ಪುಟ:ಮಾಲತಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೨

ಮಾಲತಿ

ಪದ್ಯ-ಮನುಜರುಸಿರುಂ ಸುಳಿಯದಿಹ ನಿ|ಜ೯ನವೆನಿಸಿದರೆ ದೂರವೆನಿಸಿದ| ವವವಸೈದ
ಲ್ಕೊವ್ವಳೇ ಸನ್ನದ್ಧೆಯಾಗಿಹೆನ || ಮನದೊಳಿನ್ನೊಂದಾಸೆ ತಾನಿಲ್ಲೆ ನಗು ದಾಸೀನೆಯುವನಾಥೆಯು|
ಮೆನಿಸಿರುವೆನಿಲಿಂದಿದೋ ಪೊರಮುಟ್ಟು ನಿಂದಿಹೆನು||೧||

ಒಲುಮೆಯಂ ಪ್ರತಿದಾನದಾಪ್ರತಿ|ಫಲಗೊಳಿಸಲಿರ್ದಾಸೆಗಾದುದು ವಿಲಯನಕಟಾ ಮುಗಿದುದೆ
ಸ್ನೊಳಗಿರ್ದ ಸುಖದಾಸ||ನೆಲದೊಳಗೆ ಸುಖಪಡುವ ಪುಣ್ಯದ|ನೆಲೆಗಳಾಗಿರ್ಪರ ಸುಖವನಾ|ನಳಿಸೆ
ನೀವು ಸಾಕ್ಷಿಗಳಾಗಿರೆ ಈ ಜೋವಿರಾಜಿತ ಸೂರ್ಯಶಶಿತಾ ರಾವಳಿರ ಗಿರಿನದಿಗಳಿರ ವೃಕ್ಷಲತೆಗಳಿರಾ|
ಸೋವಿಗೊಳಗಾಗೆಲ್ಲಿ ಮಡಿದೊಡ ನೋವುವೊ ನೋಡುತ್ತಿ ರ್ಪೆನೊಲಿಸಿ|ನೀವು ಸುಖಪಡಿರೊಪ್ಪೆ
ಬಗೆ ಸಂತೋಷಿಸುವೆ ನಾನು| ೩ |(ಸೊ. ಅ.)
ಸಂಗೀತವು ಅವರ ಹೃದಯದ ತಲವನ್ನು ಮುಟ್ಟಿತು.ನಿಪಾದಮು
ಯವಾಗಿ ಗಗನವನ್ನು ಮುಟ್ಟಿ ಸೂದೆಯನ್ನು ಕರೆಯುತ್ತಿದ್ದಾ ಸಂಗೀತ
ವನ್ನು ಕೇಳಿ ರಮೇಶನು ಚಮಕಿತನಾದನು. ಗೊತ್ತಾಗದ ಕಾರಣದಿಂದ
ಅವನ ಹೃದಯವು ಚಂಚಲವಾಯಿತು. ಹೃದಯದಲ್ಲಾವದೋ ಒಂದು
ವೇವನೆಯುಂಟಾಯಿತು, ಎದ್ದು ಬಾಗಿಲ ತೆರದನು. ಕೂಡಲೇ ಗಾಳಿಯು
ಹೊಕ್ಕು ಉರಿಯುತ್ತಿದ್ದ ದೀಪವು ನೊಂದಿಹೋಯಿತು. ಮನೆಯು ಅಂಧ
ಕಾರಮಯವಾಯಿತು. ಕತ್ತಲೆಯಲ್ಲಿ ಶೋಭನೆಯು ಭಯಪಡುತ್ತಿರಲಿ
ಲ್ಲವಾದರೂ ಗೊತ್ತಿಲ್ಲದೇನೋ ಒಂದು ಭಯವುಂಟಾಗಿ ಅತ್ತಳು. ರಮೇ
ಶನು ಹಿಂದಿರುಗಿ ನೋಡಿದನು. ಶೋಭನೆಯು ನದಿಯಲ್ಲಿ ಬಿದ್ದಿದ್ದ ಸಂಗ
ತಿಯು ನೆನವಿಗೆ ಬಂದು ನಡುಗಿದನು. ಇದ್ದ ಹಾಗೆ ಸಂಗೀತವು ನಿಂತುಹೋ
ಯಿತು. ಆ ರಾತ್ರಿಯ ನಿಶ್ಯಬ್ದತೆಯು ತನ್ನ ಆಧಿಪತ್ಯವನ್ನು ಪ್ರಸಃ ಸಿಸ್ತರಿ
ಸಿಕೊಂಡಿತು. ಅದರೊಂದಿಗೆ ಒಂದು ಸ್ಥಿರವಾದ ವಿವಾದದ ಭಾವವು ರಮೇ
ಶನ ಹೃದಯವನ್ನು ಆವರಿಸಿಕೊಂಡಿತು. ರಮೇಶನು ವ್ಯಾಕುಲದಿಂದ ಆ
ಕತ್ತಲೆಯಲ್ಲಿ ಕತ್ತಲೆ ಕವಿದಿದ್ದಾ ನದಿಯ ತೀರಕ್ಕೆ ಓಡಿಬಂದನು. ಅವನ
ಮನಸ್ಸು ಏಕೆ ಅ೦ಥ ದಾರುಣವಾದ ವ್ಯಸನದಿಂದ ಭಾರಾಕ್ರಾಂತವಾ
ಯಿತೋ ಅದನ್ನರಿಯದೆಹೋದನು.
ಎಲ್ಲಿ ನೋಡಿದರೂ ಕತ್ತಲೆ, ದಿಗಂತವಾದ ಕತ್ತಲೆ, ನಿಶ್ಯಬ್ದ !
ಆಕಾಶದಲ್ಲಿ ಸಾವಿರಾರು ನಕ್ಷತ್ರಗಳು, ಆದರೂ ಆಕಾಶವೆಲ್ಲಾ ಕತ್ತಲೆ,
ಮರದ ಎಲೆ ಎಲೆಯಲ್ಲಿಯೂ ಲೆಕ್ಕವಿಲ್ಲವ ಮಿಂಚಿನ ಹುಳಗಳು, ಆದರೂ