ಪುಟ:ಮಿಂಚು.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

96

ಮಿಂಚು



ಜವಾನನೊಬ್ಬ ಏಳಬೇಕೊ ಬೇಡವೊ ಎಂದು ಯೋಚನೆಗೀಡಾದಂತೆ ಕಂಡಿತು.
ಕಡೆಗೂ ಆತ ಎದ್ದ.
ಸೌದಾಮಿನಿ ಅಂದಳು :
"ನಕುಲ ದೇವ್ಜಿಯವರನ್ನು ಕಾಣಬೇಕು.”
“ಮೊದಲೇ ಭೇಟಿ ಗೊತಾಗಿದೆಯಾ ?”
"ಹೌದು."
“ಕಾರ್ಡ್ ಕೊಡಿ.”
ಪರಶುರಾಮ ಮುಖ್ಯಮಂತ್ರಿಯ ಕಾರ್ಡನ್ನು ತನ್ನ ಬ್ರೀಫ್ ಕೇಸಿನಿಂದ ತೆಗೆದು
ಕೊಟ್ಟ, ಜವಾನ ಅದನ್ನೋದಿ, ನಿರ್ವಿಕಾರ ಭಾವದಿಂದ, ಭೇಟಿಗೆ ಬಂದವರಿ
ಗೋಸ್ಕರವೇ ಹೊಸದಾಗಿ ಏರ್ಪಡಿಸಿದ್ದ ನೀಳ ಸೋಫಾಗಳತ್ತ ಬೊಟ್ಟು ಮಾಡಿ,
“ಕೂತ್ಕೋಳ್ಳಿ” ಎಂದ : ಕಾರ್ಡನ್ನು ಒಳಗೆ ಕೊಟ್ಟ ಬಂದ, ಎಲ್ಲ ಹೊಸ ವ್ಯವಸ್ಥೆ.
ಹೊರ ಹಜಾರದ ಮೂಲೆಯಲ್ಲಿ ಟೆಲಿಫೋನ್ ಆಪರೇಟರ್ ಕುಳಿತಿದ್ದ. ಇಂಟರ್
ಕಾಮ್ನಲ್ಲಿ ಸದು, ಮಾತು,ಸಹಕಾರ್ಯದರ್ಶಿ ಎಂದು ಬಾಗಿಲ ಬಳಿ ಹೆಸರು ಹಲಗೆ
ಇದ್ದ ಇನ್ನೊಂದು ಕೊ ಬರುತ್ತಿದ್ದುವು, ನಕುಲದೇವ್ ಯಾವನೋ
ಧುರೀಣನ ಮೇಲೆ ರೇಗಿ ಕೂಗಾಡುತ್ತಿದ್ದ, ಭೇಟಿಗೆ ಬಂದವನೂ ಏರು ದನಿಯಲ್ಲಿ
ಮಾತನಾಡಲು ಯತ್ನಿಸಿದ. ನಕುಲ್ ದೇವ್ ಗರ್ಜಿಸಿದ:
“ಇದೇನು ನಿಮ್ಮ ಜುಜುಬಿ ರಾಜ್ಯದ ವಿಧಾನಮಂಡಲ ಅಂದ್ಕೊಂಡ್ರಾ?
ಸ್ವರ ತಗ್ಗಿಸಿ !”
ಎರಡು ನಿಮಿಷ ಮೌನ. ಬೇರೊಂದು ಸ್ವರ ಮೆಲುದನಿಯಲ್ಲಿ ಅಂದಿತು:
“ಅವರಿಗೆ ಇನ್ನೊಂದು ಅವಕಾಶ ಕೊಟ್ಟು ನೋಡಬಾರದೆ ?'
“ಇದು ಮೂರನೇ ಅವಕಾಶ.. ನನಗೆ ನೇರ ಉತ್ತರಬೇಕು, ಸ್ಪಷ್ಟ ಉತ್ತರ
ಬೇಕು. ಉಡಾಫೆ ಮಾತಿನಿಂದ ಪ್ರಯೋಜನವಿಲ್ಲ."
ಸಂಬಂಧಪಟ್ಟ ವನು ಕೂಗಾಡಿದ :
ನೀವು ಹಟ ತೊಟ್ಟರೆ ಇದಿರಿಸ್ಬೇಕಾದೀತು.”
“ಬಂಡಾಯ! ಕಂಡಿದೀನಿ. ನೀವು ಹೊರಡಬಹುದು."
ಹೊರಬಂದವನು ಸೌದಾಮಿನಿಗೆ ಹೊಸಬ, ಜುಜುಬಿ ರಾಜ್ಯ' ಎಂದಿದ್ದರಲ್ಲ
ಎಂದಿದ್ದರಲ್ಲ ನಕುಲದೇವ್ ? ನಡುವಯಸ್ಕ, ಚಹರೆಯಿಂದ, ಈಶಾನ್ಯ ಪ್ರಾಂತದವನಿರಬೇಕು
ಎನಿಸಿತು ಕಿಷ್ಕಿಂಧೆಯ ಮುಖ್ಯಮಂತ್ರಿಗೆ.
ಒಬ್ಬೊಬ್ಬರಾಗಿ ಬೇರೆ ಮನೂವರು ಬ೦ದರು, ಕಾರ್ಡುಗಳು ಒಳ ಹೋದುವು.
ನಾಲ್ಕನೆಯ ವ್ಯಕ್ತಿ ಬಾಬ್ ಕತ್ತರಿಸಿದ ಲಲನೆ.
“ಒಂದೇ ನಿಮಿಷ, ಕೇವಲ ಒಂದು ನಿಮಿಷ" ಎಂದಳು ದ್ವಾರಪಾಲಕನೊಡನೆ.
ಮುಖದ ಯಾವ ಸಾಯುವನ್ನೂ ಮಿಸುಕಿಸದೆ ಆತನೆಂದ :