ಪುಟ:ಮಿಂಚು.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



130

ಮಿಂಚು

ತೋರಿಸಿದ್ದ. ಮೊದಲು ಅವಳಿಗೆ ಅರ್ಥವಾಗಲಿಲ್ಲ. ನೆಟ್ಟ ದೃಷ್ಟಿಯಿಂದ ಕೆಲ ನಿಮಿಷ
ಅದನ್ನೆ ನೋಡಿದಳು.
ಗೊಗ್ಗರ ಧ್ವನಿಯಲ್ಲಿ ಕೇಳಿದಳು :
“ಯಾರು ಈಯಮ್ಮ?”
“ಮುಖ್ಯಮಂತ್ರಿ ಕಣೆ, ಎಷ್ಟು ಸಾರಿ ಹೇಳಿದೀನಿ..."
“ಏನೇ ಇರಲಿ. ಈ ಚಿತ್ರ ಮನೇಲಿ ಬೇಡ.”
“ಬೇಕು ಅಂದರೂ ಯಾರು ಇಲ್ಲಿ ತೂಗ ಹಾಕ್ತಾರೆ? ಅದು ಅಂಗಡಿಗೆ.
ಮುಖ್ಯಮಂತ್ರಿ ಜವಳಿ ಖರೀದಿಸುವ ಅಂಗಡೀಂತ ಬರೋ ಗಿರಾಕಿಗಳ ಸಂಖ್ಯೆ
ಹೆಚ್ಚಾಗ್ತದೆ.”
ಸಾಹುಕಾರನ ಪತ್ನಿ ಅಡುಗೆ ಮನೆಗೆ ಹೋಗಿ ಒಂದು ಲೋಟ ತಣ್ಣೀರು ಕುಡಿ
ದಳು. ಮನೆ ದೇವರ ಮುಂದೆ ನಿಂತು, 'ಮಾಯಾವಿನಿಯರಿ೦ದ ನನ್ನ ಗಂಡನನ್ನು
ರಕ್ಷಿಸು' ಎಂದು ಮೈನ ಪ್ರಾರ್ಥನೆ ಸಲ್ಲಿಸಿದಳು.
***
ಚೌಗುಲೆ ಮತ್ತು ವಿದ್ಯಾಧರ ಮುಖ್ಯಮಂತ್ರಿಯ ಭೇಟಿಗೆ ಬಂದರು.
ಮುಖ್ಯ ಕಾರ್ಯದರ್ಶಿ ಅಂದ :
"ಇದು ಗೋಪ್ಯ.”
"ಬಾಗಲು ಎಳಕೋ ಅನ್ನಿ ಪರಶುರಾಮನಿಗೆ."
ಬಾಗಲು ಸದ್ದಿಲ್ಲದೆ ಮುಚ್ಚಿಕೊಂಡಿತು.
“೧೭೫ ಕೋಟಿ ಕೊರತೆ ಬಚೆಟ್."
“ಕೊರತೆ ಬಜೆಟ್? ಸಾಧ್ಯವೇ ಇಲ್ಲ!"
ಕಾರ್ಯದರ್ಶಿ ವಿವರಿಸಿದ :
“ಇದರಿಂದ ಪ್ರಯೋಜನವಿದೆ. ಕೇಂದ್ರದಿಂದ ವಿಶೇಷ ನೆರವು ಆಗಾಗ್ಗೆ ಪಡೀ
ಬಹುದು. ಕೆಲ ತಿಂಗಳಾದ ಮೇಲೆ ತೆರಿಗೆ ಹೆಚ್ಚಿಸಬಹುದು.ಹೊಸ ತೆರಿಗೆ ಹಾಕ
ಬಹುದು. ನಾವು ಸ್ಥಿತಿವಂತರೂಂತ ತೋರಿಸಿಕೊಲ್ಲದೆ ಇರೋದೆ ಜಾಣತನ."
"ಶಿವಭಾವು, ತಲೆ ಅಂದರೆ ನಿಮ್ಮದು! ಅಲ್ಲವಾ ವಿದ್ಯಾಧರ್?"
ಹೌದು ಮಾತಜಿ,"
“ಪೀಠಿಕೆಯನ್ನಿಷ್ಟು ఓది."
ಅಲ್ಲಿತ್ತು, ಜಗತ್ತಿನಲ್ಲೇ ಬಲಿಯುತ್ತಿರುವ ಹಣಕಾಸಿನ ಮುಗ್ಗಟ್ಟು: ಅಭಿವೃದ್ಧಿ
ಹೊಂದುತ್ತಿರುವ ನಮ್ಮ ರಾಷ್ಟ್ರದ ವಿಶಿಷ್ಟ ಸಮಸ್ಯೆಗಳು, ಆ ಹಿನ್ನೆಲೆಯಲ್ಲಿ ಕಿಷ್ಕಿಂಧೆಯ
ಚಿತ್ರ.