ಪುಟ:ಮಿಂಚು.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

103



ಜವಾನ ಬಂದು ಕೇಳಿದ :
"ದೀಪ ಹಾಕಲಾ ಮಾತಾಜಿ ?"
"ಹೂಂ."
ದೀಪಗಳು ಕಣ್ಣನ್ನು ಚುಚ್ಚಲಿಲ್ಲ. ಆದರೂ ಎವೆ ಮುಚ್ಚಿಕೊಳ್ಳಬೇಕು ಎನಿ
ಸಿತು. ಪರಶುರಾಮ ಸ್ನಾನ ಮುಗಿಸಿ ಬರುವುದರೊಳಗೆ ತಾನು ಎದ್ದು ಕುಳಿತಿರ
ಬೇಕು. ಸಿತಾರಾ ? ಊಹೂಂ. ಸರಿಯಲ್ಲ. ಬಾ, ಪರೀಕ್ಷಿಸಿ ನೋಡುತ್ತೇನೆ
ಎಂದರೆ ಪರಶುರಾಮ ಬೇಡ ಎನ್ನುತ್ತಾನೆಯೆ ? ಫೆರ್ನಾಂಡೀಸ್ ? ಛೆ! ಛೆ!
ಹೀಗಾದರೆ ಇಲ್ಲಿರುವ ಎಲ್ಲರನ್ನೂ ನಾನು ತೂಗಲು ಹೊರಟೇನು.... ಇದು ಒಳ್ಳೆಯ
ದಲ್ಲ. ತನಗೆ ಇದರಿಂದ ಒಳ್ಳೆಯದಾಗುವುದಿಲ್ಲ, ಅಲ್ಲ_ಕೆಡುಕಾಗುತ್ತದೆ.
ಆಕೆ ಮಂಚದಿಂದಿಳಿದು ಸೋಫಾದ ಮೇಲೆ ಕುಳಿತಳು. ಆರು ಗಂಟೆಯ
ಸುದ್ದಿ ಪ್ರಸಾರ ತಪ್ಪಿ ಹೋಗಿತ್ತು. ಒಂಭತ್ತು ಗಂಟೆಯದನ್ನು ಮರೆಯದೆ ಕೇಳ
ಬೇಕು. ನಾಳೆ ಬೆಳಗ್ಗೆ ಚೌಗುಲೆ ಬರಬಹುದು. ಮಧ್ಯಾಹ್ನ ಸಂವಾದ ಭೋಜನ,
ಸಂಪಾದಕರೊಂದಿಗೆ. ಒಂದಿಷ್ಟು ಟಿಪ್ಪಣೆ ತಯಾರಿಸಬೇಕು. ಶುಚಿರ್ಭೂತನಾದ
ಪರಶುರಾಮ ಬಂದ.
"ಪರಶು, ಫೆರ್ನಾಂಡೀಸ್ ಗೆ ಆ ಸಂಪಾದಕರ ಪಟ್ಟಿ ಕೊಡು_ಬ್ರೀಫ್ ಕೇಸಿನಲ್ಲಿದೆ.
ಅವನನ್ನು ಒಳಗೆ ಕರಿ."
ಫೆರ್ನಾಂಡೀಸ್ ಬಂದು ವಿನೀತನಾಗಿ ನಿಂತ. ಸಂವಾದ ಭೋಜನ__ ಅದೂ
'ಹೋಟೆಲ್ ಆಶೋಕ'ದಲ್ಲಿ-ವಿಷಯ ತಿಳಿದು, ಅವನಿಗೆ ಖುಶಿಯಾಯಿತು.
"ಆರೆಂಟು ಪತ್ರಕರ್ತರ ಪರಿಚಯ ನನಗಿದೆ, ಮಾತಾಜಿ."
"ಆ ಪಟ್ಟಿ ಓದಿ."
"ಇವರೆಲ್ಲ ಸಂಪಾದಕರು. ನನಗೆ ಅಪರಿಚಿತರು."
ಸೌದಾಮಿನಿ ನಕ್ಕಳು.
"ನಾವೆಲ್ಲ ಹನ್ನೆರಡು ಘಂಟೆಗೆ ಅಶೋಕದಲ್ಲಿರಬೇಕು. ಹತ್ತು ಘಂಟೆಗೆ
ಆಮಂತ್ರಿತರ ಮನೆಗಳಿಗೆ ಫೋನ್ ಹಾಕಿ ಲಂಚ್ ನೆನಪು ಮಾಡಿ. ಪ್ರತಿಯೊಬ್ಬರ
ಕಾರ್ಯಲಯಕ್ಕೆ ಒಂದು ಗಂಟೆಗೆ ಸರಿಯಾಗಿ ಟ್ಯಾಕ್ಸಿ. ಸ್ವಯಂಸೇವಕರು ಬೇಕಾಗ
ಬಹುದು. ನಕುಲದೇವ್ ರಿಗೆ ಫೋನ್ ಮಾಡಿ ಸಹಾಯ ಕೇಳಿ. ಈಗ ಪಕ್ಷದ ಕಚೇರೀಲಿ
ಇದ್ದಾರೆ."
ಫೆರ್ನಾಂಡೀಸ್ ಫೋನ್ ಮಾಡಿದ. ಉತ್ತರ ಬಂತು ;
"ನಿಮ್ಮ ಚೀಫ್ ಮಿನಿಸ್ಟರ್ ಅಲ್ಲಿಲ್ಲವಾ ?"
"ಇದಾರೆ."
"ಅವರನ್ನು ಕೊಡು."
ಸೌದಾಮಿನಿ ಎದ್ದು ಬಂದಳು: