ಪುಟ:ಮಿಂಚು.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

134

ಮಿಂಚು

....ಆ ರಾತ್ರಿ ಗುಪ್ತಚಾರದಳದ ಮುಖ್ಯಸ್ಥ ಕಾಣಲು ಬಂದ.
ಸಮತಾಪಕ್ಷದ ಅಧೀನದಲ್ಲಿದ್ದ ರೈತ-ಕಾರ್ಮಿಕ ಸಂಘಟನೆಗಳು ರಾಜ್ಯದ
ಆದ್ಯಂತ ಹೋರಾಟದ ಮಾತು ಆಡಲು ತೊಡಗಿದ್ದು ವಂತೆ ಬೇಡಿಕೆ (ಆಗ್ರಹದ
ಕೇಳಿಕೆ)ಗಳ ಪಟ್ಟಿ ಸಿದ್ಧವಾಗುತ್ತಿದೆಯಂತೆ, ವಿಧಾನಸಭೆಯ ಅಧಿವೇಶನ ನಡೆಯು
ತಿರುವಾಗಲೇ ಕಾವ್ಯಸೌಧ ಚಲೋ ಮಾಡ್ತಾರಂತೆ. ರಾಜ್ಯದ ವಿವಿಧ ಮೂಲೆ
ಗಳಿಂದ ರೈಲು-ಬಸ್ಸು-ಲಾರಿಗಳಲ್ಲಿ ಬಂದು ರಾಜಧಾನಿಯಲ್ಲಿ ಜಮೆಯಾಗ್ತಾರಂತೆ.
“ಘೋಷಣೆಗಳೇನು ತಿಳಿಯಿತೆ ?” ಮುಖ್ಯಮಂತ್ರಿಯ ಪ್ರಶ್ನೆ. ಅಧಿಕಾರಿಯ ವರದಿ :
“ಡೌನ್ ವಿದ್ ಮಾತಾಜಿ ! ರಾಷ್ಟ್ರಪಕ್ಷ ಮುರ್ದಾಬಾದ್ ! ಉಳುವವನಿಗೆ
ಹೊಲ ! ಕೈಗಾರಿಕೆಗಳ ರಾಷ್ಟ್ರೀಕರಣ...!”
“ಸರಿ, ಸರಿ, ಮಾತಾಜಿ ವಿಚಾರ ಬಿಟ್ಟರೆ ಹೊಸದೇನೂ ಇಲ್ಲ. ಐಜಿಪಿಯವ
ರಿಗೆ ತಿಳಿಸಿದಿರೊ ?”
"ಇಲ್ಲ. ಮೊದಲು ತಮಗೆ ವರದಿ ಒಪ್ಪಿಸಿ”
“ಈಗಲೇ ಹೋಗಿ ಅವರನ್ನು ಭೇಟಿ ಮಾಡಿ, ನಾಳೆ_”
“ಭಾನುವಾರ.”
“ಏನು ಭಾನುವಾರವಾದರೆ? ಬೆಳಗ್ಗೆ ಬಂದು ನನ್ನನ್ನು ಕಾಣಬೇಕೂಂತ ಹೇಳಿ.”
“ಹೇಳ್ತೀನಿ, ಮಾತಾಜಿ."
ಮಾರನೆಯ ದಿನ ಬೆಳಗ್ಗೆ ಐಜಿಪಿ ಗೃಹಕಾಯ್ಯಾಲಯಕ್ಕೆ ಬಂದರು,
“ರಾಜಕೀಯವಾಗಿ ಸಮತಾಪಕ್ಷ ಬರಿ ಸೊನ್ನೆ” ಎಂದಳು ಮುಖ್ಯಮಂತ್ರಿ.
"ಆದರೆ ಮಿಸ್ಟಿಫ್ ಪೊಟೆನ್ಸಿಯಲ್...”
“ಇದೆ, ಒಮ್ಮೇನೆ.”
“ಚಲೋ-ಯಾವತ್ತೂಂತ ತಿಳಿತೆ ?”
ಗೋಪ್ಯವಾಗಿಟ್ಟಿದ್ದಾರೆ. ಆದರೆ ಗುಪ್ತಚಾರದಳದ ಮುಖ್ಯಸ್ಥರಿಗೆ ಇವತ್ತು
ನಸುಕಿನಲ್ಲಿ ಬಂದಿರೋ ಸಂದೇಶದ ಪ್ರಕಾರ, ನಾಳೆ ಅಲ್ಲ. ಮೇಲಣ ಸೋಮವಾರ
ಅಂತೆ,”
"ಅದರ ಹಿಂದಿನ ಶನಿವಾರವೇ ಅಧಿವೇಶನ ಮುಕ್ತಾಯಗೊಳಿಸಿದರೆ ?”
“ಸರಕಾರ ಹೆದರಿಡು ಅಂತ ಜನ ಭಾವಿಸಿಯಾರು,”.
“ತಮಾಷೆಗೆ ಹೇಳೆ. ಸೆಕ್ಷನ್ ೧೪೪ ತಾನೆ ? ಮುಂಜಾಗರೂಕತೆ ಕ್ರಮವಾಗಿ
ಮುಖಂಡರನ್ನೆಲ್ಲ ದಸ್ತಗಿರಿ ಮಾಡ್ತೀರಿ, ಅಲ್ವ ?”
“ಕಾವ್ಯಸೌಧದ ಒಂದು ಮೈಲು ಸುತ್ತಳತೇಲಿ ನಿಷೇಧಾಜ್ಞೆ ಸಾಕು:"
“ಲಾಠಿಪ್ರಹಾರ, ಅಶ್ರುವಾಯು, ಕಂಡಲ್ಲಿ ಗುಂಡು-ಯಾವುದಕ್ಕೂ ಹೆದರ
ಬೇಡಿ ! ನನ್ನ ಪೂರ್ತಿ ಬೆಂಬಲ ನಿಮಗಿದೆ !”