ಪುಟ:ಮಿಂಚು.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

9

“ಏನಾಯ್ತು?”
“ಅದೊಂದು ದೊಡ್ಡ ಕಥೆ. ಬರಿ ಕೈ ಎನ್ನಬೇಡಿ. ನನ್ನನ್ನೇ ಕಾಣಿಕೆಯಾಗಿ ನಾನು ಒಪ್ಪಿಸ್ತಿದೀನಿ.”
“ನೀನು ಮೊದ್ದು, ಮುದ್ದು. ಕೂತ್ಕೊ.”
ಇಬ್ಬರೂ ಕುಳಿತರು. ಸೋಫಾ ಕುಸಿಯಿತು.
“ಈ ಫ್ಲ್ಯಾಟ್ ಈಗ ನನ್ನ ಸ್ವಂತದ್ದು.”
“ನಿಮ್ಮ ಸಾಧನೆ ದೊಡ್ಡದು.”
“ನೀನು ಕಲ್ಯಾಣನಗರಕ್ಕೆ ಹೊರಟಾಗ ಗೋಡೆಗಳಿಗೆ ಬಣ್ಣ ಲೇಪನ ನಡೆದಿತ್ತು. ವಿಳಾಸ ಸಿದ್ಧವಾಗಿತ್ತು. ನೀನು ಕೇಳಿ ಬರಕೊಂಡೆ.”
“ಅಂದೆನಲ್ಲ, ಕಾಗದ ಕೂಡಾ ಬರೀಲಿಲ್ಲ ಅಂತ. ಅಂತೂ ಭವ್ಯ ವಸತಿ. ಅವತ್ತು ನೀವು ವಿಳಾಸ ಕೊಟ್ಟದ್ದರಿಂದ ನೇರ ಬಂದು ಕರೆಗಂಟೆ ಒತ್ತಿದೆ. ನನ್ನ ದೇವರಿಗೆ ಅದು ಕೇಳಿಸ್ತು.”
ಹುಡುಗಿಯತ್ತ ನೋಡಿ,
-"ಚಹಾ” ಅಂದಳು, ಮೃದುಲಾಬೆನ್.
ಆ ಕ್ರಿಯೆ ಮುಗಿದೊಡನೆ ಸೂಚನೆ ಬಂತು;
“ಆಂಟಿಗೆ ಗೆಸ್ಟ್ ರೂಮ್ ತೋರಿಸು.”
ಹಾಗೆ ಹೇಳಿದವಳು ಮುಂದುವರಿಸಿ ಅಂದಳು;
“ಬಿಡು ನಾನೇ ಕರಕೊಂಡು ಹೋಗ್ತೀನಿ. ಅವರ ಸಾಮಾನು ಒಯ್ದು ಇಡು. ಬಾ ಪುಟ್ಟ. ಮನೆ ನೋಡುವಿಯಂತೆ.”
ಮೂರನೆಯ ಮಹಡಿ. ಲಿಫ್ಟ್‌ನಲ್ಲಿ ಬಂದಿದ್ದಳು ಪುಟ್ಟವ್ವ. ರಸ್ತೆಯಿಂದ ನೋಡಿದಾಗ ಚಿಕ್ಕದಾಗಿ ಕಂಡಿತ್ತು. ಬಿಲದಂತೆ. ವಾಸ್ತವವಾಗಿ ಇದು ಬಿಲವಲ್ಲ, ಹುತ್ತ. ಮೂರು ಬೆಡ್‌ರೂಮ್‌ಗಳು.
"ಇದು ಮಾಸ್ಟರ್ ರೂಮ್. ಆಂದರೆ ನನ್ನದು.”
“ನಿಮ್ಮ ಸೋದರಳಿಯ ಇದ್ದನಲ್ಲ ?”
“ಮದುವೆ ಮಾಡ್ಕೊಂಡು ಬೇರೆಯಾದ. ವರ್ಸೋವಾದಲ್ಲಿ ಎರಡು ಬೆಡ್ ರೂಮ್ ಫ್ಲ್ಯಾಟ್ ತೆಗೆಸಿಕೊಟ್ಟಿದ್ದೀನಿ.”
ಪುಟ್ಟವ್ವನ ಹೊಟ್ಟೆಯೊಳಗೇನೂ ಕುಟುಕಿದಂತಾಯಿತು. ಮೂರ್ಖಳಂತೆ ಕಲ್ಯಾಣನಗರದ ಮರೀಚಿಕೆಯನ್ನು ಬೆನ್ನಟ್ಟಿದೆ. ಮೃದುಲಾಬೆನ್ ಆ ಕ್ಷಣ ಆ ವಿಷಯ ವನ್ನು ಕುರಿತೇ__
“ನೀನು ದುಡುಕಿದೆ, ಪುಟ್ಟಾ. ಆ ರಂಗ....ನಾಥ-ಅಲ್ಲ ?”
“....ಸ್ವಾಮಿ.”
“ಅವನ ಬಲೆಗೆ ಬಿದ್ದೆ. ಇಲ್ಲೇ ಇದ್ದಿದ್ದರೆ ಈ ವೇಳೆಗೆ ನೀನೂ ಒಂದು