ಪುಟ:ಮಿಂಚು.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮಿಂಚು

131

“ರಾಜ್ಯದ ನಾಯಕತ್ವಕ್ಕೆ, ಪಕ್ಷ ಸಂಪಾದಿಸಿದ ಪ್ರಚಂಡ ವಿಜಯಕ್ಕೆ ಸಂಬಂಧಿಸಿ
ಏನೂ ಇಲ್ವಲ್ಲ...."

"ಅದು ರಾಜ್ಯಪಾಲರ ಭಾಷಣದಲ್ಲಿ ಆಗಲೇ ಬಂದಿದೆ, ಮಾತಾಜಿ."
“ಹೌದು. ರಾತ್ರೆ ಓದಿ, ಬೆಳಗ್ಗೆ ಕೊಡ್ತಿನಿ."
ವಿದ್ಯಾಧರ ಹಾಳೆಗಳನ್ನು ಬ್ರೀಫ್ ಕೇಸಿನಲ್ಲಿರಿಸಿ, ಬೀಗ ತಗಲಿಸಿ, ಬೀಗದ ಕೈ
ಸಹಿತ ಮುಖ್ಯಮಂತ್ರಿಯ ಮೇಜಿನ ಮೇಲಿರಿಸಿದ. ಯಾವ ಸ್ಪರ್ಶ ಸುಖವೂ
ಲಭಿಸದೆ ಮರುದಿನ ಅವು ಮರಳಿದುವೆನ್ನಿ. ಮುಖ್ಯಮಂತ್ರಿ ಕೇಳಿದಳು :
"ಬಜೆಟ್ ಅಧಿವೇಶನದ ನೋಟೀಸು ಹೋಗಿದೆಯೊ ಖಾತರಿ ಮಾಡಿಕೊಳ್ಳಿ."
ಶಾಸಕರ ಭವನದಲ್ಲಿ ಗಿಜಿಬಿಜಿ. ನಗರದ ಹೊರಗಿನ ಶಾಸಕರ ಜತೆಗೆ ಊರಿನ
ಬೆಂಬಲಿಗರು ಬಂದಿದ್ದರು. ಸರಕಾರೀ ಕಚೇರಿಯಲ್ಲಿ ಬೆಳಗಿನ ಹೊತ್ತು ಶಾಸಕರದೇ
ಓಡಾಟ, ಮಧಾಹ್ನದ ಅನಂತರ ವಿಧಾನಮಂಡಲದ ಅಧಿವೇಶನ.
ಇಂದು ಬಜೆಟ್ ಮಂಡನೆಯೆಂದು ವಿಶೇಷ ಗದ್ದಲ, ಪ್ರೇಕ್ಷಕರ ಗ್ಯಾಲರಿ,
ಪ್ರೆಸ್ ಗಾಲರಿ, ಅಧಿಕಾರಿಗಳ ಗಾಲರಿ ಎಲ್ಲ ಭರ್ತಿ. ಸಭಾಧ್ಯಕ್ಷರನ್ನೂ ಒಳಗೊಂಡು
ಸದಸ್ಯರ ಒಟ್ಟು ಸಂಖ್ಯೆ ೧೬೨. ಸಭಾಪತಿಯನ್ನು ಕಳೆದರೆ ೧೬೧. ಒಬ್ಬರದು
ಸಮತಾಪಕ್ಷ. ಉಳಿದ ೧೬೦ ರಲ್ಲಿ ಐವರು ಪ್ರಜಾಪಕ್ಷದದರು. ೧೫೫ ಮಂದಿ ರಾಷ್ಟ್ರ
ಪಕ್ಷದವರು. ಠೀಕೋ ಠಾಕ್ ದಿರಿಸಿನ ಶಾಸಕರು ಬರತೊಡಗಿದರು. ಶಾಸಕರ
ಭವನದಲ್ಲಿ ವಸತಿ ಮಾಡಿದವರು ಕಾಲ್ನಡಿಗೆಯಲ್ಲಿ, ನಗರದಲ್ಲಿ ಮನೆಗಳಿದ್ದವರು ಕಾರು
ಗಳಲ್ಲಿ, ಎಲ್ಲೋ ಕೆಲವರು ಆಟೋರಿಕ್ಷಾಗಳಲ್ಲಿ.
ಮುಖ್ಯಮಂತ್ರಿಯ ಆಗಮನವಾಯಿತು. ಆಳುವ ಪಕ್ಷದವರು ಹರ್ಷೋದ್ಗಾರ
ಮಾಡಿದರು. ಸಪ್ತರ್ಷಿಮಂಡಲ ಪೂರ್ಣವಾಯಿತು, ಕರಿಯ ಬ್ರೀಫ್ಕೇಸ್ ಹಿಡಿದು
ವಿದ್ಯಾಧರ ಬಂದೊಡನೆ ಏಳು ನಕ್ಷತ್ರಗಳೂ ತಮ್ಮ ತಮ್ಮ ಸ್ಥಾನಗಳಲ್ಲಿ ಮಿನುಗಿದವು.
'ನಂದಿಕೋಲಿ'ನ ಹಿಂದೆ ಸಭಾಪತಿ ಲಕ್ಷ್ಮೀಪತಯ್ಯ ತಮ್ಮ ಕೊಠಡಿಯಿ೦ದ ನಡೆದು
ಬಂದರು, ಚಪ್ಪಾಳೆಗಳ ಸ್ವಾಾಗತ.
ಸಭಾಪತಿ, ಒಂದು ಗಂಟೆಗೆ ಸರಿಯಾಗಿ ಅಯವ್ಯಯ ಮುಂಗಡಪತ್ರ ಮಂಡಿ
ಸలు ಅರ್ಥಮಂತ್ರಿಯನ್ನು 'ಕರೆದರು.' ಪೀಠದಿಂದೆದ್ದು ನಿಂತು ವಾಚನ. ఎల్ల
ಶಾಸಕರಿಗೂ ಮುದ್ರಿತ ಪ್ರತಿಗಳ ವಿತರಣೆಯಾಯಿತು.
ವಿದ್ಯಾಧರ ಓದಿದ, ಓದಿದ. ತನ್ನ ಮಾತಿನ ಓಘಕ್ಕೆ ತಾನೇ ಮಾರುಹೋದ.
ಸಾಹಕರು ಐದು ನಿಮಿಷ ಕುತೂಹಲಿಗಳಾಗಿದ್ದರು. ಬಳಿಕ ಬೋರೆನಿಸಿತು. ಆಕಳಿಸಿ
ದರು, ತೂಕಡಿಸಿದರು. ಅಲ್ಲಲ್ಲಿ ಕೆಲವರು ಪರಸ್ಪರ ಪಿಸುಮಾತನಾಡಿದರು.
ಅಂತೂ ಒಂದು ಗಂಟೆ ಕಾಲದ ಭೋರ್ಗರೆತದ ಬಳಿಕ-ಸ್ಪಷ್ಟವಾದದ್ದು ಇಷ್ಟು.
ಕಿಷ್ಟಿಂಧೆ ರಾಜ್ಯದ್ದು ೧೭೫ ಕೋಟಿ ಕೊರತೆಯ ಬಜೆಟ್, ಆದರೆ ಹೊಸ ತೆರಿಗೆಗಳಿಲ್ಲ.
ಪ್ರತಿಕ್ರಿಯೆಗಳಿಗಾಗಿ ಪತ್ರಿಕಾಪ್ರತಿನಿಧಿಗಳು ಚುರುಕಾಗಿ ಚಲಿಸಿದರು.