ಪುಟ:ಮಿಂಚು.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

129

ಚೌಗುಲೆಯ ವಿದ್ಯಾಧರನೂ ಬಜೆಟಿಗೆ ಅಂತಿಮ ರೂಪ ಕೊಡುತ್ತಿದ್ದಂತೆ
ಪರಶುರಾಮ ಸಣ್ಣ ಪೇಟೆಗೆ ಹೋದ, ಧನಂಜಯಕುಮಾರನ ಅಂಗಡಿಯಲ್ಲಿ ಕಪಾಟ
ಗಳನ್ನು ಅತ್ತಿತ್ತ ಸರಿಸಿದ್ದರು. ಅವುಗಳ ಗೋಡೆಯನ್ನು ಅಲಂಕರಿಸಿತ್ತು, ಗರಿಷ್ಠ
ಪ್ರಮಾಣಕ್ಕೆ ವಿಸ್ತರಿಸಿದ್ದ ಒಂದು ಛಾಯಾ ಚಿತ್ರ, ಮುಗುಳಗುತ್ತಿದ್ದ ಸೌದಾಮಿನಿ
ದೇವಿ; ಅವರ ಹಿಂದೆ ಆತ್ಮವಿಶ್ವಾಸದಿಂದ ನಿಂತಿದ್ದ ಧನಂಜಯಕುಮಾರ್.
“ಭಾವಚಿತ್ರ ಚೆನ್ನಾಗಿದೆ,” ಎಂದ ಪರಶುರಾಮ್,
“ನೂರಾರು ಚಿತ್ರಗಳಿಂದ ಇದನ್ನು ಆರಿಸಿ ಎನ್‌ಲಾರ್ಜ್ ಮಾಡಿಸ್ಥೆ, ಸಮಾ
ರಂಭದ ನೆನಪಿಗಿರಲಿ ಅಂತ.”
“ನೀವೊಂದು ಬಿಲ್ ಕೊಡೇಕಂತೆ,”
“ತಮಾಷೆ ಮಾಡ್ತೀರಾ ಪರಶುರಾಮ್ ಸಾಹೆಬ್ ? ಅದು ನನ್ನ ಕಿಂಚಿತ್
ಸೇವೆ.”
“ನೀವು ಹಾಗೆ ಹೇಳೀರಿ ಅಂತ ಮುಖ್ಯಮಂತ್ರಿನೇ ಅಂದ್ರು. ಆದರೂ ದಾಖಲೆಗೇಂತ"
“ಒಂದಿನ್ನೂರು ರೂಪಾಯಿಗೆ ಕೊಡ್ತಾ ?”
“ಛೇ ! ಇಪ್ಪತ್ತೈದು ಸಾವಿರಕ್ಕೆ ಕೊಡಿ.”
ಅರಿವಿನ ಕಿಡಿ ಬೆಳಗಿದಂತಾಯಿತು ಸಾಹುಕಾರನಿಗೆ, ನಗೆಯ ಮುಖವಾಡವನ್ನು
ಆತ ಬದಲಾಯಿಸಲಿಲ್ಲ. ಬಿಲ್ ಸಿದ್ಧವಾಯಿತು.
“ನಮ್ಮ ಮೇಲೆ ಕೃಪೆ ಇರಲಿ, ಖಾವಂದರೆ.”
ಪರಶುರಾಮ್ ಸಾಹುಕಾರನ ಕಿವಿಯಲ್ಲಿ ಪಿಸುಗುಟ್ಟಿದ :
“ನಮ್ಮ ರಾಜ್ಯದಲ್ಲಿ ಸರಕಾರೀ ಕ್ಷೇತ್ರದಲ್ಲಿ ತಯಾರಾಗಿರೋ ರೇಷ್ಮೆ ಸೀರೆ
ಬಟ್ಟೆ ಎಲ್ಲದರ ಮಾರಾಟದ ಗುತ್ತಿಗೆ ವಹಿಸ್ಕೊಳ್ಳಿ. ಇಂಥ ವ್ಯವಸ್ಥೆಗೆ ಅವಕಾಶ
ಕೊಡೀಂತ ಮುಖ್ಯಮಂತ್ರಿಗೆ ಒಂದು ಅರ್ಜಿ ಬರೀರಿ.”
“ಅದು ಹ್ಯಾಗೆ ಬರೀಬೇಕೂಂತ ಕೊಂಚ ನೀವೇ ಹೇಳ್ಕೊಟ್ರೆ...”
“ಇನ್ನೊಂದು ದಿವಸ ಬರೀನಿ. ಇವತ್ತು ಟೈಮಾಯ್ತು.”
“ನಾನೇ ಬರಲಾ ?”
“ಅಪನಂಬಿಕೇನಾ ? ಖಂಡಿತ ಬರೀನಿ.”
ಅಷ್ಟು ಹೇಳಿ ಪರಶುರಾಮ ಬೀದಿಗಿಳಿಯುತ್ತ ಗೋಡೆಯಲ್ಲಿದ್ದ ಛಾಯಾಚಿತ್ರ
ವನ್ನು ಮತ್ತೊಮ್ಮೆ ನೋಡಿದ. ಮಾತಾಜಿಗೆ ತಿಳಿಸಬೇಕು ಎಂದು ಮನಸ್ಸಿನಲ್ಲಿ
ಟಿಪ್ಪಣಿ ಹಾಕಿಕೊಂಡ.
ಸಾಹುಕಾರ ತಾನು ಮಾಡಿಸಿ ಬಿಳಿಯ ಕಟ್ಟು ಹಾಕಿಸಿದ್ದ ಚಿತ್ರವನ್ನು ಹೆಂಡತಿಗೆ
9