ಪುಟ:ಮಿಂಚು.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

111

ಮಿಂಚು

"ಯಾವಾಗ?"
“ಮಳೆಗಾಲ ಮುಗಿದ ಮೇಲೆ."
“ಬೇಕಾದಷ್ಟು ಸಮಯ ಇದೆ. ಆರು ತಿoಗಳು ಬಿಟ್ಟು ನೆನಪಿನ ಓಲೆ
ಕಳಿಸಿ.”
“ಧನ್ಯವಾದ. ಕಿಷ್ಕಿಂಧೆಗೆ ತಾವು ಕೆಲವು ದಿನಗಳ ಅಧಿಕೃತ ಭೇಟಿ ನೀಡಬೇಕೂಂತ
ಸಂಪುಟ ಬಯಸ್ತದೆ.”
“ಶಂಕುಸ್ಥಾಪನೆಗೆ ಬಂದಾಗ ರಾಜ್ಯದಲ್ಲಿ ಪ್ರವಾಸವನ್ನೂ ಮಾಡ್ತೇನೆ."
ಮತ್ತೆ ಕಾಲನ ಟಿಕ್ ಟಿಕ್.
ಪ್ರಧಾನಿಯೇ ಅಂದರು :
“ಪಕ್ಷದ
ಕೆಲಸ ರಾಜ್ಯಾಡಳಿತ ಎರಡೂ ಸುಲಲಿತವಾಗಿ ನಡೆಯಬೇಕು. ಪಕ್ಷದ ಅಧ್ಯಕ್ಷರನ್ನು ಕಂಡಿರಿ, ಅಲ್ಲವೆ?"
"ಹೌದು."
“ಗುಡ್, ಇವತ್ತೇ ಹೊರಡ್ತೀರಾ ?"
"ಹೌದು,"
“ಹೋಗ್ಬನ್ನಿ.ನನ್ನ ಶುಭಾಶಯ."
“ಧನ್ಯಳಾದೆ."
ಮುಖ್ಯಮಂತ್ರಿ ಹೊರಬಂದೊಡನೆ ಆಪ್ತ ಕಾರ್ಯದರ್ಶಿ ಬಾಲವಾದ,
“ಮಹತ್ವದ ಎರಡು ಯೋಜನೆಗಳಿಗೆ ಅಸ್ತು ಎಂದಿದ್ದಾರೆ. ಕಿಷ್ಕಿಂಧೆಯಲ್ಲಿ
ಈಗ ತಲೆನೋವಿನ ಯಾವ ಸಮಸ್ಯೆಗಳೂ ಇಲ್ಲವೆಂದು ಪ್ರಧಾನಿಯವರಿಗೆ ಸಂತೋಷ,
'ದೇಶದಲ್ಲಿ ನೀವು ಪ್ರಪ್ರಥಮ ಮಹಿಳಾ ಮಂತ್ರಿ, ಎಲ್ಲ ಕಣ್ಣಗಳೂ ನಿಮ್ಮ
ಮೇಲಿವೆ,"ಎಂದರು."
ಹೊರಗಿನ ದ್ವಾರದ ಬಳಿ ಫೆರ್ನಾಂಡೀಸ್ ಇದ್ದ. ಪರಶುರಾಮನ ಅಗಲಿದ
ಮುಖ. ಮುಖ್ಯಮಂತ್ರಿಯ ಶಾಂತವದನ ಫೆರ್ನಾoಡಿಸ್ಗೆ ಇಷ್ಟವಾದುವು.
“ಕುಟೀರದಲ್ಲಿ ಒಂದು ತಾಸಿದ್ದು ನೇರವಾಗಿ ವಿಮಾನ ನಿಲ್ದಾಣಕ್ಕೆ," ಎಂದ,
ಮೆಲ್ಲನೆ.
“ಸರಿ” ಎಂದಳು ಮುಖ್ಯಮಂತ್ರಿ, ಅವಳೂ ಆಪ್ತ ಕಾರ್ಯದರ್ಶಿಯೂ
ಬೇಗನೆ ಉಂಡರು. ಈ ದಿನವೂ ಶ್ರೀಪಾದ ಪಾಸ್. ಹೊರಡಲು ಅಣಿಯಾಗು
ತ್ತಿದ್ದಂತೆ ಶ್ರೀಪಾದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ.
ಐದು ಮಕ್ಕಳ ತಂದೆಯಿ೦ದ ಸ೦ಬಳ ಹೆಚ್ಚಳಕ್ಕೆ ಪ್ರಾರ್ಥನೆ.
"ಈಗ ಎಲ್ಲ ಸೇರಿ ೧೭೫ ಬರ್ತದೆ,ಮಾತಾಜಿ."
"ಈ ತಿಂಗಳಿನಿಂದ ಮೊದಲಾಗಿ ೨೫೦ ಮಾಡಿದೇನೆ."
ಪರಶುರಾಮನತ್ತ ಚಾಚಿದ ಕೈಗೆ ಪೆನ್ ಬಂತು.ಟೆಲಿಫ಼ೋನ್ ಇದ್ದ ಮೇಜಿನ