ಪುಟ:ಮಿಂಚು.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

141

ಐ.ಜಿ.ಪಿ.ಯವರ ಪತ್ನಿಯ ಹೆಸರಿತ್ತು. ಆದರೆ ಪತಿ ಯಾರು ಎಂದು ನಮೂದಿಸಿರ
ಲಿಲ್ಲ. ಒಂದಿಷ್ಟು ಸಮಾಧಾನ ಅಧಿಕಾರಿಗೆ.
“ಹಿಂದೆ ಒಬ್ಬಾಕೆ ಸಂಚಾಲಕಿಯಾಗಿದ್ದು ಕೊಂಡು ಅನಾಥಾಶ್ರಮವನ್ನ ಹಾಳು
ಕೆಡವಿದಳಂತಲ್ಲ ?”
"ಹ,ಪುಟ್ಟವ್ವ ಅಂತ. ಅವಳಿಗೆ ಹಿರಿಯ ಪುಢಾರಿಗಳ ಬೆಂಬಲ ಇತ್ತು.
'ತುತೂರಿ' ಅನ್ನೋ ಒಂದು ಪತ್ರಿಕೆ ಆಗ ಪ್ರಕಟವಾಗಿತ್ತು. ಅದರಲ್ಲಿ ಅವಳ
ಕಥೆಯೆಲ್ಲ ಅಚ್ಚಾಗಿ ಅವಳು ಈ ಊರನ್ನೇ ಬಿಟ್ಲು. ಹಣ ಸಹಾಯ ಸಿಗಬಹುದು
ಅಂತೀರಾ ? ನೀವೊಮ್ಮ ಆಶ್ರಮ ನೋಡಿದ್ದರೆ ಚೆನ್ನಾಗಿತ್ತು.”
“ಏನೂ ಬೇಡಿ. ನಾನು ಬರೆಯೋದು ಅನುಕೂಲ ವರದಿ. ನನ್ನ ಕುತೂಹಲ
ಕೋಸ್ಕರ ಒಂದು ಪ್ರಶ್ನೆ ಕೇಳಲೆ ?”
"ಕೇಳಿ".
"ಆ ಪುಢಾರಿಗಳು ಯಾರು ಹೇಳ್ತೀರಾ ? ಹಳೆಯ 'ತುತೂರಿ' ಪ್ರತಿಗಳು
ಸಿಗೋದು ಕಷ್ಟ. ಹೀಗಾಗಿ_ಈ ಮಾಹಿತೀನ ನನ್ನ ವರದೀಲಿ ಸೇರಿಸೋದಿಲ್ಲ.
ಮಾತುಕೊಡ್ತೀನಿ.”
ಹೇಳಬೇಕೋ ಬೇಡವೋ ಎಂದು ಯೋಚಿಸಿ, ಮೌನವನ್ನು ಮುರಿದು,
ಸುಲೋಚನಾಬಾಯಿ ಅಂದಳು :
“ಈಗ ಪ್ರತಿಪಕ್ಷದ ಮುಖಂಡರಾಗಿದ್ದಾರಲ್ಲ-ನಾಯಕ್, ಇನ್ನೊಬ್ಬರು ಮಾಜಿ
ಶಾಸಕ ರಂಗಸ್ವಾಮಿ.”
“ರಾಷ್ಟಪಕ್ಷದವರು.”
“ಹೌದು, ...ಮಿಸಸ್ ಐ.ಜಿ.ಪಿ.ಕಮಿಟಿಲಿದಾರೆ. ನಾವು ಸಹಪಾಠಿಗಳಾಗಿದ್ವಿ.
“ಹೆಸರು ನೋಡಿದೆ. ಸಂತೋಷ, ನನ್ನ ವರದಿ ವಿಷಯ ಮರೆತ್ಬಿಡಿ, ಹಣ
ಬೇಗನೆ ಬಿಡುಗಡೆಯಾಗ್ತದೆ.”
“ನಿಮಗೆ ಉಪಕೃತೆ.”
“ಬರ್ತೇನೆ. ನಿಮ್ಮ ಯಜಮಾನರಿಗೆ ವಿಷಯ ತಿಳಿಸಿಬಿಡಿ. ಆಲ್ ದ ಬೆಸ್ಟ್”
ಗುಪ್ತಚಾರ ದಳದ ಮುಖ್ಯಸ್ಥನ ವರದಿ ಓದಿ ಸೌದಾಮಿನಿ ತಪ್ತಳಾಗಲಿಲ್ಲ:
“ನಗರದ ಆ ಭಾಗದಲ್ಲಿ ಆಶ್ರಮ ಗೌರವದ ಸ್ಥಾನ ಪಡೆದಿದೆ. ಸುಮಾರು ಒಂದು
ಲಕ್ಷವನ್ನಾದರೂ ಮಾನ್ಯ ಮುಖ್ಯಮಂತ್ರಿಯವರು ಮಂಜೂರು ಮಾಡಿದರೆ ತಮ್ಮ
ಕೀರ್ತಿ ಅಜರಾಮರವಾಗ್ತದೆ. ಯಾವ ಚುನಾವಣೆಯಲ್ಲೇ ಆಗಲಿ ಆ ಕ್ಷೇತ್ರದಿಂದ
ಮುಖ್ಯಮಂತ್ರಿಯ ಅಭ್ಯರ್ಥಿ ಆರಿಸಿಬರುವುದರಲ್ಲಿ ಸಂದೇಹವಿಲ್ಲ. ಸುತ್ತು ಮುತ್ತಲಿನ
ಹಲವರಿಂದ ರಹಸ್ಯ ಸಾಕ್ಷ ಸಂಗ್ರಹಿಸಿದ್ದೇನೆ...”
ಇದು ವರದಿಯಲ್ಲಿದ್ದ ಮುಖ್ಯ ಭಾಗ. ದಂಡಿಸಿ ಸೇಡು ತೀರಿಸಿಕೊಳ್ಳುವುದು
ಆಗದಿದ್ದರೆ, ಔದಾರ್ಯ ಪ್ರದರ್ಶನ ಮಾಡಿ ಕೀರ್ತಿ ಗಳಿಸೋಣ ಎಂದು ಯೋಚಿಸಿದಳು