ಪುಟ:ಮಿಂಚು.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

5

“ಆ ಮಠದ ಪರಿಸರ ನನಗಿಷ್ಟ. ತಪೋವನ ಎಂತಲೇ ಜನ ಅದನ್ನು ಕರೀತಾರೆ”
“ಹಾಗೇಂತ ಕೇಳಿದ್ದೇನೆ.”
“ಬಾಬಾಜಿ ದ್ರಷ್ಟಾರರು. ದೇಶದ ಐವತ್ತಾರು ಭಾಗಗಳಲ್ಲಿ ಐವತ್ತಾರು ಮಠ ಸ್ಥಾಪಿಸುವ ಗುರಿ ಅವರದು. ಕಿಷ್ಕಂಧೆಯ ಹೊಣೆ ನಿನ್ನದು ಅಂತ ಹೇಳಿ ನನ್ನನ್ನು ಇಲ್ಲಿಗೆ ಕಳಿಸಿದಾರೆ.”
“ನನ್ನಂಥ ಅಭಾಗಿನಿ ಮಠ ಸೇರಬಹುದೆ ?”
"ಇದರಲ್ಲಿ ಅಧ್ಯಾತ್ಮದ ಐಹಿಕದ ಸೂಕ್ಷ ಗಳು ಅಡಗಿವೆ. ನಿರ್ಧಾರ ಕೈಗೊಳ್ಳುವ ಅಧಿಕಾರವಿರುವುದು ಬಾಬಾಜಿಯೊಬ್ಬರಿಗೇ....”
ಅಭಾಗಿನಿ ಎಂದೆ. ಸ್ವಾಮೀಜಿಯ ಅನುಕಂಪದ ಸೆಲೆ ಎಷ್ಟು ಒಸರುತ್ತದೋ ನೋಡೋಣವೆಂದು. ಅವರ ಮುಖ ಮ್ಲಾನವಾಯಿತು. ಮಾತು ನಿಂತಿತು.
ಮುಂಬಯಿಗೆ. ಅಲ್ಲಿಂದ ಧರ್ಮೆಂದ್ರ ಬಾಬಾರಲ್ಲಿಗೆ. ಇಲ್ಲಿಯೇ ಇರು-ಎಂದು ಬಾಬಾಜಿ ಹೇಳಿದರೆ? ಎದುರುಗಡೆಯ ಮೇಲುಪೀಠದವನು ನಿದ್ದೆ ಹೋಗಿದ್ದಾನೆ. ತನಗೂ ನಿದ್ದೆ ಬರುತ್ತಿದೆ.
(“ಓ ದೇವರೇ ! ಧರ್ಮೇಂದ್ರ ಬಾಬಾ ನನ್ನ ಕೈ ಬಿಡದಂತೆ ನೋಡಿಕೊ.”).
ಗಡಕ್-ಗಡಕ್....
ಒಂದು ದಿನದ ಆಸರೆಗೆ ಕಾಣಿಕೆಯಾಗಿ ಸ್ವಾಮೀಜಿಗೆ ತನ್ನಲ್ಲಿದ್ದ ಬಂಗಾರದ ಒಂದೆಳೆ ಸರವನ್ನು ಕೊಡುವ ಯೋಚನೆ ಮೂಡಿತ್ತಲ್ಲ ತನ್ನಲ್ಲಿ ? ವಿವೇಕ ಕುಟುಕಿದ್ದರಿಂದ ಅದು ಉಳಿಯಿತು. ತನ್ನಂಥ ಹೆಂಗಸರನ್ನು ನೋಡಿಯೇ ಯಾವನೋ ಗಾದೆ ಕಟ್ಟಿರಬೇಕು : 'ಹೆಂಗಸರ ಬುದ್ಧಿ ಮೊಣಕಾಲಿನ ಕೆಳಗೆ....'
ಚಳಿಯಾಗುತ್ತಿದೆ. ಶಾಲಿನಿಂದ ಬುದ್ಧಿಯನ್ನು ಮುಚ್ಚಬೇಕು.

***

ಕಿಷ್ಕಿಂಧೆಯನ್ನು ಉತ್ತರ-ದಕ್ಷಿಣವೆಂದು ವಿಂಗಡಿಸುವ ಅವಳಿನದಿ ತುಂಗಭದ್ರಾ.
ಸೇತುವೆ ದಾಟುತ್ತಿದ್ದಂತೆ ಸೂರ್ಯರಶ್ಮಿ ಡಬ್ಬಿಯೊಳಕ್ಕೆ ಇಣಿಕಿನೋಡಿತು. ಪುಟ್ಟವ್ವ ಭಾರವಾಗಿದ್ದ ರೆಪ್ಪೆಗಳನ್ನು ಅರೆತೆರೆದು ಮತ್ತೆ ಮುಚ್ಚಿದಳು, ಭದ್ರವಾಗಿ. ಇನ್ನೊಂದು ಗುಟುಕು ನಿದ್ದೆ. ನಿಧಾನವಾಗಿ ಬಟ್ಟಲು ಬರಿದಾಯಿತು. ಪೂರ್ತಿ ಎಚ್ಚರ.
ಸಂಡಾಸ್ (ಇನ್ನು ಮುಂದೆ ಈ ಪದವೇ ಚಾಲೂ) ಸ್ವಚ್ಛವಾಗಬೇಕಾದರೆ ಹಸನೂರು ಬರಬೇಕು. ಆದರೆ ಈಗೊಮ್ಮೆ ಹೋಗಲೇಬೇಕಲ್ಲ ? ಗಾಂಧೀತಾತ ತನ್ನ ಪಾಯಖಾನೆ ಪಾತ್ರೆಯನ್ನು ತಾನೇ ಒಯ್ಯುತ್ತಿದ್ದರಂತೆ. ಸಂಡಾಸ್ ತೊಳೆಯು ತ್ತಿದ್ದರಂತೆ. ಆ ಮಟ್ಟಕ್ಕೆ ಏರಬೇಕಾದರೆ ಯಾವುದಕ್ಕೂ ಹಿಂಜರಿಯಬಾರದು.