನು. ನನಗೆ ಸಲು
ವಾಗಿ ನಿಮಗೆ ಇಚ್ಚು ಕಷ್ಟ! ” ಎಂದು ಹೇಳಿದಳು. ಅವಳ ಕಣ್ಣಿಂದ ಎರಡು
ಬೊಟ್ಟು ನೀರುಬಿದ್ದಿತು. ರಮೇಶನು ನೋಡಿ, “ಶೋಭನೆ! ಅದೇನು,ಪುನಃ
ಕಷ್ಟ ಬಂದಿತು! ಪ್ರಪಂಚದಲ್ಲಿ ಈಗ ನನ್ನ ಹಾಗೆ ಮತ್ಯಾರೂ ಸುಖಿಯಲ್ಲ.
ನಿನ್ನ ಮೊದಲಿನ ಮನಸ್ಸು ಬದಲಾಯಿಸಿತು. ನಿನ್ನ ಆನಂಬಿಕೆಯು ಹೋ
ಯಿತು.ಮತ್ತಾವ ಕಷ್ಟ ಬಂದರೂ ಲಕ್ಶ್ಯ ಮಾಡೆನು' ಎಂದು ಹೇಳುತ್ತಿರು
ವಾಗ ರಾತ್ರಿಯ ನಿಸ್ತಬ್ದತೆಯು ಧಂಗವಾಗಿ ದೂರದಲ್ಲಿ ಗಗನವು ಸಂಗೀತ
ಧ್ವನಿಯಿಂದ ತುಂಬಿತು.ರಮೇಶನು ಧ್ವನಿಯಿಂದ ಮಾಲತಿಯೆಂದು ತಿಳಿದನು.
ಅಷ್ಟು ರಾತ್ರಿಯಾದರೂ ಮಾಲತಿಯು ಮನೆಗೆ ಬಂದಿರಲಿಲ್ಲ. ಒಬ್ಬಳೇ ತಿರು
ಗಾಡುತ್ತಿದ್ದಾಳೆ. ರಮೇಶನು ಆಶ್ಚರ್ಯಪಟ್ಟು, ಶೋಭನ! ಮಾಲತಿಯು
ಮನೆಗಿನ್ನೂ ಬಂದಿಲ್ಲ. ಒಬ್ಬಳೇ ತಿರುಗಾಡುತ್ತಿದ್ದಾಳೆ ಎ೦ದು ಹೇಳುತ್ತಿ
ದ್ದ ಹಾಗೆ ಸ್ವಲ್ಪ ನಕ್ಕು, “ ಶೋಭನೆ! ಅವಳಿಂದ ನಮಗೆ ಮತ್ತಷ್ಟು ತೊಂದ
ರೆಯೊ? ಎಷ್ಟು ಪ್ರೇಮವನ್ನು ತೋರಬೇಕೊ ನೊಡು ಎಂದನು.ಶೋ
ಭನೆಯು ನಾಚಿಕೊಂಡು, 'ನಿಜವಾಗಿಯೂ ಮಾಲತಿಯು ಬಹಳ ಒಳ್ಳೆಯ
ಹುಡುಗಿ, ಒಬ್ಬಳೇ ಹೊರಗೆ ಇದ್ದಾಳೆ, ಇಂದಿನಿಂದ ಚರ್ಯಗಳನ್ನೆಲ್ಲಾ
ನೋಡಿ, ಸಂಕೋಚದಿಂದ ಮನೆಗೆ ಬಂದಿಲ್ಲವೆಂದು ಕಾಣುತ್ತದೆ, ಅವಳಲ್ಲಿ
ನಾನು ಹೆಚ್ಚು ಅಪರಾಧಿಯಾಗಿದ್ದೇನೆ, ನಾನೇ ಹೋಗಿ ಅವಳನ್ನು ಕರೆತರು
ತ್ತೇನೆ, ನಾನು ಹೋಗಿ ಅವಳಲ್ಲಿ ಕ್ಷಮಾಪ್ರಾರ್ಥನೆಯನ್ನು ಮಾಡುತ್ತೇನೆ,
ನಾನು ನೂರಾರು ತಪ್ಪನ್ನು ಮಾಡಿದರೂ ಅವಳು ಕೋಪಿಸಿಕೊಳ್ಳುತ್ತಿರ
ಲಿಲ್ಲ. ಈ ದಿನ ಹೋಗಿ ಅವಳ ಕಾಲನ್ನು ಮುಟ್ಟಿ ಬೇಡಿ ಕೊಂಡರೆ ಮನ್ನಿಸ
ಲಾರಳೆ? ಎಂದಳು.
ರಮೇಶ --ಬೇಡ - ಹೊರಗೆ ಬಹಳ ಕತ್ತಲೆ. ಮಾಲತಿಯು ಎಲ್ಲಿ
ದ್ದಾಳೋ ಗೊತ್ತಾಗುವುದಿಲ್ಲ. ನೀನು ಹೋಗಬೇಕಾದ ಅವಶ್ಯಕವಿಲ್ಲ.
ನಾನೇ ಹೋಗಿ ಹುಡುಕಿಕೊಂಡು ಬರುವೆನು.
ಪುನಃ ಸಂಗೀತದ ಧ್ವನಿಯೆದ್ದಿತು. ತೆರೆದಿದ್ದ ಕಿಟಕಿಯಿಂದ ಶಬ್ಧವು
ಚೆನ್ನಾಗಿ ಕೇಳಿತು.ಇಬ್ಬರೂ ಸಂಗೀತವನ್ನು ಆಲೈಸಿ ಕೇಳಿದರು.