ಪುಟ:ಮಿಂಚು.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

124

ಮಿಂಚು

“ನಾನು ಜಾಣಪ್ಪ ಕಣೋ, ಬೆಪ್ಪ ನನ್ನ ಮಕ್ಕಳಾ” ಎಂದು ಒದರಾಡಿದರು.
ಪೋಲೀಸನೊಬ್ಬ “ಯಾರೋ ನೀನು ? ಎಷ್ಟೋ ಪೊಗರು ?” ಎಂದು ಗದರಿಸಿ
ಲಾಠಿ ಎತ್ತಿದ. ಸ್ವಾತಂತ್ರ್ಯ ಸಂಗ್ರಾಮದಲ್ಲೇ ತಲೆ ಉಳಿಸಿಕೊಂಡಿದ್ದ ಜಾಣಪ್ಪ
ನವರು ಕ್ಷಣವೂ ತಡಮಾಡದೆ ಎಡಬದಿಯ ಸಂದಿಯಿಂದ ಹೆಂಡತಿಯನ್ನೆಳೆದುಕೊಂಡು
ರಸ್ತೆಯ ಅಂಚಿಗಿಳಿದರು, ಆ ತಾಯಿಗೆ ಮಕ್ಕಳ, ಅಳಿಯಂದಿರ, ಮೊಮ್ಮಕ್ಕಳ ಚಿಂತೆ,
“ಅಯ್ಯೋ ಅವರನ್ನು ಕರಕೊಂದ್ರೆ.....” ಎಂದು ಸಂಕಟದಿಂದ ನುಡಿದಳು,
“ಸುಮ್ಮಿರು, ಚಿಕ್ಕೋರು ಹುಷಾರಾಗಿದ್ದಾರೆ” ಎಂದರು ಮಾಜಿ ಮುಖ್ಯಮಂತ್ರಿ,
ಅಷ್ಟರಲ್ಲಿ ರಸ್ತೆಯಲ್ಲಿ ಧ್ವನಿವರ್ಧಕ ತಗಲಿಸಿದ್ದ ಜೀಪ್ ಕಾಣಿಸಿತು. ಅದರ
ಹಿಂದಿತ್ತು ಪೊಲೀಸ್ ವ್ಯಾನ್, ಜೀಪಿನೊಳಗಿಂದ ಅಧಿಕಾರಿ 'ಕೇಳಿರಿ ಕೇಳಿರಿ'
ಮಾಡಿದ. (ವ್ಯಾನಿನಿಂದ ಪೋಲೀಸರ ದಂಡೇ ಇಳಿಯಿತು. ಅರ್ಧ ಜನರ ಕೈಯಲ್ಲಿ
ಲಾಠಿ, ಉಳಿದವರ ಕೈಯಲ್ಲಿ ಬಂದೂಕು) “ಮಹಾಜನರಲ್ಲಿ ವಿನಂತಿ, ಪುರಭವನ
ವನ್ನು ಸುತ್ತುವರಿದಿರುವ ಹೆಚ್ಚುವರಿ ಜನ ತಕ್ಷಣ ಚೆದರಬೇಕು. ಇಲ್ಲದಿದ್ದರೆ ಶಾಂತಿ
ಪಾಲನೆಗಾಗಿ ಲಾಠಿ ಚಾರ್ಜು ಮಾಡಲಾಗುವುದು, ಕೆಲ ನಿಮಿಷಗಳ ಅಂತರದಲ್ಲಿ
ಮತ್ತೆ ಅದೇ ಆದೇಶ, ಜನ ಕದಲಲಿಲ್ಲ. ಪೋಲೀಸರು ಲಾಠಿ ಚಾರ್ಜು ಮಾಡುತ್ತ
ಪುರಭವನದ ಪಾವಟಿಗೆಗಳನ್ನೇರಿದರು. ಕೆಲವರಿಗೆ ಪೆಟ್ಟು ಬಿತ್ತು. ಸೌಮ್ಯ ಸ್ವರೂ
ಪದ ಪ್ರಹಾರ-ಅಷ್ಟೇ ಸೌಮ್ಯವಾದ ನೋವು, ಶಾಂತಿಪ್ರಿಯರಾದ ಹೆಚ್ಚುವರಿ ಜನ
ಹತ್ತಿರದ ಬಸ್‌ಸ್ಟಾಪ್‌ಗಳಿಗೆ ಓಡಿದರು, ಕ್ಯೂ ನಿಲ್ಲಲು,
ಒಬ್ಬ ಕಿರಿಯ ಪೊಲೀಸ್ ಅಧಿಕಾರಿ ಜಾಣಪ್ಪನವರ ಗುರುತು ಹಿಡಿದ.
ಅವರಿಗೆ ಸೆಲ್ಯೂಟ್ ಕೊಟ್ಟ. ಕೈಬೆತ್ತ ಝಳಪಿಸುತ್ತ ಪುರಭವನದೊಳಕ್ಕೆ ಧಾವಿಸಿದ
ಐಜಿಪಿ.ಯವರನ್ನು ಸಮೀಪಿಸಿ ಮತ್ತೆ ಸೆಲ್ಯೂಟ್ ಕೊಟ್ಟ,
“ಸಾರ್....! ಸಾರ್ !”
“ಕತ್ತೆ ನನ್ಮಕ್ಕು ಇನ್ನೂ ಅಲ್ಲೇ ನಿಂತಿದಾರೇನೊ ?”
“ಅವರಲ್ಲ ಸಾ ”
“ಮತ್ಯಾರೂ ?”
ವಿಷಯ ತಿಳಿದ ಅಧಿಕಾರಿ ವೇದಿಕೆಯನ್ನೇರಿ ಮುಖ್ಯಮಂತ್ರಿಯ ಕಿವಿಯಲ್ಲಿ
ಉಸುರಿದ. ಅಕೆ ಕುರ್ಚಿಯಿಂದ ಚಂಗನೆದ್ದು “ಬಾಲಾಜಿ ! ಸಂಗಪ್ಪ ! ಬನ್ನಿ !”
ಎಂದು, ಪಟಪಟನೆ ವೇದಿಕೆಯಿಂದ ಇಳಿದಳು. ಎದುರಲ್ಲಿ ಐ.ಜಿ.ಪಿ., ಹಿಂದೆ ಸಂಘಟಕ
ಮಂತ್ರಿದ್ವಯರು, ಏನೋ ಆಗಿದೆ ಎಂದು ಏಳಲೆತ್ನಿಸಿದ ಕುತೂಹಲಿಗಳಿಗೆ ಸಭಿಕರ
ಒಂದೊಂದು ಸಾಲಿಗೂ ಇಬ್ಬರಂತೆ ನಿಂತಿದ್ದ ಪೋಲೀಸರ ಬೆತ್ತ ಕಾಣಿಸಿತು.
ಏನಾಗಿತ್ತು? ರಸ್ತೆಯ ಅಂಚಿನಲ್ಲಿ ಜಾಣಪ್ಪ ದಂಪತಿ ಯಾಕಿದ್ದಾರೆ? ಎಂಬುದು
ಯಾರಿಗೂ ತಿಳಿಯದು-ಅನುಭವಿಸಿದವರ ಹೊರತು. ಸೌದಾಮಿನಿ ಅಂದಳು :