ಪುಟ:ಮಿಂಚು.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

97

“ಕ್ಷಮಿಸಿ. ಸಂಜೆ ಬನ್ನಿ."
ಆಕೆ ಬಂದ ದಾರಿ ಹಿಡಿದಳು
ನಕುಲದೇವರ ಕೊಠಯಿಂದ ಈಗ ಬೇರೆ ಧ್ವನಿಗಳ ಸಂವಾದ,
ಅಧ್ಯಕ್ಷರ ಕೊಠಡಿಯನೂ ಹೆಸರು ಹಲಗೆಯನೂ ಸೌದಾಮಿನಿ ಕುಳಿತಲ್ಲಿಗೆ ಕಾಣಿ
ಸುತ್ತಿದ್ದುವು ಮುಚ್ಚಿದ ಬಾಗಿಲು–ಜವಾನನಿಲ್ಲ. ದ್ವಾರದ ಮೇಲ್ಗಡೆ ಗೋಡೆ
ಯಲ್ಲಿ ಮೊಳೆಗಳನ್ನು ಆಧರಿಸಿ ನಿಂತಿತ್ತು ಗಾಂಧೀಜಿಯ ದೊಡ್ಡ ಚಿತ್ರ.
ಒಳಗಿನ ಸಂಭಾಷಣೆಯ ಮಧ್ಯೆ ಎರಡು ಮಿನಿಟುಗಳಿಗೊ೦ದರ೦ತೆ
ಫೋನ್ ಫೂತ್ಕಾರ. ಪರಿಚಿತ "ಹಲೋ."
ನಿನ್ನೆ ತನ್ನನ್ನು ಇದಿರ್ಗೊಂಡಿದ್ದ ವ್ಯಕ್ತಿಯನ್ನು ಕಾಣಲು ಕಾಯುವ ಸ್ಥಿತಿ
ಬಂತೆ ತನಗೆ ?- ಎಂದು ಸೌದಾಮಿನಿಗೆ ವಿಸ್ಮಯ.
ಒಳಗಿನಿಂದ ಒಬ್ಬ ಹೊರ ಬ೦ದೊಡನೆ ಜವಾನ, 'ಇನ್ನ ನೀವು' ಎನ್ನುವಂತೆ
ಸೌದಾಮಿನಿಯತ್ತ ಬೊಟ್ಟು ಮಾಡಿದ. ಸೌದಾಮಿನಿಯ ದಿಲ್ಲಿ ಪ್ರಭಾವದ ಬಗ್ಗೆ
ಅದ್ಭುತ ಚಿತ್ರವನ್ನು ಕಲ್ಪಿಸಿಕೊಂಡಿದ್ದ ಪರಶುರಾಮ ಸ್ವಲ್ಪ ವಿಷಣ್ಣನಾಗಿ ಮುಖ್ಯ
ಮಂತ್ರಿಯತ್ತ ನೋಡುತ್ತ ಎದ್ದುನಿಂತ.. “ನೀನು ಕೂತ್ಕೋ” ಎಂದಳು ಮುಖ್ಯ
ಮಂತ್ರಿ, ಬ್ರೀಫ್ಕೇಸನ್ನು ಅವನಿಂದ ಪಡೆದು.
ಗರ್ಜಿಸಿದ ರೇಗಾಡಿದ ನಕುಲದೇವ್ ಒಳಗಿರಲಿಲ್ಲ, ಆತ ಚಂಗನೆದು ಕೈ
ಕುಲುಕಿ ಸೌದಾಮಿನಿಯನ್ನು ತನ್ನ ಮಗ್ಗುಲು ಕೊಠಡಿಗೆ ಒಯ್ದ , ಇಂಟರ್ಕಾಮ್
ನಲ್ಲಿ “ಎರಡು ಕಾಫಿ" ಎಂದ.
“ನೋಡಿದಿಯಾ ಕಾರಾಲಯ ಈಗ ಹೇಗೆ ಕಾಣಿಸ್ತಿದೆ?"
“ಆಳುವ ಪಕ್ಷದ ಗುಂಡಿಗೆ ಎಂದರೆ ಹೀಗೆ ಕೆಲಸ ಮಾಡಬೇಕು!”
“ದೇವಿಯನ್ನು ಸ್ವಲ್ಪ ಕಾಯಿಸಿದೆ."
“ರುಬ್ಬುಗುಂಡು ಶಬ್ದ ಕೇಳಿಸ್ತಿತ್ತಲ್ಲ, ಮಜವಾಗಿತ್ತು."
“ಅಸ್ಸಾಂ ಪ್ರಾಂತ ಘಟಕದ ಕಾರ್ಯದರ್ಶಿ: ಶುದ್ಧ ನಾಲಾಯಕ್,"
"ನನ್ನ ಹೆಸರು ಲಾಯಕ್ ಲಸ್ಟಿನಲ್ಲಿದಯೊ
"ರಾಷ್ಟ್ರದಲ್ಲೇ ನೀನು ಮಾಣಿಕ್ಯ, ನೀನು ಯೋಗಾಸನ ಮಾಡೋದನ್ನ
ನೋಡಬೇಕೂಂತಿತ್ತು, ಅದಕ್ಕೋಸ್ಕರವೆ ಬೆಳಗ್ಗೆ ನಾನು ಬೇಗನೆ ಎದ್ದೆ."
“ಆಸೆ ಬುರುಕ! ನಿಜ ಎಂದರೆ, ಪೀಠಸ್ಥಳಾದ ಮೇಲೆ ಮೊದಲಿನಷ್ಟು ಕ್ರಮ
ಬದ್ಧವಾಗಿ ಯೋಗಾಸನ ಆಗ್ತಿಲ್ಲ."
"ಛೆ! ಛೆ! ವೇಳಾಪಟ್ಟಿಗೆ ತಪ್ಪಬಾರದು-ಯಾವತ್ತೂ, ಅಲ್ದೆ , ಬಾಬಾಜಿ
ಅಂದಿದ್ದು ನಿನ್ನ ರಹಸ್ಯ ಇರೋದು ಯೋಗಾಸನದಲ್ಲಿ ಅಂತ.”
ಲೇಹ್ಯದ ವಿಷಯ ಇವನಿಗೆ ತಿಳಿಯದು ; ತಾನು ಬಾಯಿಬಿಡಬಾರದು
7