ಪುಟ:ಮಿಂಚು.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

116

ಮಿಂಚು

ವಾರ್ತಾಗೋಷ್ಠಿ ನಡೆಯುತ್ತಿರಬಹುದು. ಪ್ರಧಾನಿ ಬೆಳಗ್ಗೆ ಯೇ ಫೋನ್ ಮೂಲಕ
ಮಾತಾಡಿದ್ದರು. ಆದರೂ ಈ ಮಾತಾಜಿ ಔಪಚಾರಿಕವಾಗಿ ಬಂದು ಹೇಳಬೇಕು,
ಬರುತ್ತಾಳೋ ಇಲ್ಲವೋ,
ಯಾನದಲ್ಲಿದ್ದಾಗಲೇ ಸೌದಾಮಿನಿ ಅದನ್ನು ಕುರಿತು ಯೋಚಿಸಿದ್ದಳು. ಜಾಣಪ್ಪ
ನಿಗೆ ರಾಜ್ಯಪಾಲ ಹುದ್ದೆ ತನ್ನಿಂದಾಗಿಯೇ ದೊರೆಯಿತೆಂದು ಇತರ ನಕ್ಷತ್ರಗಳಿಗೆ
ಖಚಿತವಾಗಬೇಕಾದರೆ ತಾನು ಜಾಣಪ್ಪನನ್ನು ಕಾಣಬೇಕು, ಕೆಲವೇ ಮಿನಿಟುಗಳ
ಮಟ್ಟಿಗಾದರೂ.
ಕಾರು ಬಂತು. ('ಬಂದಳು')
“ನಮಸ್ತೆ ಜಾಣಪ್ಪಾಜಿ."
“ಬನ್ನಿ ಮಾತಾಜಿ."
“ವಿ ಐ ಪಿ ಲೌಂಜಿನಲ್ಲೇ ಪ್ರೆಸ್ಸಿನವರು ಕಾದಿದ್ದರು. ಹೀಗಾಗಿ ತಡವಾಯಿತು.
ಕೇರಳ ರಾಜ್ಯಪಾಲರಿಗೆ ಅಭಿನಂದನೆ !”
“ಉಪಕೃತ, ಪ್ರಧಾನಿ ನಿನ್ನೆ ರಾತ್ರಿಯೇ ಫೋನ್ ಮಾಡಿದ್ರು.”
ಒಣ ಶಿಷ್ಟಾಚಾರ, ಮಹತ್ವದ್ದಲ್ಲ ಎಂದೇ ತನಗೆ ಪ್ರಧಾನಿ ಹೇಳಿರಲಿಲ್ಲ-
ಎಂದು ಸೌದಾಮಿನಿ ತನ್ನ ಅಹಮಿನ ಮುಂಗುರುಳು ಸವರಿದಳು.
“ರಾಷ್ಟ್ರ ಪಕ್ಷಾಧ್ಯಕ್ಷರು ನಿಮ್ಮ ಕುಶಲ ವಿಚಾರಿಸಿದರು. ನಕುಲದೇವ್‌ಜಿ
'ಪ್ರಣಾಮ ತಿಳಿಸಿ' ಅಂದರು.”
"ಅವರೆಲ್ಲ ದೊಡ್ಡ ಮನುಷ್ಯರು.”
“ಯಾವಾಗ ಹೊರಡ್ತೀರಿ ಜಾಣಪ್ಪಾಜಿ ? ನಾವೊಂದು ಭಾರೀ ಬೀಳ್ಕೊಡುಗೆ
ಸಮಾರಂಭ ಏರ್ಪಡಿಸ್ತೇವೆ.”
“ಯಾಕಮ್ಮ ಅದೆಲ್ಲ ?”
“ಛೇ ! ಛೇ ! ನಾಳೆ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸೇನೆ.”
“ತಿಳಿವಳಿಕೆ ಇರೋ ಹೆಂಗಸು. ಆದರೆ ಸ್ವಲ್ಪ ದುಡುಕು, ಅದಕ್ಕಿಂತ ಹೆಚ್ಚು
ಏನೂ ಹೇಳಲಾರೆ” ಎಂದರು ಜಾಣಪ್ಪ ತನ್ನ ಪತ್ನಿಯೊಡನೆ, ಕಾರು ಗೇಟು ದಾಟಿದ
ಬಳಿಕ.
ಹೆಂಡತಿ ಬೇರೆಯೇ ವಿಷಯ ಎತ್ತಿದಳು :
“ನಮ್ಮ ಹಿರೇ ಅಳಿಯ ಹೇಳಿದ್ರು. ಕೇರಳ ಗಲಾಟೆ ರಾಜ್ಯ ಆಂತೆ.”
“ಅವನೊಬ್ಬ, ಕಾನೂನು ಬದ್ಧವಾಗಿ ದುಡಿದರಾಯಿತು. ನಮ್ಮ ತಂಟೆಗೆ
ಯಾರೂ ಬರೋದಿಲ್ಲ.”
“ಮಕ್ಕಳಿಗಂತೂ ಇಲ್ಲಿ ಸೈಟುಗಳು ಸಿಕ್ಕಿವೆ, ಮನೆ ಕಟ್ಟಿಸಿಕೊಂಡು ಹಾಯಾ
ಗಿದ್ದಾರೆ.”

***