ಪುಟ:ಮಿಂಚು.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

112

ಮಿಂಚು

ಮೇಲೆ ಮನವಿಯನ್ನಿರಿಸಿ ಸೌದಾಮಿನಿ ಅನುಜ್ಞೆ ಬರೆದಳು: 'ಮನವಿಯನ್ನು ತಗೋ'
ಎಂದು ಆಪ್ತ ಕಾರ್ಯದರ್ಶಿಗೆ ಸಂಜ್ಞೆ ಮಾಡಿದಳು. ಶ್ರೀಪಾದನ ಕಣ್ಣುಗಳು
ಮಂಜಾದವು. ಅವನು ಮಾತಾಜಿಯ ಪಾದಗಳಿಗೆ ಎರಗಲು ಹೋದ: ಫೆರ್ನಾಂಡೀಸ್
ಮತ್ತು ಸಿತಾರಾರಿಗೂ ಅನಿಸಿತು, ತಾವೂ ಮನವಿ ಸಲ್ಲಿಸಬೇಕೆಂದು...ಸಿದ್ದರಾಗಿದ್ದ
ಅಂಗರಕ್ಷಕರು ಈ ದೃಶ್ಯಕ್ಕೆ ಸಾಕ್ಷಿಗಳಾದರು:
ನಿಲ್ದಾಣಕ್ಕೆ ನಕುಲದೇವರ ಫೋನ್ ಬಂತು. ಅವರು ಹೇಳಿದ್ದು ಇಷ್ಟೆ ;
“ಶುಭ ಪ್ರಯಾಣ, ಕ್ವೋಟ ತಿಂಗಳಿಗೆ ಒಂದು ಕೋಟಿ.”
“ಬೈ ಬೈ."
... ವಿಮಾನ ನಿಲ್ದಾಣದಲ್ಲಿ ವಿ, ಐ, ಪಿ. ಕೊಠಡಿಯಲ್ಲಿ ವಿರಮಿಸಲು ವೇಳೆ
ಇರಲಿಲ್ಲ,
...ಕಲ್ಯಾಣನಗರದತ್ತ ಹಾರುತ್ತ ಸೌದಾಮಿನಿ ಯೋಚಿಸಿದಳು : ಒಂದು
ಕೋಟಿ ಪ್ರತಿ ತಿಂಗಳೂ ಕಷ್ಟದ ಬಾಬು. ವಿಶ್ವ ಬ್ಯಾಂಕ್, ಅಂತರ ರಾಷ್ಟ್ರೀಯ
ನಿಧಿ ಇವುಗಳಿಂದ ಹಣ ದೊರೆಯುವಂಥ ಭಾರೀ ಯೋಜನೆಗಳನ್ನು ರೂಪಿಸಬೇಕು:
ಕೇಂದ್ರದಿಂದ ಬರುವ ಅನುದಾನದಲ್ಲಿ ಸ್ವಲ್ಪ ಭಾಗವನ್ನು ಇಲ್ಲಿನ ವಿಶೇಷ ವೆಚ್ಚಕ್ಕಾಗಿ
ಉಳಿಸಿಕೊಳ್ಳುವುದಗತ್ಯ. ನಿಧಿ ಸಂಗ್ರಹ ಪ್ರತಿಯೊಬ್ಬ ಮಂತ್ರಿಯ ಪಾಲೂ ಇಷ್ಟಿಷ್ಟು
ಎಂದು ಗೊತ್ತು ಪಡಿಸಿದರಾಯಿತು. ಯಾರಾದರೂ ಗೊಣಗಿದರೆ, ಮಂತ್ರಿ
ಮಂಡಲವನ್ನು ಪುನರ್‌ ರಚಿಸುವುದೇ ಸರಿ !
ಲೋಕದ ಈ ಜಂಜಡದಲ್ಲಿ ಧರ್ಮಕಾರ್ಯ ಮರೆಯಬಾರದು. ಪ್ರಧಾನಿ
ಯವರನ್ನೇನೋ ಪ್ರವಾಸಕ್ಕೆ ಕರೆದೆ. ಆದರೆ, ಬಾಬಾಜಿ ಕಲ್ಯಾಣನಗರಕ್ಕೆ ಬರು
ವುದು ಎಂದು ? ಪ್ರಧಾನಿಯ ಭೇಟಿಗೂ ಮುಂಚೆ ಅದನ್ನು ಏರ್ಪಡಿಸಬೇಕು,
ನಸುಕಿನ ಯೋಗಾಸನದಿಂದ ರಾತ್ರಿಯ ಲೇಹ್ಯದವರೆಗೆ ಹದಿನಾರು ಗಂಟೆಗಳ ಅವಧಿ
ಯಲ್ಲಿ ಎಷ್ಟು ಕೆಲಸ ತಾನು ಮಾಡಬಹುದು ? ದೇಶದ ಇತರ ರಾಜಕೀಯ
ಮುಖಂಡರು ತನ್ನನ್ನು ನೋಡಿ ಕರುಬಬೇಕು: ದುಡಿಮೆ-ಎಡೆ ಬಿಡದ ದುಡಿಮೆ.
'ಸೌದಾಮಿನಿ'ಯ ಯ ವಿಸ್ತ್ರತಾರ್ಥವೇ ಪರಿಶ್ರಮದ ಪಾರಮ್ಯ, ನಿಘಂಟಿನಲ್ಲಿ
ಇಲ್ಲದಿದ್ದರೇನು ? ಮುಂದಿನ ಆವೃತ್ತಿಯಲ್ಲಿ ಸೇರಿಸಬಹುದಲ್ಲ ?
ವಿಮಾನದೊಳಗೆ ಅತ್ತ ಬರುತ್ತಲೇ ಇತ್ತ ಬರುತ್ತಲೋ ತನಗೆ ವಂದಿಸುತ್ತಿ
ರುವವರು ಬಹಳ ಇದು ಗೃಹಯಾನ, ಅರ್ಧಕ್ಕರ್ಧ ಜನರಿಗೆ ತಾನು ಪರಿಚಿತ ;
ತನ್ನ ಮುಖ ಪರಿಚಿತ,...ಚಂದ್ರ ಗ್ರಹಕ್ಕೆ ಪ್ರವಾಸ ಸಾಧ್ಯ ಎನ್ನುತ್ತಿದ್ದಾರೆ ಜಗತ್ತಿನ
ಮುಂದುವರಿದ ರಾಷ್ಟ್ರಗಳ ವಿಜ್ಞಾನಿಗಳು, ಚಂದ್ರಗ್ರಹಕ್ಕೆ ಹೋಗಬಹುದೆಂದ
ಮೇಲೆ ಆಕಾಶಯಾನದ ವೇಗ ಯಾಕೆ ಹೆಚ್ಚಬಾರದು ? ದಂತೇಶ್ವರಿಯ ದಯೆ