ಪುಟ:ಮಿಂಚು.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

6

ಮಿಂಚು

ಪೇಸ್ಟ್ ಮತ್ತು ಬ್ರಶ್. ಭುಜದ ಮೇಲೆ ಟವೆಲು. ಇಸ್ಸಿ.... ಇಸ್ಸಿ... ಸೀರೆ ಯನ್ನು ಮೊಣಕಾಲಿನವರೆಗೆ ಎತ್ತಿಕೊಳ್ಳದೆ ಬೇರೆ ಗತಿಯಿಲ್ಲ. ಬಾಗಿಲು ಮುಚ್ಚಿದ ಮೇಲೆ ತಾನು ಸ್ವತಂತ್ರಳು....
....ಇನ್ನು ಚಹಾದ ಉಪಾಹಾರದ ನಿಲ್ದಾಣ. ಮೇಲೆ ಮಲಗಿದ್ದವನು ಮೊದಲೇ ಇಳಿದಿದ್ದ.
ಸೇದುತ್ತಿದ್ದ ಬೀಡಿಯನ್ನು ಕಿಟಿಕಿಯ ಆಚೆಗೆ ಎಸೆದು ಬಾಗಿಲಿನತ್ತ ನೆಗೆದ. ಅವನಿಗೆ ಬೇಕಾಗಿದ್ದುದು ಕ್ಯಾಂಟೀನು. ಆತ ತನ್ನ ಕಡೆಗೊಮ್ಮೆ ನೋಡಿದಂತಾಯಿ ತೆಂದು ಪುಟ್ಟವ್ವ ಅಂದಳು.
“ಅಣ್ಣ, ಏನಾದರೂ ಬ್ರೇಕ್ ಫಾಸ್ಟ್ ಕಳಿಸ್ರಿ.”
“ಹುಡುಗರು ಬರ್ತಾರೋ ಇಲ್ವೋ. ಕೇಳಿ ನೋಡ್ತೀನಿ.”
“ಫಸ್ಟ್ ಕ್ಲಾಸ್‌ ಪ್ಯಾಸೆಂಜರು. ಟಿಕೆಟ್ ಸಿಗದೆ—”
“ಹೇಳ್ತೀನಿ.”
ಡಬ್ಬಿಯಲ್ಲಿದ್ದವರು ಪರಿಚಿತೆಯನ್ನು ಮತ್ತೊಮ್ಮೆ ಕಣ್ಣರಳಿಸಿ, ನೋಡಿದರು.
ಕ್ಯಾಂಟೀನಿನಲ್ಲಿ ಒಬ್ಬ ಹುಡುಗ ಭಕ್ಷೀಸಿನ ಸಾಧ್ಯತೆಯನ್ನು ಕಲ್ಪಿಸಿ, ಬಂದವನು ತೋರಿದ ಡಬ್ಬಿಯನ್ನು ಗಮನಿಸಿದ.
ಹಸಿದ ನಾಲಗೆಗೆ ರುಚಿ ಎನಿಸಿದ ಉಪಾಹಾರ ಬಂತು. ಪುಟ್ಟವ್ವ ತೇಗು ತ್ತಿದ್ದಂತೆ ಹುಡುಗ ಪ್ರತ್ಯಕ್ಷನಾದ. ಇಪ್ಪತ್ತೈದು ಪೈಸೆ ಭಕ್ಷೀಸ್ ಕಂಡು ಹಿಗ್ಗಿದ. (ಫಸ್ಟ್ ಕ್ಲಾಸ್ ಅಂತಸ್ತು ಸುಳ್ಳು. ಈ ತರಗತಿಗೆ ಇಷ್ಟು ಭಕ್ಷೀಸ್‌ ಸಾಕು. ಪುಟ್ಟವ್ವ, ಹುಡುಗ ಇಬ್ಬರಲ್ಲೂ ಅದೇ ಯೋಚನೆ.)
ಅಣ್ಣ ಮಾತುಗಾರನಲ್ಲ, ಬರಿಯ ನೋಟಗಾರ.
ಮಾರನೆಯ ದಿನ ಪೂನಾ ನಿಲ್ದಾಣದಲ್ಲಿ, ಯುವತಿಯೂ ಪ್ರಾಯಶಃ ಅವಳ ನಿಜವಾದ ಅಣ್ಣನೂ ಇಳಿದ ಮೇಲೆ ಮರಾಠಿಮಯ ಡಬ್ಬಿಯಲ್ಲಿ 'ಮಹಡಿಮನೆ'ಯ ಅಣ್ಣ ಕನ್ನಡ ಡಿಂಡಿಮ ಬಾರಿಸದೆ, ಮರಾಠಿಯಲ್ಲಿ ಕೇಳಿದ :
“ಮುಂಬಯಿಗೆ ?”
“ಅವನಿಗಿಂತ ಕಡಮೆಯವಳೆ ಆಕೆ ?”
ಅದೇ ಭಾಷೆಯಲ್ಲಿ ಉತ್ತರವಿತ್ತಳು :
"ಹ್ಞ".
“ಬಳಗದವರ ಮನೆಗೆ ?”
“ಹೌದು.”
“ಕಲ್ಯಾಣನಗರದಲ್ಲಿ—”
“ಗೆಳತಿ ಮನೆಗೆ ಹೋಗಿದ್ದೆ. ನೀವು ?”