ಪುಟ:ಮಿಂಚು.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

119

“ತಾವು ಹೇಳಿ.”
ತಡವಾಗಿ ಬಂದ ಇಬ್ಬರನ್ನೂ ಮುಖ್ಯಮಂತ್ರಿ ಹೆಸರಿಸಿದಳು. ಇಬ್ಬರೂ
ಒಟ್ಟಿಗೆ, “ಒಪ್ಪಿದ್ದೇವೆ” ಎಂದರು. ಈ ಚಾಕಚಕ್ಯ ಚೌಗುಲೆಗೆ ಇಷ್ಟವಾಯಿತು.
ಆತ ಹುಟ್ಟಿ ಬೆಳೆದದ್ದು ಕಿಷ್ಕಿಂಧೆಯ ಗಡಿಯಾಚೆಗೆ, ಬಾಲ್ಯದಲ್ಲಿ ಕಿಷ್ಕಿಂಧೆಯ ಜನರ
ಭಾಷೆ ಪದೇ ಪದೇ ಕಿವಿಯ ಮೇಲೆ ಬೀಳುತ್ತಿತ್ತು. ಪರಿಮಿತ ಭಾಷಾ ಜ್ಞಾನವಾದ
ರೇನಂತೆ ? ಈಗ ಅದು ಉಪಯೋಗಕ್ಕೆ ಬಂದಿತ್ತು.
ಮುಖ್ಯಮಂತ್ರಿ :
“ವಿದಾಯ ಸಮಾರಂಭದ ಚಲಚಿತ್ರ ತೆಗೆಸಬೇಕು, ವಾರ್ತಾ ಇಲಾಖೆಯಲ್ಲಿ
ಒಂದು ಫಿಲ್ಸ್‌ ಯೂನಿಟ್ ಇದ್ದರೆ ಚೆನ್ನು, ವಾರ್ತಾ ಇಲಾಖೆಯ ನಿರ್ದೇಶಕರನ್ನು
ಕರೆಸಿ, ಈ ಬಗ್ಗೆ ಚರ್ಚಿಸಿ ಚೌಗುಲೆ ಸಾಹಿಬ್,”
“ಗುರುತು ಮಾಡ್ಕೊಂಡಿದೀನಿ ಮಾತಾಜಿ.”
“ಬಸವನ ಹುಳದ ನಡಿಗೆಯ ವೇಗ ಎಷ್ಟೂಂತ ಯಾರು ಹೇಳೀರಿ ?”
ಯಾರಿಗೂ ಗೊತ್ತಿರಲಿಲ್ಲ.
“ನಾನೇ ಹೇಳ್ತನೆ. ನಮ್ಮ ನೌಕರಶಾಹಿಯ ನಡಿಗೆಯ ವೇಗ ಎಷ್ಟೋ ಅಷ್ಟೆ.”
ಒಂದೆರಡು ನಿಮಿಷ ನಗೆಯ ಅಲೆಗಳಿಂದ ಕೊಠಡಿ ತುಂಬಿತು. ಅತಿ ಹೆಚ್ಚು
ಗಟ್ಟಿಯಾಗಿ ನಕ್ಕ ವ್ಯಕ್ತಿ, ಮುಖ್ಯ ಕಾರ್ಯದರ್ಶಿ
ಸಂಪುಟದ ಸಭೆಯಲ್ಲಿ ಸಪ್ಪೆ ಮೋರೆ ಹಾಕಿ ಕುಳಿತಿದ್ದ ರಂಗಧಾಮನೂ ಆ
ಸನ್ನಿವೇಶದಲ್ಲಿ ನಕ್ಕ. ಸೌದಾಮಿನಿ ಅದನ್ನು ಗಮನಿಸಿದಳು,
“ಧ್ರುವ ರಂಗಧಾಮರ ಬಗ್ಗೆ -ಅಂದರೆ ಮುಖ್ಯವಾಗಿ ಅವರ ಇಲಾಖೆ ಬಗ್ಗೆ
ಪ್ರಧಾನಿ ಬಹಳ ಕೇಳಿದರು. ಇಡೀ ದೇಶ ಇನ್ನು ಬೃಹತ್ ಕೈಗಾರಿಕೆಗಳಿಗೆ ಆತು
ಕೊಳ್ಳದೆ: ಒಂದೊಂದು ಕಾರಖಾನೆ ಒಂದೊಂದು ಬಕಾಸುರ, ಎಷ್ಟು ಸಾವಿರ
ಬಂಡಿ ವಿದ್ಯುಚ್ಛಕ್ತಿ ಇದ್ದರೂ ಸಾಲದು. ಎಲ್ಲ ನದಿಗಳಿಗೂ ನಾವು ಸವಾಲು
ಹಾಕು, ಘಟಕಗಳಿಗೆ ಬೇಕಾದ ಯಂತ್ರೋಪಕರಣ ಪೂರೈಕೆ ವಿದೇಶಗಳಿಂದ
ಆಗಬೇಕು, ರಂಗಧಾಮರೊಮ್ಮೆ ವಿದೇಶ ಪ್ರವಾಸ ಮಾಡಿ ಬಲ್ಬಕು. ವಿಧಾನ
ಸಭೆಯ ಬಜೆಟ್ ಅಧಿವೇಶನ ಅದಮೇಲೆ: ಜತೆಯಲ್ಲಿ ಯಂತ್ರ ತಜ್ಞರನ್ನೂ ಕರ
ಕೊಂಡು ಹೋಗುವಿರಂತೆ,”
ಈಗ ಧ್ರುವ ಪ್ರಭೆ ಬೀರಿದ.
“ಆಗಲಿ ಮಾತಾಜಿ,” ಎಂದ.
ಮಂಡಲದ ಏಳು ನಕ್ಷತ್ರಗಳೂ ಎಲ್ಲಿರಬೇಕೊ ಅಲ್ಲಿವೆ-ಎಂದು ಈಗ ಸೌದಾ
ಮಿನಿಗೆ ಅನಿಸಿತು. ಇವುಗಳ ಚಲನೆಯಲ್ಲಿ ಹೆಚ್ಚು ಕಡಮೆ ಆಗದ ಹಾಗೆ ಕಾಯುತ್ತಿರ
ಬೇಕು, ಅಷ್ಟೆ-ಎಂದುಕೊಂಡಳು.