ಪುಟ:ಮಿಂಚು.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

114




೧೨

ಸಂಪುಟದ ಆರು ಮಂತ್ರಿಗಳು. ಒಬ್ಬೊಬ್ಬರ ಕೈಯಲ್ಲ ಸುಗಂಧರಾಜ ಪುಷ್ಪ
ಹಾರ. ಎಲ್ಲರೂ ಧಾವಿಸಿದರು ವಿಮಾನದಿಂದ ಇಳಿಯುವ ಮೆಟ್ಟಲುಗಳ ಬುಡಕ್ಕೆ,
ಧಾವಿಸುತ್ತಿದ್ದವರ ಪಕ್ಕದಲ್ಲೇ ಇದ್ದರು ಪೋಲೀಸ್ ಮುಖ್ಯಸ್ಥರು, ಅವರ ಬದಿಯಲ್ಲಿ
ನೂತನ ಮುಖ್ಯ ಕಾರ್ಯದರ್ಶಿ ಚೌಗುಲೆ, ಅವರ ಹಿಂದೆ ರಾಜ್ಯದ ಹಿರಿಯ ಅಧಿಕಾರಿ
ಗಳು. ಬಹಳ ಮುಖ್ಯ ವ್ಯಕ್ತಿ (ವೆರಿ ಇಂಪಾರ್ಟೆಂಟ್ ಪರ್ಸನ್-ವಿ.ಐ.ಪಿ.)ಗಳು
ವಿರಮಿಸುವ ಕೊಠಡಿಯಲ್ಲಿ ಪತ್ರಿಕಾ ಪ್ರತಿನಿಧಿಗಳು ನೆರೆದಿದ್ದರು, ವಿಮಾನದತ್ತ
ಕೊಕ್ಕರೆಗಳಾಗಿ,
ಇಳಿದರು : ಅಂಗರಕ್ಷಕ, ಮುಖ್ಯಮಂತ್ರಿ, ಆಪ್ತ ಕಾರ್ಯದರ್ಶಿ, ಅಂಗರಕ್ಷಕ.
ಪೋಲೀಸರ ಮುಖ್ಯಸ್ಥ ಮುಖ್ಯಮಂತ್ರಿಯನ್ನು ಹತ್ತು ಹೆಜ್ಜೆ ಎಡಕ್ಕೆ ಕರೆ
ದೊಯ್ದ , ಇಳಿಯುವ ಪ್ರಯಾಣಿಕರಿಗೆ ಅಡಚಣೆಯಾಗದಿರಲೆಂದು, ಮುಖ್ಯಮಂತ್ರಿ
ಹೋಗಿ ನಿಂತೆಡೆಗೆ ನೂಕು ನುಗ್ಗಲು, ಮಂತ್ರಿಗಳು ಮಾಲಾರ್ಪಣೆ ಮಾಡಿದರು.
ಚೌಗುಲೆ ಅಂದ :
“ವಿ, ಐ. ಪಿ, ಲೌಂಜಿಗೆ ಹೋಗೋಣ, ಪ್ರೆಸ್ಸಿನವರು ಕಾಯ್ತಿದ್ದಾರೆ.”
“ಪ್ರೆಸ್ಸಿನವರು ? ಏನು ವಿಶೇಷ ?”
“ಪ್ರಧಾನಿಯವರನ್ನು ತಾವು ಭೇಟಿಯಾದಿರಿ ಅಂತ ಏಜೆನ್ಸಿ ನ್ಯೂಸ್ ಟೆಲಿ
ಪ್ರಿಂಟರಿನ ಮೇಲೆ ಬಂದಿದೆ. ಅವರಿಗೇನೋ ಕುತೂಹಲ, ಆತುರ.”
“ಸರಿ, ಸರಿ !”
ಲೌಂಜಿನಲ್ಲಿ ಸೌದಾಮಿನಿಯೊಬ್ಬಳೇ ಕುಳಿತಳು. ವಕ್ಷಸ್ಥಲಕ್ಕೆ ಹೊರೆಯಾಗಿದ್ದ
ಹಾರಗಳನ್ನು ಒಂದೊಂದಾಗಿ ತೆಗೆದು ಅಂಗರಕ್ಷಕರಿಗಿತ್ತಳು, ಪತ್ರಿಕೆಯವರತ್ತ ದೃಷ್ಟಿ
ಬೀರಿ ಅಂದಳು :
“ಕಾಲ ಟಿಕ್ ಟಿಕ್ ಅಗ್ತಾ ಇದೆ. ಪ್ರಶ್ನೆ ಕೇಳಿ.”
ಒಬ್ಬ ಕೇಳಿದ :
“ಪ್ರಧಾನಿ ತಮ್ಮನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳೋ ಬಯಕೆ ವ್ಯಕ್ತ
ಪಡಿಸಿದಾರಂತೆ ; ಹೌದೆ ?”
ಸೌದಾಮಿನಿ ಚಕಿತಳಾದಳು.
"ಇದು ಊಹಾಪೋಹ. ಆಫ್ ದ ರೆಕಾರ್ಡ್ ಇಷ್ಟು ಹೇಳಬಲ್ಲೆ, ಕೇಂದ್ರ