ಪುಟ:ಮಿಂಚು.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



106

ಮಿಂಚು

"ಎಂಟೂಕಾಲು,"
"ನೀವಿನ್ನು ಹೊರಡಿ, ನಾಳೆ ನಿಮ್ಮ ಅತ್ಯುತ್ತಮ ಉಡುಪು ತೊಟ್ಕೊಂಡು
ಬನ್ನಿ. ಎಲ್ಲಿ ಆಚಾರ್ರು ? ನಮ್ಮನ್ನು ಉಪವಾಸ ಕೆಡವಬೇಕೂಂತ ಮಾಡಿದೀರೋ?"
"ಊಟ ರೆಡಿ ಅಂತ ಹೇಳೋದಕ್ಕೆ ಬಂದೆ."
ರಾತ್ರಿಗೆ ಸರಳ ಊಟ__ಎಂದು ತಿಳಿಸಿದ್ದ ಪರಶುರಾಮ,
ಸರಳವಾದರೂ ಅಚ್ಚುಕಟ್ಟಾಗಿತ್ತು.
"ಕುಡಿಯೋದಕ್ಕೆ ಬಾದಾಮಿ ಹಾಲು ಕೊಠಡಿಯಲ್ಲಿಟ್ಟಿದೀನಿ," ಎಂದ
ಶ್ರೀಪಾದ.
***
ಕುಟೀರದಲ್ಲಿ ಬೆಳಕು ಹರಿಯಿತು. ಸೌದಾಮಿನಿ ಯೋಗಾಸನ ನಿರತಳಾದಳು.
ಪತ್ರಿಕಾವಾಚನ, 'ನಾಳೆ ತನ್ನ ವಿಷಯ ಯಾರದರೂ ಒಂದಿಷ್ಟು ಬರೆಯಲು
ಬಹುದು.' ಉಪಾಹಾರದ ಬಳಿಕ ಚೌಗುಲೆ ಫೋನ್ ಮೂಲಕ ಕೇಳಿದ :
"ಸಿ, ಎಂ. ರ ಭೇಟಿಗೆ ಬರಬಹುದೆ ?"
"ಬರಲಿ" ಎಂದಳು ಸೌದಾಮಿನಿ, "ಬರಬಹುದಂತೆ," ಎಂದ ತಿಳಿಸಿದ
ಪರಶುರಾಮ.
ಬಂದವನು ಸೌಮ್ಯ ಮುಖಮುದ್ರೆಯ, ಆದರೆ ಗಡಸು ಹುಬ್ಬಿನ, ತೀಕ್ಷ್ಣ
ನೋಟದ ದೃಢ ಕಾಯ. ಮುಖ್ಯಮಂತ್ರಿಯನ್ನು ನೆಟ್ಟ ದೃಷ್ಟಿಯಿಂದ ನೋಡಿದ.
ಕಿಷ್ಟಿಂಧೆಯ ಸಿ.ಎಸ್. ಆಗಿ ತಾನು ನಿಯುಕ್ತನಾದ ದಾಖಲೆ ಪತ್ರ ತೋರಿಸಿದೆ,
ಸೌದಾಮಿನಿ ಹಳಬನಿಗೆ ತಾನು ಬರೆದದ್ದನ್ನು ಹೊಸಬನಿಗೆ ಓದಲು ಕೊಟ್ಟಳು. "ಈ
ಕಾಗದ ಐಸಿಎಸ್ ಗೆ ಕೊಡಿ," ಎಂದಳು.
"ಇಲ್ಲಿ ನನ್ನ ಅಗತ್ಯವಿಲ್ಲವಾದರೆ ಇವತ್ತೇ ಹೊರಡ್ತೇನೆ."
"ಆಗಲಿ, ವಿಮಾನ ನಿಲ್ದಾಣಕ್ಕೆ ಗೃಹ ಕಾರ್ಯದರ್ಶಿ ಬರ್ತಾರ್," ಎಂದು
ಹೇಳಿ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿಯತ್ತ ನೋಡಿದಳು, (ಕಲ್ಯಾಣ
ನಗರಕ್ಕೆ ಫೋನ್ ಮಾಡಲು ಸೂಚನೆ.)
"ಇವತ್ತು ಸ್ಥಳೀಯ ಸಂಪಾದಕರ ಭೇಟಿ; ನಾಳೆ ಬೆಳಗ್ಗೆ ಪ್ರಧಾನಿಯವರನ್ನು ಕಾಣ್ತೇನೆ." "ನಕುಲದೇವ್ಜಿ ಹೇಳಿದಾರೆ."
"ನಾಳೆ ಸಂಜೆ ನಾನೂ ಕಲ್ಯಾಣನಗರದಲ್ಲಿರ್ತೇನೆ."
"ಹಾಗದರೆ ಬರಲಾ?"