ಪುಟ:ಮಿಂಚು.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

123

ನೋಡಲು ಗಂಡ ಹೋಗುತ್ತಿದ್ದಾರೆಂದು ಹಲವಾರು ಗೆಳತಿಯರಿಗೆ ಆಕೆ ಆಗಲೆ ಫೋನ್
ಮಾಡಿದ್ದಳು. ಎಲ್ಲರೂ “ಹೌದಾ ? ಹೌದಾ ?” ಅಂತ ಕೇಳಿದ್ದರು. ಗಂಡನಿಗೆ
ಅದನ್ನು ತಿಳಿಸಿದಾಗ ಆತ ಕುಪಿತನಾದ, “ಮುಖ್ಯಮಂತ್ರಿಯಿಂದ ಆಮಂತ್ರಣ
ಬರೋದು ಗೌರವ ಅಲ್ಲವಾ ? ಬೇರೆಯವರಿಗೆ ಹೇಳದೆ ಇರುವಂಥ ವಿಷಯವಾ
ಅದು ?” ಎಂದಳು. ಧನಂಜಯಕುಮಾರ ಎಚ್ಚರಗೊಂಡ, ವಾಣಿಜ್ಯ ವಲಯದಲ್ಲಿ
ಮತ್ಸರಿಗಳಿಗೇನು ಅಭಾವ? ಇದು ಬರೇ ವ್ಯವಹಾರ ಕಣೆ, ಸಾಮಗ್ರಿ ಕೊಡೋದು,
ದುಡ್ಡು ಪಡೆಯೋದು.”
"ಆಗಲಪ್ಪ ಆಗಲಿ, ನಾನು ಮೊದ್ಲು, ಏನು ಗೊತ್ತಾಗುತ್ತೆ ?”
“ಮೊದ್ದು ಅಲ್ಲ, ಮುದ್ದು , ಹಸಿವಾಗ್ತಿದೆ.”

***

ಮುಖ್ಯಮಂತ್ರಿಯ ಆದೇಶದಂತೆ ಚೇಂಬರಿಗೆ ಬಂದ ಸಚಿವರಾದ ಬಾಲಾಜಿ
ಮತ್ತು ಸಂಗಪ್ಪ ಧನಂಜಯಕುಮಾರನನ್ನೂ ಕಾಣಿಕೆಗಳನ್ನೂ ನೋಡಿ “ಎಲಾ
ಇವಳ !” ಎಂದುಕೊಂಡರು. ಉತ್ಕೃಷ್ಟವಾಗಿದ್ದುವು.
“ಪುರಸಭಾಭವನಕ್ಕೆ ತಳಿರು ಶೃಂಗಾರ ನಡೀತಿದೆ. ವಿದ್ಯಾ ಸಚಿವರ ಕೃಪೆಯಿಂದ
ನೂರು ಹುಡುಗೀರು ಆರತಿ ಬೆಳಗ್ತಾರೆ, ಕಡಮೆ ವೆಚ್ಚದಲ್ಲಿ ಚಿತ್ರೀಕರಣಕ್ಕೆ ಖಾಸಗಿ
ಯವರ ಸಹಾಯದಿಂದ ಏರ್ಪಾಟು ಮಾಡಿದ್ದೇವೆ. ಮಹಾಕವಿ ಮಾನಪತ್ರ ಬರೆದು
ಕೊಟ್ಟಿದ್ದಾರೆ. ಬಂಗಾರದ ಹೊಳಪಿನ ಚೌಕಟ್ಟು ಹಾಕಿದ್ದೇವೆ” ಎಂದ ಬಾಲಾಜಿ.
ಸಂಗಪ್ಪ ನುಡಿದರು :
“ಬ್ಯಾಂಡ್, ವಾಹನ ಸಂಚಾರ, ಭದ್ರತಾಕ್ರಮ ಈ ಬಗ್ಗೆ ಐ.ಜಿ.ಪಿ. ಯವರಿಗೆ
ಹೇಳಿದ್ದೇವೆ.”
ಸೌದಾಮಿನಿ ಮಂತ್ರಿಗಳಿಗೆ ಇವರು ಧನಂಜಯಕುಮಾರ್, ಸಣ್ಣ ಪೇಟೆಯ
ದೊಡ್ಡ ಜವಳಿ ವ್ಯಾಪಾರಿ, ಸಾರ್ವಜನಿಕ ಚಟುವಟಿಕೆಗಳಲ್ಲಿ ಇವರಿಗೆ ಬಹಳ ಆಸಕ್ತಿ”
ಎಂದು ಪರಿಚಯ ಮಾಡಿಕೊಟ್ಟರು.
..."ಅಧಿಕಾರ ಹೋದರೂ ಮಾನ ಹೋಗಲಿಲ್ಲ” ಎಂದು ಮನಸ್ಸಿನಲ್ಲಿ ಪದೇ
ಪದೇ ಅಂದುಕೊಳ್ಳುತ್ತ ಜಾಣಪ್ಪನವರು ಬೀಳ್ಕೊಡುಗೆ ಸಮಾರಂಭಕ್ಕೆ ಸಿದ್ಧರಾದರು
“ನೀವು ಏನೇ ಹೇಳಿ, ಅವಳು ಒಳ್ಳೆಯವಳೂಂದ್ರೆ” ಎಂದರು ಅವರ ಪತ್ನಿ,
ಚಿತ್ರೀಕರಣವಿದೆ ಎಂಬ ಸುದ್ದಿ ಪತ್ರಿಕೆಯಲ್ಲಿದ್ದುದರಿಂದ ಪುರಭವನದಲ್ಲ
ಹೊರಗೂ ಸೇರಿತ್ತು ಜನಸಾಗರ, ಜಾಣಪ್ಪ ಸಕುಟುಂಬರಾಗಿ ಬಂದಾಗ ಮಹಾ
ದ್ವಾರದಲ್ಲಿದ್ದವರು ಅವರೊಬ್ಬರನ್ನೂ ಒಳಗೆ ಬಿಡಲಿಲ್ಲ. ಮಹಾದ್ವಾರ ಮುಚ್ಚಿ
ಕೊಂಡಿತು. ಒಳಗೂ ಪೊಲೀಸರು ಹೊರಗೂ ಪೊಲೀಸರು, ಜಾಣಪ್ಪನವರು