ಪುಟ:ಮಿಂಚು.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

145



೧೬

ಪ್ರೀತಿಯ ಬೆಹೆನ್ ಜಿ,
ನೀವು ಮುಖ್ಯಮಂತ್ರಿಯಾದ ಮಾರನೆಯ ದಿನವೊ ಮೂರನೆಯ
ದಿನವೊ ವಿನೋದ ಆರೆಂಟು ಪತ್ರಿಕೆಗಳನ್ನು ಹರಡಿ “ಇವರು ಯಾರು?
ಹೇಳಿ, ನೋಡೋಣ" ಎಂದ. “ಕಿಸ್-ಕಿಂಧೆಯ ಮುಖ್ಯಮಂತ್ರಿ" ಎಂದು
ತಾನೇ ಸಮಸ್ಯೆ ಬಗೆಹರಿಸಿದವನಂತೆ ಹೇಳಿದ. ಹಾಗೇಂತ ಕೆಳಗೇ ಬರೆದಿತ್ತಲ್ಲ?
ಮುದ್ದು ಮುದ್ದಾಗಿದ್ದಿರಿ. "ನಮ್ಮ ಇವರು ಅಲ್ಲವಾ?" ಎಂದೆ. ವಿನೋದ,
ಕರುಣ, ಜುಮ್ಕಿ ಎಲ್ಲಾ ಒಪ್ಪಿದರು. ಸಂತೋಷದಿಂದ ಕುಣಿದಾಡಿದೆವು.
ಅಂತೂ ರಾಷ್ಟದ ಪರಮಶ್ರೇಷ್ಠ ಬಾಬಾಜಿಯ ಕೃಪೆಗೆ ನೀವು ಪಾತ್ರರಾಗಿ
ನಮ್ಮೆಲ್ಲರಿಗಿಂತ ಎತ್ತರದಲ್ಲಿದೀರ. ನಮ್ಮೆಲ್ಲರ ಶುಭಕಾಮನೆ. ದಯವಿಟ್ಟು
ಸ್ವೀಕರಿಸಿ.
ಭಾರತಿ ಅನಾಥಾಶ್ರಮ ಪ್ರತಿಷ್ಠಾನದ ನಿಧಿ ಸಂಗ್ರಹಕಾರ್ಯ ತೃಪ್ತಿ
ಕರವಾಗಿ ಸಾಗಿದೆ ಎಂದು ತಿಳಿಸಲು ಸಂತೋಷಪಡುತ್ತೇನೆ. ನಮ್ಮವರೇ ಅದ
ನಿಮಗೂ ಸಂತೋಷವಾದೀತು. ನಿಮ್ಮ ರಾಜ್ಯಕ್ಕೆ ಯಾವಾಗ ಬರಬೇಕೆಂದು
ನೀವೇ ತಿಲಿಸಿ. ನಿಮ್ಮ ಅನುಕೂಲ ನೋಡಿಕೊಂಡು ದಿನ ಗೊತ್ತು ಮಾಡಿ
ಬರೆಯಿರಿ. ಇಪ್ಪತ್ತು ಜನ ಹುಡುಗಿಯರು, ನಾಲ್ವರು ಯುವಕರು, ನಾನು-
ಕರುಣಾ ಮತ್ತು ಜುಮ್ಮಿ. ಹುಡುಗಿಯರು ಯುವಕರು ಒಟ್ಟಗಿ ಒಂದೊಂದು
ತಾಸಿನ ಎರಡು ನೃತ್ಯರೂಪಕ ಅಭಿನಯಿಸುತ್ತಾರೆ. ಸ್ಥಳೀಯ ಆತಿಥ್ಯ ಸಮಿತಿ
ರಚಿಸಿ ಟಿಕೆಟ್ ಮಾರಾಟ ಸಾಧ್ಯವಾ? ಬೇರೆ ಕಡೆ ಹಾಗೆ ಮಾಡಿದೆವು. ಆ
ರಾಜ್ಯಗಳ ಮುಖ್ಯಮಂತ್ರಿಗಳು ಕಾಣಿಕೆಯನ್ನು ಕೊಟ್ಟರು. ದಕ್ಷಿಣದ್ದೆಲ್ಲ
ಆದ ಮೇಲೆ ಕೊನೆಯದಾಗಿ ಮುಂಬಯಿಯಲ್ಲಿ ಇಟ್ಟುಕೊಳ್ತೇವೆ. ಅದಾದ
ಮೇಲೆ ಪ್ರತಿ ರಾಜ್ಯದ ಮುಖ್ಯ ನಗರದಲ್ಲೂ ಪ್ರತಿಷ್ಠಾನ ನಡೆಸುವ
ಅನಾಥಾಶ್ರಮ ಕೇಂದ್ರಗಳ ಕಟ್ಟಡ ಕಾರ್ಯ ಶುರುವಾಗ್ತದೆ .
ನಿಮ್ಮ ಪತ್ರದ ದಾರಿ ನೋಡುತ್ತೇವೆ.

ನಿಮ್ಮವಳೇ ಆದ
ದೀದಿ

1o