ಪುಟ:ಮಿಂಚು.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

128

ಮಿಂಚು

ಆದರೆ ಮಹತ್ವದ ಸಭೆ ಇದೇಂತ ಬಾಯ್ದೆರೆಯಾಗಿ ಹೇಳಿ ಬನ್ನಿ, ನಾವು ಮತ್ತು
ವಿದ್ಯಾಧರರನ್ನು ಬಿಟ್ಟರೆ ನಾಲ್ಕು ಜನ.”
“ಸಂದೇಶ ಮುಟ್ಟಿಸೇನೆ, ಮಾತಾಜಿ."
....ಸಭೆ ಜರಗಿತು, ಮಾಸಿಕ ಸ್ಫೋಟ ಒಂದು ಕೋಟಿಯಲ್ಲಿ ಯಾವ ಮಂತ್ರಿಯ
ವಂತಿಗೆ ಎಷ್ಟು ಎಂದು, ಸಂಪುಟದಲ್ಲಿ ಇಳಿದನಿಯಲ್ಲಿ, ಚರ್ಚೆ ನಡೆಯಿತು.
“ವಿದ್ಯಾಧರರೂ ಇದ್ದಿದ್ದರೆ ಚರ್ಚೆ ಪೂರ್ಣವಾಗ್ತಿತ್ತೇನೊ..” ಎಂದ
ಬಾಲಾಜಿ.
“ವಿದ್ಯಾಧರರು ಅರ್ಥಾಶ್ವದ ಸವಾರ, ಖರ್ಚಿಗೆ ಕಡಿವಾಣ ಹಾಕೋದೇ
ಅವರ ಕಸುಬು. ಆದರೂ ಅವರ ಜತೇನೂ ಮಾತಾಡ್ತನೆ, ದಿಲ್ಲಿಯಿಂದ ಅವರು
ವಾಪಾಸಾದೈಲೆ... ನಿಮ್ಮನ್ನೆಲ್ಲ ಕಂಡು ಹಣ ಕೇಳೋದಕ್ಕೆ ರಂಗಧಾಮರಿಗೆ
ಸಂಕೋಚ, ಪ್ರತಿ ಮಂತ್ರಿಯೂ ನನ್ನ ಕೈಗೆ ಕೊಡಲಿ, ಆಗಬಹುದಾ ?”
“ಓಹೋ....”
ಬ್ಯಾಂಕ್ ಲಾಕರುಗಳಲ್ಲಿ ಇಡೋದಕ್ಕೆ ಏರ್ಪಾಟು ಮಾಡೇನೆ. ದಿಲ್ಲಿಯಿಂದ
ಪ್ರತಿ ತಿಂಗಳೂ ಬಂದು ಒಯ್ತಾರೆ. ನಮ್ಮ ರಾಜ್ಯದ್ದು ನಮ್ಮ ಹತ್ತಿರ ಇರುತ್ತೆ.”
“ತಮ್ಮ ಹತ್ತಿರವೇ ಇರಲಿ, ಮಾತಾಜಿ."
“ಬಾಲಾಜಿ, ಸಂಗಪ್ಪ ಎಲ್ಲರೂ ಕಿವಿಗೊಟ್ಟು ಕೇಳಿ, ನಮ್ಮ ಗುಪ್ತಚಾರರಿಂದ
ವರದಿ ಬಂದಿದೆ. ಸಮಾರಂಭದ ದಿವಸ ಜಾಣಪ್ಪನವರು ರಸ್ತೆಯಂಚಿನಲ್ಲಿ ಯಾಕೆ
ನಿಂತಿದ್ರು ? ಹೇಳಿ ನೋಡೋಣ.”
ಸಂಗಪ್ಪಂದ :
“ನಮಗಾಗಿ ಕಾಯ್ತಿದ್ರೇನೊ ?”
“ನೂಕು ನುಗ್ಗಲಿನಲ್ಲಿ ಸಿಕ್ಕಿ ಹಾಕ್ಕೊಂಡು, ಒಬ್ಬ ಪೋಲೀಸ್ ಅವರನ್ನು
ತಳ್ಳಿ, ಅವರ ತಲೆಗೆ ಲಾಟಿ ಬೀಸಿದ. ಜಾಣಪ್ಪ ತಪ್ಪಿಸ್ಕೊಂಡು, ಇಲ್ಲದೆ ಹೋಗಿದ್ರೆ
ಎರಡು ಹೋಳಾದ ತಲೆ ಬುರುಡೇನ ಕೇರಳ ಸರಕಾರಕ್ಕೆ ಪಾರ್ಸೆಲು ಮಾಡಬೇಕಾ
ಗಿತ್ತು.”
“ಭಯಂಕರ ! ಹೀಗೂ ಆಯ್ಕೆ ? ಆ ಪೋಲೀಸನ ಮೇಲೆ ಕೇಸು ದಾಖ
ಲಾಯ್ತಾ ?”
“ಬಹಿರಂಗ ಪಡಿಸಿದ್ರೆ ಸಂಗಪ್ಪ-ಬಾಲಾಜಿ ರಾಜಿನಾಮೆ ಕೊಡೇಕಾಗುತ್ತೆ.
ತ್ಯಾಗಪತ್ರ -ದಿಲ್ಲಿಯಲ್ಲಿ ಹೇಳೋ ಹಾಗೆ, ಜಾಣಪ್ಪನವರು ತುಟಿಪಿಟ್ಟೆನ್ನಲಿಲ್ಲವಲ್ಲ?
ದೊಡ್ಡ ಮನುಷ್ಯ, ನಿಜವಾಗಿಯೂ.”
"ಐ.ಜಿ.ಪಿ. ಏನ್ಹೇಳ್ತಾನೆ ?”
“ತಾಕೀತು ಮಾಡಿದೀನಿ. ದಕ್ಷ ಅಧಿಕಾರಿ, ಆದರೆ ಆ ಪಾಟಿ ಜನ ಮುಕರಿ
ದರೆ ಏನು ಮಾಡೋಕಾಗ್ತದೆ?"