ಪುಟ:ಮಿಂಚು.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

140

ಮಿಂಚು

“ತುತೂರಿ ಅಂತ ಒಂದು ಪತ್ರಿಕೆ ಇತ್ತಂತಲ್ಲ_ಅದೀಗ ಪ್ರಕಟವಾಗಿಲ್ಲವೊ?”
ಇಲ್ಲ, ಮಾತಾಜಿ. ಅದರ ಎಡಿಟರು ವಿಷಕಂಠ ಒಮ್ಮೆ ಒಂದು ಕೇಸಿನಲ್ಲಿ
ಸಿಕ್ಕಿಹಾಕ್ಕೊಂಡ.”
“ಏನು ಕೇಸು ?”
ಬಾರ್‌ನಲ್ಲಿ ಕುಡಿದು ದಾಂಧಲೆ ಮಾಡಿದ್ದು.”
"ಅಷ್ಟೇನೊ ?”
“ಪೋಲೀಸರು ಅಲ್ಲಿಗೆ ಬಂದಾಗ ಒಬ್ಬ ಕಾನ್ ಸ್ಟೇಬಲ್ ಮೇಲೆ ಕೈ ಮಾಡ್ಡ.
ಲಾಕಪ್ಪಿಗೆ ಹಾಕಿದ್ರು. ಮಾರನೇ ದಿವಸ ಬಿಟ್ರು. ಅದರೆ ಅಲ್ಲಿ ಆತಿಥ್ಯ ಹೇಗಿತ್ತು
ಅಂದರೆ, ಕಲ್ಯಾಣನಗರವನ್ನೇ ಬಿಟ್ಟು ಆತ ಓಡಿ ಹೋದ. ಈಗ ಚೆನ್ನೈಯಲ್ಲಿದ್ದಾನೆ
ಅಂತ ಸುದ್ದಿ.”
“ಪಾಪ ! ಮಜಮಜವಾಗಿ ಬರೀತಿದ್ದನಂತೆ.”
“ತುತೂರಿ ಪೀತ ಪತ್ರಿಕೆ ಜಾತೀದ್ದು. ಈಗ ಅಂಥ ಬರವಣಿಗೆ ಕಮ್ಮಿ.”
“ಸುಲೋಚನಾಬಾಯಿ ಎಂಬವರು ಕಾರ್ಯದರ್ಶಿನಿಯಾಗಿರೋ ಒಂದು
ಅನಾಥ ಆಶ್ರಮ ಸಹಾಯಧನ ಕೇಳಿದೆ. ಅಲ್ಲಿ ಹಣ ಪೋಲಾಗ್ತಿದೇಂತ ಒಂದು ತಳ್ಳಿ
ಅರ್ಜಿಯೂ ಬಂದಿದೆ. ಸ್ವಲ್ಪ ತನಿಖೆ ನಡೆಸಿ ವರದಿ ಕೊಡಿ. ಸುಮ್ಮಸುಮ್ಮನೆ
ಸರಕಾರದ ಹಣ ನೀಡೋದು ನನಗಿಷ್ಟವಿಲ್ಲ.”
ಅಧಿಕಾರಿ ಡಯರಿ ತೆಗೆದು ಏನನ್ನೂ ಗುರುತು ಮಾಡಿಕೊಂಡು, ವಂದಿಸಿ
ಹೊರಬಂದ.
ಸಂಜೆ ಹರಟೆಯ ವೇಳೆ ವಿಷಯ ತಿಳಿದ ಐ.ಜಿ.ಪಿ. ಅಂದರು ;
“ಆ ಸುಲೋಚನಾಬಾಯಿನೂ ನನ್ನ ಮಿಸೆಸೂ ಸ್ನೇಹಿತ್ರು. ನಮ್ಮವರೂ
ಆಶ್ರಮದ ಕಮಿಟಿಲಿದಾರೆ. ಹಿಂದೆ ಒಬ್ಬಳು ಆಶ್ರಮದ ಸಂಚಾಲಕಿ ಅಂತ ಮಜ
ಮಾಡ್ತಿದ್ಲಂತೆ. ಆಶ್ರಮದಿಂದ ಅವಳನ್ನು ಹೊರಹಾಕಿ ಹೊಸ ವ್ಯವಸ್ಥೆ ಮಾಡಿ
ದ್ರಂತೆ. ಸುಲೋಚನಾಬಾಯಿನ ಕಂಡರೆ ನಿಮ್ಮ ವರದಿಗೆ ಗ್ರಾಸ ಸಿಗುತ್ತೆ. ಒಂದು
ಉಪಕಾರ ಮಾಡಿ, ನನ್ನ ಮಿಸೆಸ್‌ನ ಇದರಿಂದ ಬಿಟ್ಬಿಡಿ !”
ಅಲ್ಲಿಂದ ಸುಲೋಚನಾಬಾಯಿಯ ಮನೆಗೆ. ಆಶ್ರಮದಿಂದ ಆಗ ತಾನೆ
ಮರಳಿದ್ದರು ಅಧ್ಯಕ್ಷೆ. ಆಕೆಯ ಪ್ರಾಧ್ಯಾಪಕಪತಿ ಹೊರಬಂದು ಏನು ಎತ್ತ ಎನ್ನಲಿಲ್ಲ.
“ಸರಕಾರದ ಸಹಾಯಧನ ಕೇಳಿದೀರಂತಲ್ಲ ? ಸ್ವಲ್ಪ ಮಾಹಿತಿ ಬೇಕಾಗಿತ್ತು,
ನಾನು ಸ್ಪೆಶಲ್ ಬ್ರಾಂಚಿನವನು.”
"ಅರ್ಜಿಯ ಜತೆಗೆ ನಮ್ಮ ವಾರ್ಷಿಕ ವರದಿ ಇಟ್ಟಿದೆ.”
“ಅದು ಕಾರಸೌಧದಲ್ಲಿರಬೇಕು. ನಿಮ್ಮಲ್ಲಿದ್ದರೆ ಒಂದು ಪ್ರತಿ ಕೊಡಿ.”
ದೊರೆತ ಪ್ರತಿಯನ್ನು ಓದಿದ. ಮಂಡಲಿಯ ಸದಸ್ಯ ಸದಸ್ಯೆಯರ ಪಟ್ಟಿಯಲ್ಲಿ