ಪುಟ:ಮಿಂಚು.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

95

“ನನ್ನ ಸ್ಥಾನ ಹಾಗೆಯೇ ಉಳಿಯಿತು. ರಾತ್ರೆ ಮಾಡ್ತೀನಿ, ನೀರಿರುತ್ತಾ?”
ಎಂದ ಪರಶುರಾಮ.
"ಓಹೋ."
...ಕಿಷ್ಕಿಂಧೆಯ ಮುಖ್ಯಮಂತ್ರಿ ಬಿಳಿಯ ಬೇರೆ ಸೀರೆಯುಟ್ಟು ಅಣಿಯಾದಳು.
“ಟ್ಯಾಕ್ಸಿ ಬಂತಾ ?”
ಫೆರ್ನಾಂಡೀಸ್ ಮತ್ತೊಮ್ಮೆ ಮಿಲ್ಖಾ ಸಿಂಗ್ ಆದ. ಅವನ ಪುಣ್ಯ, ಒಳ್ಳೆಯ
ಟ್ಯಾಕ್ಸಿ ಸಿಕ್ಕಿತು. ಡ್ರೈವರಿಗೆ ವಿಳಾಸ ಗೊತ್ತಿತ್ತು, ಪರಶುರಾಮ ಮುಂದಿನ ಸೀಟಿನಲ್ಲಿ
ಕುಳಿತ,
“ಶ್ರೀಪಾದ ಆಚಾರ್ಯ, ರಾತ್ರೆ ವಿಶೇಷವೇನೂ ಬೇಡಿ.”
“ಸೆಕ್ರೆಟರಿ ಹೇಳಿದ್ದಾರೆ.”

***

ರಾಷ್ಟಪಕ್ಷದ ಕೇಂದ್ರ ಕಾರ್ಯಾಲಯಕ್ಕೆ ಸೌದಾಮಿನಿ ಅಪರಿಚಿತೆಯಲ್ಲ.
ಜಗದಲಪುರದಿಂದ ಬಂದು ಕೆಲ ತಿಂಗಳ ಕಾಲ ಆ ಕಟ್ಟಡದಲ್ಲೇ ದುಡಿಯುತ್ತಿದ್ದ
ಧುರೀಣಿ. ಆಗ ಅಲ್ಲಿನ ಎಲ್ಲರಿಗೂ ಆಕೆ ಸೌದಾಮಿನಿ ಬಹೆನ್ ಮುಂದೆ ಆ ಬಹೆನ್ ಜಿ
ಕಿಷ್ಕಿಂಧೆಯಲ್ಲಿ ಪಕ್ಷದ ನಾಯಿಕೆಯಾದುದು, ಚುನಾವಣೆಯ ಬಳಿಕ ಮುಖ್ಯಮಂತ್ರಿ
ಯಾದುದು ಸಹಜವಾಗಿಯೇ ಆ ಕಟ್ಟಡದಲ್ಲಿಯೂ ಸುದ್ದಿಯಾಗಿತ್ತು, ಆದರೆ ದ್ವಾರ
ಪಾಲಕ “ನಮಸ್ತೆ ಸೌದಾಮಿನಿ ಬಹೆನ್ಜಿ" ಎಂದ. ವಿಶಿಷ್ಟ ಗೌರವ ತೋರಿಸು
ತ್ತಿದ್ದೇನೆ ಎಂಬ ದೃಢ ನಂಬುಗೆಯಿಂದ ಪ್ರತಿವಂದನೆ ಎಂದು ಬಲಗೈಯನ್ನು ತುಸು
ಎತ್ತಿ, ನಸುನಕ್ಕು, ಸೌದಾಮಿನಿ ಮಹಡಿಯ ಮೆಟ್ಟಲುಗಳನ್ನೇರಿದಳು.
ಪರಶುರಾಮ ಒ೦ದು ಹೆಜ್ಜೆ ಹಿಂದೆ ಉಳಿದು, “ಅವರು ಚೀಫ್ ಮಿನಿಸ್ಟರು.
ಮಾತಾಜಿ ಅಂತ ಕರೀಬೇಕು" ಎಂದು ದ್ವಾರರಕ್ಷಕನಿಗೆ ಕಿವಿಮಾತು ಹೇಳಿದ.
“ತಪ್ಪಾಯ್ತು ಭಾಯಸಾಬ್, ತಾವು ಅವರ ಆಪ್ತ ಕಾರ್ಯದರ್ಶಿ ?"
"ಹೌದು.”
“ನೀವೂ ಮೇಲೆ ಹೋಗಿ..”
ನೂರಾರು ಧುರೀಣರ ಏಳು ಬೀಳುಗಳನ್ನು ಕಂಡಿದ್ದ ಹಳಬ ಬಾಗಿಲು ಕಾವಲಿನ
ಶೇರ್ಸಿಂಗ್, ಮೇಲೆ ಹೋದವರ ಕಡೆ ನೋಡಿ ಆತನ ಬಳಿ ಮೀಸೆಯ ಅಂಚು
ಕುಣಿಯಿತು.
ಪ್ರಧಾನ ಕಾರ್ಯದರ್ಶಿಯ ಕೊಠಡಿ ಭರ್ತಿಯಾಗಿತ್ತು, ಹಲಿಗೆಯ ಸೀಳುತೆರೆ
ದ್ವಾರದ ವಕ್ಷಸ್ಥಲವನ್ನು ಮುಚ್ಚಿತು, ಹೊರಗೆ ಪೀಠದ ಮೇಲೆ ಕುಳಿತಿದ್ದ ಯುವಕ