ಪುಟ:ಮಿಂಚು.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

125

“ನಮಸ್ತೆ. ದಯಮಾಡಿಸ್ಬೇಕು, ಅಭೂತಪೂರ್ವ ಸಮಾರಂಭ. ಇಡೀ
ಕಲ್ಯಾಣನಗರವೇ ಇಲ್ಲಿದೆ. ಮಾನ್ಯ ಜಾಣಪ್ಪನವರ ಜನಪ್ರಿಯತೆಗೆ ಇದು ಸಾಕ್ಷಿ.
ಬನ್ನಿ ಜಾಣಪ್ಪಾಜಿ, ಬನ್ನಿ ಅವ್ವಾ, ಕಾಯಿಸಿದೆವು. ಕ್ಷಮಿಸಿ.”
ಬ್ಯಾಂಡ್ ವಾದನ ಸ್ವಾಗತ ಬಯಸಿತು, ಜಾಣಪ್ಪನವರು ಸಿಮಿತ ಕಳೆದು
ಕೊಳ್ಳಲಿಲ್ಲ. ಅವರ ಪತ್ನಿ ಸರಗಿನ ತುದಿಯಿಂದ ಕಣ್ಣೀರೊರೆಸಿಕೊಂಡುದು ಯಾರಿಗೂ
ಕಾಣಿಸಲಿಲ್ಲ. ಆರತಿ ಎತ್ತಬೇಕಾಗಿದ್ದ ನೂರು ಹುಡುಗಿಯರು ಗದ್ದಲದಲ್ಲಿ ಚೆದರಿ
ಹೋಗಿದ್ದರು. ಆರತಿ ಸಾಮಗ್ರಿಗಳು ವೇದಿಕೆಯ ಪಕ್ಕದ ಪ್ರಸಾಧನ ಕೋಣೆಯಲ್ಲಿ
ಪೋಲೀಸರ ಕಾವಲಿನಲ್ಲಿ ಸುರಕ್ಷಿತವಾಗಿದ್ದು ವು, ಕಾಣಿಕೆಗಳ ರಕ್ಷಣೆಗೆ ಸ್ವತಃ ಧನಂಜಯ
ಕುಮಾರನೇ ನಿಂತಿದ್ದ.
ಮಾನ್ಯ ಅತಿಥಿಗಳನ್ನು ವೇದಿಕೆಗೆ ಕರೆದೊಯ್ದಾಗ ಗಡಚಿಕ್ಕುವ ಕರತಾಡನ
ವಾಯಿತು. ತುಂಬಿ ಹರಿವ ಸಭಾಂಗಣ ವೇದಿಕೆಯಲ್ಲಿ ನೆಲೆಯೂರಿದವರ ಪಾಲಿಗೆ
ಟಾನಿಕ್, ಸಾಕ್ಷವಿಲ್ಲ ಪುರಾವ ಇಲ್ಲ, ಮಹಾದ್ವಾರದ ಪ್ರಕರಣವನ್ನು ತಾನು
ಮರೆತುಬಿಡಬೇಕು ಎಂದುಕೊಂಡರು ಜಾಣಪ್ಪ,
ಚಿತ್ರೀಕರಣ ತಂಡ ಕಾರ್ಯಪ್ರವೃತ್ತವಾಗಿತ್ತು. ಹಲವಾರು ಛಾಯಾಚಿತ್ರ ಕಾರರೂ ಅದರೊಡನೆ ಸೆಣಸಿದರು.
ಕಾರ್ಯಕ್ರಮ ಪಟ್ಟಿಗೆ ಅನುಗುಣವಾಗಿ, ಸಮಾರಂಭ ನಡೆಯಿತು.
ತಮ್ಮ ಮೇಲಿನ ಪ್ರೀತಿಯಿಂದ, ತಮ್ಮನ್ನು ಬೀಳ್ಕೊಡಲೆಂದೇ, ಈ ಜನಸಂದಣಿ
ಯಾಕೆ ನೆರೆದಿರಬಾರದು ಎನಿಸಿತು ಜಾಣಪ್ಪನವರಿಗೆ, ಮತ್ತೆ ಮತ್ತೆ ಆ ವಿಚಾರ ಮೂಡಿ
“ಅದೇ ಸರಿ' ಎನಿಸಿತು.
ಜಾಣಪ್ಪ ಮುಕ್ಕಾಲು ಗಂಟೆ ಬಿಗಿದರು, ಮಾನಪತ್ರ ಸ್ವೀಕರಿಸಿದ ಬಳಿಕ,
“ನಿಮ್ಮ ಮುಖ್ಯಮಂತ್ರಿಯಾಗುವ ಭಾಗ್ಯ ನನ್ನದಾಗಿತ್ತು. ತಿಳಿದೂ ತಿಳಿದೂ
ತಪ್ಪು ಮಾಡಿಲ್ಲ. ತಿಳಿಯದೆ ಏನಾದರೂ ತಪ್ಪಾಗಿದ್ದರೆ ಉಡಿಯಲ್ಲಿ ಹಾಕಿಕೊಳ್ಳಿ.
ಮನ್ನಿಸಿ, ಕೇರಳಕ್ಕೆ ಹೋಗುತ್ತಿದ್ದೇನೆ. ಶಂಕರಾಚಾರ್ಯರು ಜನ್ಮವೆತ್ತಿದ ಪುಣ್ಯ
ಭೂಮಿ, ಎಲ್ಲಿದ್ದರೇನು ? ಮಾಡೋದು ಜನಸೇವೆಯನ್ನೇ ಅಲ್ಲವೆ ?”
ಅಂತ್ಯದಲ್ಲಿ ಅವರೆಂದರು :
“ನಾನು ಕಿಷ್ಕಿಂಧೆಯ ಶಿಶು, ಇಲ್ಲಿ ಹುಟ್ಟಿ ಇಲ್ಲಿಯೇ ಬೆಳೆದವನು. ಕೊನೆಗಾಲ
ಕಳೆಯುವುದಕ್ಕೆ ಇಲ್ಲಿಗೇ ಮರಳುತ್ತೇನೆ. ಇಲ್ಲಿಯೇ ಉಸಿರಾಡಿ ದೇಹವಿಡುತ್ತೇನೆ.
ಆಗ ನನಗೊಂದು ಪುಟ್ಟ ಸೈಟು ಬೇಕು. ಮೂರಡಿ, ಆರಡಿ, ಕಿಷ್ಕಿಂಧೆಯ ನನ್ನ
ಪ್ರೀತಿಯ ಜನತೆ ಅದನ್ನು ನನಗೆ ನೀಡುತ್ತಾರೆ ಎನ್ನುವ ನಂಬಿಕೆ ನನಗಿದೆ. ನನ್ನ
ಮಮತೆಯ ಬಂಧುಗಳೇ, ನಾವು ಹೋಗಿ ಬರುತ್ತೇವೆ. ಜಯ್ ಹಿಂದ್ ! ಜಯ್
ಕಿಷ್ಕಿಂಧೆ !”
ಸನ್ಮಾನಿತರಿಗೆ ನೆನಪಿನ ಕಾಣಿಕೆಗಳು ಮೆಚ್ಚುಗೆಯಾದವು, ಹಾರಗಳು ಈಗ