ಪುಟ:ಮಿಂಚು.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

7

“ಸಣ್ಣ ಪೇಟೆಯಲ್ಲಿ ಜವಳಿ ಅಂಗಡಿ ಇದೆ. ಜವಳಿ ಖರೀದಿಗೇಂತ ಮುಂಬಯಿಗೆ—”
“ಗೊತ್ತಾಯ್ತು.”
ಅವನ ಬ್ಯಾಗು ತುಂಬ ನೂರು ರೂಪಾಯಿ ನೋಟುಗಳಿರಬಹುದು. ತನ್ನ ಟ್ರಂಕಿನಲ್ಲೂ ಇಲ್ಲವೆ ಆಭರಣ ಗೀಭರಣ ?
ಕಲ್ಯಾಣ. ಬಳಿಕ ಮುಂಬಯಿ ಸೆಂಟ್ರಲ್‌ನಲ್ಲಿ ಇಳಿದಾಗ ಅಣ್ಣ ಕೇಳಿದ, ಡಿಂಡಿಮ ಭಾಷೆಯಲ್ಲಿ.
“ನೀವು ಯಾವ ಕಡೆಗೆ ? ಒಟ್ಟಿಗೇ ಟ್ಯಾಕ್ಸಿ ಮಾಡೋಣವಾಂತ ?”
“ಬೇಡ. ನೀವು ಹೋಗಿ. ನಮ್ಮ ಮನೆಯಿಂದ ಕಾರು ಬರ್ತದೆ.”
“ಸರಿ. ಮುಂದೆ ನೀವು ಯಾವಾಗಲಾದರೂ ಕಲ್ಯಾಣನಗರಕ್ಕೆ ಬಂದಾಗ ನಮ್ಮ ಅಂಗಡಿಗೆ ಭೇಟಿ ನೀಡ್ಬೇಕು. ಇಗೊಳ್ಳಿ, ಕಾರ್ಡು.”
ತುಸು ಕಿವಿ ಮಡಚಿದ್ದ ವಿಸಿಟಿಂಗ್ ಕಾರ್ಡ್ ಅವಳ ಕೈಗೆ ಬಂತು.
“ಗಂಧದ ತೆಳು ಹಾಳೆ ಮೇಲೆ ಕಾರ್ಡ್ ಮಾಡಿಸಿ.”
“ಆಗಲಿ ಮೇಡಂ.... ನಮ್ಮ ಅಂಗಡಿಗೆ—”
“ಬರ್ತೇವೆ, ಬರ್ತೇವೆ.”