ಪುಟ:ಮಿಂಚು.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

115

ಸಚಿವ ಹುದ್ದೆ ನಾನು ಇಷ್ಟ ಪಟ್ಟಾಗ ಸ್ವೀಕರಿಸಬಹುದು. ಅದು ನನ್ನ ಹ್ಯಾಂಡ್
ಬ್ಯಾಗಿನಲ್ಲಿದೆ. ಇನ್ನು ಆನ್ ರೆಕಾರ್ಡ್, ನಮ್ಮ ಜಾಣಪ್ಪನವರಿಗಾಗಿ ಕಳೆದ
ಒಂದು ತಿಂಗಳಿಂದ ನಾನು ಮಾಡುತ್ತಿದ್ದ ಯತ್ನ ಫಲಿಸಿದೆ.”
“ವಾರ್ತೆ ಬಂದಿದೆ : ಕೇರಳಕ್ಕೆ ರಾಜ್ಯಪಾಲರಾಗಿ ಹೋಗ್ತಾರೆ ಅಂತ.”
“ಕಿಷ್ಕಿಂಧೆಯ ಆಡಳಿತದ ವಿಷಯದಲ್ಲಿ ಪ್ರಧಾನಿ ಪರಮ ಸಂತುಷ್ಟರಾಗಿದ್ದಾರೆ.”
“ಕಿಷ್ಕಿಂಧೆಗೆ ಹೊಸ ಕಾರ್ಯಸೌಧ ?”
“ಹೌದು, ಶಂಕುಸಾಪ್ಟನೆಗೆ ಪ್ರಧಾನಿಯೇ ಬಾರೆ.”
“ಯಾವಾಗ ?”
"ಈ ವರ್ಷವೇ. ಆಗ ರಾಜ್ಯದಲ್ಲಿ ಪ್ರವಾಸವನ್ನೂ ಮಾಡ್ತಾರೆ.”
“ಸಂಪುಟವನ್ನು ವಿಸ್ತರಿಸಲು ಪ್ರಧಾನಿ ಸೂಚಿಸಿದಾರಾ ?”
“ಸಪ್ತರ್ಷಿ ಮಂಡಲ ಬೀರುತ್ತಿರುವ ಪ್ರಭೆ ಸಾಲದೆ ?”
“ಸದ್ಯಕ್ಕೆ ಸಾಕು. ಸಪ್ತರ್ಷಿ ಮಂಡಲದ ಬದಲು ನವಗ್ರಹಗಳು ಬರುವ
ಸಾಧ್ಯತೆ ಇದೆಯ ? ಅಂತ,”
ಉತ್ತರ ಅನಗತ್ಯವೆಂಬಂತೆ ಸೌದಾಮಿನಿ ಅಂಗೈ ಆಡಿಸಿದಳು.
ಮುಖ್ಯಮಂತ್ರಿ ಕುಳಿತಲ್ಲಿಂದ ಎದ್ದೊಡನೆ, ನೆರೆದವರು ಚೆದರತೊಡಗಿದರು.
ಸೌದಾಮಿನಿ ಸ್ವರವೇರಿಸಿ ಅಂದಳು :
ಇನ್ನೊಂದು ಸಂಗತಿ, ದಿಲ್ಲಿಯಲ್ಲಿ ಕಿಷ್ಕಿಂಧಾ ಭವನ ನಿರ್ಮಾಣವಾಗಲಿದೆ....
ಇವರು ಯಾರು, ಪರಿಚಯ ಮಾಡಿಕೊಂಡಿರಾ ? ಶಿವಭಾವು ಚೌಗುಲೆ, ಹಿರಿಯ
ಐ. ಎ. ಎಸ್. ಅಧಿಕಾರಿ, ನಮ್ಮ ನೂತನ ಮುಖ್ಯ ಕಾರ್ಯದರ್ಶಿ.”
ಯಾರೋ ಒಬ್ಬಿಬ್ಬರೆಂದರು :
“ನಿಮಗೆ ಸ್ವಾಗತ ಮಿ, ಚೌಗುಲೆ.”
ನಗರಕ್ಕೆ ಸೀಮಿತವಾದ ಪುಟ್ಟ ಪತ್ರಿಕೆಯ ಪುಟಾಣಿ ಪ್ರತಿನಿಧಿ ಚೌಗುಲೆಯನ್ನು
ಸಮಿಾಪಿಸಿ, “ಕಲ್ಯಾಣನಗರ ನಿಮಗೆ ಹೇಗೆ ಅನಿಸ್ತಿದೆ ?” ಎಂದು ಕೇಳಿದ.
ನಗೆಯೊಡನೆ ಉತ್ತರ ಬಂತು :
“ಬಹಳ ಸುಂದರವಾಗಿದೆ.”
-ಲೌಂಜ್ ಖಾಲಿಯಾಯಿತು.

***

ವಿಮಾನ ಬಂದ ಸದ್ದು ಜಾಣಪ್ಪನವರಿಗೆ ಕೇಳಿಸಿತ್ತು. ತಾವು ಅಧಿಕಾರದಲ್ಲಿ
ದ್ದಾಗ, ದಿಲ್ಲಿಯಿಂದ ಮರಳಿದ ಸಂಜೆ ನಿವಾಸದಲ್ಲಿ ತಮ್ಮನ್ನು ಇದಿರ್ಗೊಳ್ಳುತ್ತಿದ್ದ
ವರು ಪತ್ರಿಕೆಯವರು. ಇವತ್ತು ಪ್ರಾಯಶಃ ಮುಖ್ಯಮಂತ್ರಿಯ ಹೊಸ ನಿವಾಸದಲ್ಲಿ