ಪುಟ:ಮಿಂಚು.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

98

ಮಿಂಚು



ಎಂದುಕೊಂಡು ಸೌದಾಮಿನಿ, ಬರಿದ್ದೆ ನಕ್ಕಳು. ಮೋಹಕವಾಗಿ. ನಕುಲದೇವ್
ಸೌದಾಮಿನಿಯ ಭುಜದ ಮೇಲೆ ಕೈ ಇರಿಸಿದ. ತುಟಿಗಳ ಮೋಹಕನಿಗೆ ಬರಿಯು
ವಂತೆ ಮಾಡಿದ.
ಹಲಗೆವಕ್ಷಸ್ಥ ಲಕ್ಕೆ ಟಕ್ಟಕ್ ಎಂದು ಬಡೆದು, ಅಪ್ಪಣೆ ದೊರೆತ ಬಳಿಕ,
ಕಾಫಿ ಫ್ಯಾಸ್ಟ್ ತಂದ ಹುಡುಗನನ್ನು ಜವಾನ ಒಳಗೆ ಬಿಟ್ಟ.
“ಭಲೆ ಖಿಲಾಡಿ ನೀವು."
"ಹಿಂದಿಯಲ್ಲಿ ಖಿಲಾಡಿ ಅಂದರೆ ಕ್ರೀಡಾಪಟು
“ನಮ್ಮದರಲ್ಲ ಧ್ವನಿ ಅದೇ, ಕ್ರೀಡೆ ಯಾವುದಾದರೇನು ?"
“ನೀನು ಟೆನ್ನಿಸ್ ಆಡೋದನ್ನು ನೋಡಬೇಕಲ್ಲ?”
“ನೋಡಿಯೇ ನೋಡ್ತೀರಿ. ಮೊದಲು ದಿಲ್ಲಿಯಲ್ಲಿ ಕಿಷ್ಟಿಂಧೆಗೊಂದಿಷ್ಟು
ಒಳ್ಳೆಯ ಜಾಗ ಕೋಡಿ. ದೊಡ್ಡ ಕಿಷ್ಕಿಂಧಾ ಭವನ ಕಟ್ಟಿ ಕಟ್ಟಿಸ್ತಿನಿ. ಕಂಟ್ರಾಕ್ಟರನ್ನು
ನೀವೇ ಗೊತ್ಮಾಡ್ಕೊಡಿ. ಈಗಿರುವ ಕುಟೀರ ನೋಡಿದೀರಲ್ಲ ? ಅವಮಾನ,ಅವಮಾನ !"
“ಅರ್ಜಿ ಕೊಟ್ಟು ಹೋಗು."
“ಹೂಂ.”
“ಅಂದ ಹಾಗೆ ಮಿನಿ, ನಿನ್ನ ಪ್ರಾಂತದಲ್ಲಿ ಪಕ್ಷದ ಸಮಿತಿಯನ್ನು ಪುನಃ ರಚಿಸ
ಬೇಕು, ಒಬ್ಬ ವ್ಯಕ್ತಿ ಎರಡೂ ಸ್ಥಾನಗಳಲ್ಲಿ ಇರಬಾರದು. ನಮಗೆ (ನಿನಗೆ+
ನನಗೆ) ಅನುಕೂಲವಾಗಿರೋ ಒಬ್ಬ ಧುರೀಣನ ಹೆಸರು ಹೇಳು.”
"ಯೋಚಿಸಿದೀನಿ. ಕೃಷ್ಣಪ್ರಸಾದ್ ಆ ಸ್ಥಾನಕ್ಕೆ ಯೋಗ್ಯ ಮನುಷ್ಯ."
“ನಿನ್ನ ಐ, ಸಿ.ಎಸ್. ನವನಿಗೆ ಕಾಗದ ಸಿದ್ಧ ಮಾಡಿದೀಯ ?"
“ಬ್ರೀಫ್ ಕೇಸಿನಲ್ಲಿದೆ.”
“ಚೌಗುಲೆಯನ್ನ ಇಲ್ಲಿ ಇವತ್ತು ರಿಲೀವ್ ಮಾಡಾರೆ. ಬೆಳ್ಳಗೆಯೇ ಆ ಕೆಲಸ
ಮಾಡಿದೆ."
“ಜಾಣಪ್ಪಗೊಂದು ಗರ್ವನರ್ ಪದವಿ ? "
“ಅಧ್ಯಕ್ಷರ ಜತೆ ಪ್ರಸ್ತಾಪ ಮಾಡು.. ಮುಂದಿನ ವ್ಯವಸ್ಥೆ ನನ್ನ ಜವಾಬು
ದಾರಿ. ಇನ್ನೊಂದು ವಾರದಲ್ಲಿ ಅವನು ಕೇರಳದಲ್ಲಿರಾನೆ. ಭಿನ್ನಮತೀಯರು
ಅಂಟಿಕೊಳ್ಳೋದಕ್ಕೆ ಆಮೇಲೆ ಯಾರೂ ಇರೋದಿಲ್ಲ...ಬಜೆಟ್ ಸಿದ್ಧಗೊಳಿಸೋದಕ್ಕೆ
ಮುಂಚೆ ನಿನ್ನ ಅರ್ಥಮಂತ್ರಿಯನ್ನೂ ಅರ್ಥಕಾರ್ಯದರ್ಶಿಯನ್ನೂ ಇಲ್ಲಿಗೆ ಕಳಿಸು.
ಯೋಜನಾ ಆಯೋಗದ ಜತೆ ಅವರು ಸಮಾಲೋಚನೆ ನಡೆಸಲಿ."
“ಚೌಗುಲೆಯ ಮೊದಲನೆಯ ಕೆಲಸವೇ ಅದು."
"ಅವನು ನಾಳೆ ಪೂರ್ವಾಹ್ನ ನಿನ್ನನ್ನು ಕುಟೀರದಲ್ಲಿ ಕಾಣಾನೆ. ಆಮೇಲೆ
ವಿಮಾನ ಏರ್ತಾನೆ.”