ಪುಟ:ಮಿಂಚು.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

118

ಮಿಂಚು

“ಪ್ರಧಾನಿ ಕಿಷ್ಕಿಂಗೆ ಭೇಟಿ ನೀಡಿದಾಗ ಅಂಥ ಪ್ರಮಾದಗಳಾಗದ ಹಾಗೆ
ನಮ್ಮ ವಾರ್ತಾ ಇಲಾಖೆಗೆ ನಿರ್ದೆಶ ಕೊಡಬೇಕು.”
"ಇದೇ ಇವತ್ತು ಚೌಗುಲೆಯವರು ಮಾತನಾಡಿದ ಅತಿ ದೀರ್ಘ ವಾಕ್ಯ.”
“ಹಹ್ಹ !”

***

ಸಂಪುಟದ ಇಬ್ಬರು ಸದಸ್ಯರು ಸಭೆಗೆ ತಡವಾಗಿ ಬಂದರು. ಶಿಷ್ಟಾಚಾರದ
ವಂದನೆ ನೀಡಿದರಾದರೂ ಸಂಪುಟದ ಕೊಠಡಿಯ ಬಾಗಿಲು ತೆರೆದು ಅವರನ್ನು ಒಳ
ಬಿಟ್ಟಾಗ ಅಶಿಸ್ತಿನ ಗಾಳಿ ತುಸು ಬೀಸಿದಂತಾಯಿತು.
“ಕಾಲ ಟಿಕ್ ಟಿಕ್ ಅಗ್ತಾ ಇದೆ. ಸಮಯದ ಬೆಲೆ ಎಲ್ಲರಿಗೂ ತಿಳಿದಿರಬೇಕು,
ಎಚ್.ಎಮ್.ಟಿ: ವಾಚು ಈಗ ಚೆನ್ನಾಗಿ ಬರಿದೆಯಂತೆ. ಅದು ಸಾಲದೂಂತಾದರೆ
ಪ್ರತಿಯೊಬ್ಬ ಮಂತ್ರಿಗೂ ಒಂದು ರೋಲೆಕ್ಟ್ ಕೊಡಿಸೋಣ.”
ಒಬ್ಬರು ಚಪ್ಪಾಳೆ ತಟ್ಟಿದರು, ಮುಖ್ಯಮಂತ್ರಿ ಸಿಟ್ಟಿನಿಂದ ಅಂದರು :
“ಇದು ಸಾರ್ವಜನಿಕ ಸಭೆಯಲ್ಲ !”
ತಡವಾಗಿ ಬಂದವರಲ್ಲಿ ಒಬ್ಬನೆಂದ :
"ಇದು ಶಾಲೆಯೂ ಅಲ್ಲ ; ಮಾತಾಜಿ ಶಿಕ್ಷಕಿಯೂ ಅಲ್ಲ.”
ಸ್ಫೋಟಿಸ ಬಯಸಿದ ಸಿಟ್ಟನ್ನು ಸೌದಾಮಿನಿ ಒಳಕ್ಕೆ ಅದುಮಿದಳು. ಮುಖ್ಯ
ಕಾರ್ಯದರ್ಶಿ ಚೌಗುಲೆ ಸಪ್ತ ಮಂತ್ರಿಗಳೆಲ್ಲರನ್ನೂ ಎವೆ ಇಕ್ಕದೆ ನೋಡಿದ:
ಮುಖ್ಯಮಂತ್ರಿ ಹೇಳಿದಳು :
“ರಾಷ್ಟ್ರದ ರಾಜಧಾನಿಯಲ್ಲಿ ಕಿಷ್ಕಿಂಧೆಯ ಬಗ್ಗೆ ಎಷ್ಟು ಮೆಚ್ಚುಗೆ ಇದೆ
ಎಂಬುದು ಈ ವೇಳೆಗೆ ನಿಮಗೆಲ್ಲ ಗೊತ್ತಾಗಿರಬಹುದು.”
ತಡವಾಗಿ ಬಂದವರಲ್ಲಿ ಇನ್ನೊಬ್ಬನೆಂದ :
“ದಿಲ್ಲಿಗೆ ಹೋಗಿ ಪ್ರಧಾನಿಯವರನ್ನು ಕಾಣುವ ಅವಕಾಶ ನಮಗೂ ಸಿಗ
ಬೇಕು.”
“ಅವರಿಂದ ಕರೆಬಂದಾಗ ತಿಳಿಸಿ, ಖಂಡಿತ ಕಳಿಸಿಕೊಡ್ತನೆ ಮಹಾರಾಯರಾಗಿ
ಹೋಗಿ ಬನ್ನಿ.”
“ಸಮಯ ಹಾಳು, ಇಂಥ ವಿಷಯಕ್ಕೆಲ್ಲ ಚರ್ಚೆ ಯಾಕೆ ?” ಎಂದ ಮಗ
ದೊಬ್ಬ ಮಂತ್ರಿ,
ಮುಖ್ಯಮಂತ್ರಿಗನಿಸಿತು-ವಿಷಯಾಂತರ ಮೇಲು, ಆಕೆ ಅಂದಳು :
ಜಾಣಪ್ಪನವರನ್ನು ನಾವು ಹಾರ್ದಿಕವಾಗಿ ಬೀಳ್ಕೊಡಬೇಕು:
ಇವತ್ತಿನಿಂದ
ಮೂರನೇ ದಿನ ಸಂಜೆ, ಜವಾಬ್ದಾರಿ ಯಾರು ವಹಿಸಿಕೊಳ್ಳಿರಿ ?”