ಪುಟ:ಮಿಂಚು.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

135

“ಅಧಿವೇಶನ ಇರೋದರಿಂದ ಪ್ರತಿಪಕ್ಷದವರು ಗಲಾಟೆ ಮಾಡಬಹುದು:”
“ಅದರ ಗೊಡವೆ ನಿಮಗ್ಯಾಕೆ ? ಸದನದಲ್ಲಿ ೧೪೪ನೇ ಸೆಕ್ಷನ್ ನನ್ನಿಂದ ಜಾರಿ
ಆಗ್ತದೆ !"
“ನಾನು ಹೊರಡ್ತಾ ?”
“ಕಾಫಿ ತಗೊಂಡು ಹೋಗಿ,”
ಸಮತಾ ಪಕ್ಷಕ್ಕೆ ಅದು ಅಳಿವು ಉಳಿವಿನ ಪ್ರಶ್ನೆ, ಅಂಥ ಪ್ರಸಂಗಗಳಲ್ಲಿ ವೈರಿ
(ಸರಕಾರ) ಕೈಗೊಳ್ಳುವ ಕ್ರಮ ಅವರಿಗೆ ತಿಳಿಯದ್ದಲ್ಲ. ಆದಷ್ಟು ಗುಟ್ಟಾಗಿ ಬೇರೆ
ಬೇರೆಯಾಗಿ ಹೊರಟು, ಪ್ರದರ್ಶನದ ಹಿಂದಿನ ಸಂಜೆ ಸ್ವಾತಂತ್ರ್ಯೋದ್ಯಾನದಲ್ಲಿ
ಒಟ್ಟಾಗಬೇಕು. ಸಣ್ಣ ಸಣ್ಣ ಗುಂಪುಗಳಲ್ಲಿ ನಗರದ ನಾನಾ ಮೂಲೆಗಳಿಂದ ಸ್ಥಳೀಯರು
ಬರಬೇಕು, ಮೌನವಾಗಿ, ಬಳಿಕ ಮೆರವಣಿಗೆ, ಭಾರೀ ಪೋಲೀಸ್ ಪಡೆಯಾದರೆ
ತಕ್ಷಣ ಚೆದರಿ, ಮಧ್ಯಾಹಕ್ಕೆ ಸರಿಯಾಗಿ ಕಾವ್ಯಸೌಧ ಶಾಸನ ಸೌಧಗಳ ಮಹಾದ್ವಾರ
ಗಳಲ್ಲಿ ಇರಬೇಕು....
ಬಂಧನಕ್ಕೆ ಮುಖಂಡರು ಸಿಗಲಿಲ್ಲ: ರೈತರೂ ಕಾರ್ಮಿಕರೂ ಕಣ್ಣು ಮುಚ್ಚಾಲೆ
ಆಡಿದರು, ಪೋಲೀಸರ ಜತ ಸಂಘಟನೆಗಳ ಬಾವುಟಗಳು ಹಾರಾಡಿದುವು.
ಘೋಷಣೆಗಳು ಬಲಗೊಂಡುವು, ದಂಡಪಾಣಿ ಮಟ್ಟಲುಗಳ ಮೇಲೆ ನಿಂತು ಭಾಷಣ
ಆರಂಭಿಸಿದ :
“ಸಂಗಾತಿಗಳೇ ! ಕಿಷ್ಕಿಂಧೆಯ ಶ್ರಮಜೀವಿಗಳ ಹೋರಾಟದ ಇತಿಹಾಸದಲ್ಲಿ
ಇದು ಅವಿಸ್ಮರಣೀಯ ದಿನ.”
ಮುಖ್ಯಮಂತ್ರಿ ಅಬ್ಬರಿಸಿದ್ದರೂ ಐ.ಜಿ.ಪಿ, ತುಸು ಸೌಮ್ಯವಾಗಿ ವರ್ತಿಸಿದ್ದ.
ಮುಖ್ಯಮಂತ್ರಿಯ ಪ್ರೀತ್ಯರ್ಥ ಕೊನೆಯ ಹಂತದಲ್ಲಿ ಶಸ್ತ್ರ ಪ್ರಯೋಗಿಸಿದರಾಯಿತು
ಎಂದು ಆತ ಜೀಪಿನಲ್ಲಿ ಮ್ಯಾಜಿಸ್ಟ್ರೇಟರ ಜತೆ ಕುಳಿತು, ನಡೆಯುತ್ತಿದ್ದುದನ್ನು
ನೋಡಿದ,
“ಮುಖ್ಯಮಂತ್ರಿ ಸಿಟ್ಟಾಗಿದ್ದಾರೆ” ಎಂದು ಸುದ್ದಿ ಬಂತು.
ಮ್ಯಾಜಿಸ್ಟ್ರೇಟರು ಎಚ್ಚರಿಕೆಯ “ಕೇಳಿರಿ ! ಕೇಳಿರಿ!” ಗಂಟೆ ಬಾರಿಸಿದರು.
ಬಾವುಟಗಳಾಗಲೀ ಭಿತ್ತಿಪತ್ರಗಳಾಗಲೀ ಜನರಾಗಲೀ ಕದಲಲಿಲ್ಲ. ಪೋಲೀಸರ
ತುಕಡಿಯಿಂದ ಲಾಠಿ ಪ್ರಹಾರ ನಡೆಯಿತು, ದಂಡಪಾಣಿಯನ್ನು ಕೆಳಕ್ಕೆ ಎಳೆದು
ತಂದರು ಲಾಠಿಯಿಂದ ಹೊಡೆದರು: ಹಣೆಯಿಂದ ರಕ್ತ ಚಿಮ್ಮಿತು ಬೀಸಾಡು
ತಿದ್ದ ಲಾಠಿಗಳಿಗೆ ಇದಿರಾಗಿ ಗಂಟಲುಗಳು ಮಾತಾಡಿದುವು :
__“ದುಷ್ಟ ಸರಕಾರ ನಾಶವಾಗಲಿ !”
__"ಡೌನ್ ವಿದ್ ಮಾತಾಜಿ !”
__“ಪೋಲೀಸ್ ದಬ್ಬಾಳಿಕೆಗೆ ಧಿಕ್ಕಾರ !”
ಶಾಸಕರು ಸದನಕ್ಕೆ ಹೋಗುವುದರ ಬದಲು ಹೊರಕ್ಕಿಳಿದರು. ಬಿದ್ದಿದ್ದ