ಪುಟ:ಮಿಂಚು.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

110

ಮಿಂಚು

ಉಂಟು ಮಾಡಿತು. ಆದರೆ ಫೆರ್ನಾಂಡೀಸ್ ಹೇಳಿದ್ದ : ಇದು ಅತ್ಯಧಿಕ ಪ್ರಸಾರ
ವುಳ್ಳ ಹಿಂದೀ ದೈನಿಕ.”
ಧೈರ್ಯದಿಂದ ಮತ್ತೂ ಒಂದು ಮಾತು ಸೇರಿಸಿದ :
“ಉತ್ತರ ಪ್ರದೇಶದಲ್ಲಿ, ಬಿಹಾರಿನಲ್ಲಿ ಮಾತಾಜಿ ಇನ್ನು ಮನೆಮಾತು.”
“ಮುಂಬಯಿ ಪತ್ರಿಕೆಗಳಲ್ಲೂ ಲೇಖನಗಳು ಬಂದಿರಬಹುದು.”
“ಸಾಮಾನ್ಯವಾಗಿ ಮುಂಬಯಿ ಪತ್ರಿಕೆಗಳ ರಾಜಧಾನಿ ವರದಿಗಾರರು ಇಂಥಾ
ದ್ದನ್ನೆಲ್ಲ ಅನಾಮತ್ತಾಗಿ ಎತ್ತಿ ಪುಕ್ಕ ಬಾಲ ಸೇರಿಸಿ ತಮ್ಮ ಹೆಸರಲ್ಲಿ ಕಳಿಸಿಬಿಡ್ತಾರೆ.”
....ಪರಶುರಾಮ್ ತಗ್ಗಿದ ಸ್ವರದಲ್ಲಿ ಹೇಳಿದ :
“ಹತ್ತೂಕಾಲಾಯಿತು. ಟ್ಯಾಕ್ಸಿ ಬಂದಿದೆ. ಬಾಡಿಗೇದ್ದಲ್ಲ. ನಕುಲದೇವ್‌ಜಿ
ಕಳಿಸಿದ್ದು.”
“ಹತ್ತೂವರೆಗೆ ಹೊರಟರೆ ಸಾಕಲ್ಲ ?” ಎಂದು ನುಡಿದು ಸೌದಾಮಿನಿ ಒಳ
ಕೊಠಡಿಗೆ ಹೋದಳು, ನಿಲುವುಗನ್ನಡಿಯ ಮುಂದ ಹತ್ತು ಮಿನಿಟು ಕಳೆಯಲು,
ಸೌಂದಯ್ಯೋಪಾಸಕ ಪ್ರಧಾನಿಯ ದೃಷ್ಟಿಯಲ್ಲಿ ತಾನು ಹೇಗೆ ಕಾಣಿಸಬಹುದು ಎಂದು
ಲೆಕ್ಕ ಹಾಕಿದಳು, ರೇಷ್ಮೆ ಖಾದಿಯ ಬೇರೆ ಸೀರೆಯುಟ್ಟ ಬಳಿಕ,
ಟ್ಯಾಕ್ಸಿ ಹೊರಟಿತು.

***

...ಬರಲು ಸೂಚನೆ. ತೆರೆದ ಬಾಗಿಲಿನ ಮೂಲಕ ಒಳಕ್ಕೆ, ದೊಡ್ಡ ಮೇಜಿನ
ಬಳಿಗೆ ನಡೆದು ಮುಖ್ಯಮಂತ್ರಿ ಅಂದಳು:
“ನಮಸ್ತೆ.”
ಅವರು ಎದ್ದು (ಎಂಥ ಹಿರಿತನ !), “ನಮಸ್ತೆ,
ಬನ್ನಿ” ಎಂದು ಹೇಳಿ, ಕುಳಿತು
ಕೊಳ್ಳಲು ಆಸನ ಸೂಚಿಸಿದರು. ತಾವೂ ಆಸೀನರಾದರು.
ಕಾಲ ಟಿಕ್ ಟಿಕ್ ಎನ್ನುತಿತ್ತು. ಬಂದವಳ ಮೌನ ಸಹನೆಯಾಗದೆ ಪ್ರಧಾನಿ
ಅಂದರು :
“ಮೆಮೊರಾಂಡಂ ಏನಾದರೂ ಇದೆಯ ?”
“ಜಾಣಪ್ಪನವರ ಬಗ್ಗೆ....”
ಅದನ್ನು ಬಗೆಹರಿಸಿ ಆಯಿತು. ಅವರು ರಾಜ್ಯಪಾಲರಾಗಿ ಕೇರಳಕ್ಕೆ
ಹೋಗ್ತಾರೆ: ಬೇರೆ ಮುಖ್ಯ ಕಾರ್ಯದರ್ಶಿಯನ್ನೂ ಕೊಟ್ಟಿದ್ದೇವೆ. ಇನ್ನೇ
ನಾದರೂ ?”
“ಸರಕಾರೀ ಕಚೇರಿಗಳಿಗಾಗಿ ಸ್ಥಳ ಸಾಲದು. ಒಂದು ಕಾರ್ಯಸೌಧ ಕಟ್ಟಿಸ
ಬೇಕೂಂತಿದ್ದೇವೆ. ಅದರ ಶಂಕು ಸ್ಥಾಪನೆಗೆ ತಾವು ದಯವಿಟ್ಟು ಒಪ್ಪಬೇಕು.”