ಪುಟ:ಮಿಂಚು.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

146

ಮಿಂಚು

ಮೃದುಲಾಬೆನ್ ಬರೆದ ಕಾಗದವನ್ನೋದಿ ಸೌದಾಮಿನಿ ನಕ್ಕಳು. ಒಂದು
ಕಾಲದಲ್ಲಿ ತಾನು ಇವಳ ಶಿಷ್ಯೆಯಾಗಿದ್ಧೆ. ಈಗ? ಕಲ್ಯಾಣನಗರಕ್ಕೆ ದಿಲ್ಲಿಯಿಂದ
ಬಂದು ಹೊಸದಾಗಿ ಮೂಡಿ ಬಲಿತ ರೆಕ್ಕೆಗಳ ಬಲದಿಂದ ರಾಷ್ಟ್ರಪಕ್ಷದ ಹುದ್ದರಿಯಾಗಿ
ಹಾರಾಡುತ್ತಿದ್ದಾಗ 'ದೀದಿ'ಯ ನೆನಪಾಗಿತ್ತು. ಕಾಗದ ಬರೆಯಬೇಕು ಎಂತಲೂ
ಅನಿಸಿತ್ತು. ಬಿಡುವಾಗಲಿಲ್ಲ. ಮುಖ್ಯಮಂತ್ರಿಯಾದ ಮೇಲಂತೂ ಎಲ್ಲಿಯ
ಬಿಡುವು? ವಾಸ್ತವವಾಗಿ ಅವರಾಗಿಯೇ ಬರೆಯಲಿ, ಬರೆದೇ ಬರೆಯುತ್ತಾರೆ-ಎಂಬ
ಧೋರಣೆಯೇ ಸೌದಾಮಿನಿ ತಳೆದ ಮೌನಕ್ಕೆ ಕಾರಣವಾಗಿತ್ತು. ಸರಕಾರದ ಅತಿಥಿ
ಯಾಗಿ ವಿನೋದನನ್ನು ಕರೆಯಬೇಕು. ಲೇಖನಗಳನ್ನಂತೂ ಬರೆಯುತ್ತಾನೆ; ಒಂದು
ಪುಸ್ತಕ ಬರೆದುಕೊಡಲೂ ಬಹುದು-ಎಂಬ ವಿಚಾರವೂ ಅವಳಲ್ಲಿ ಮೊಳೆತಿತ್ತು. ತಂಡ
ವಾಗಿಯೋ ಒಬ್ಬೊಬ್ಬರಾಗಿಯೋ ದಿಲ್ಲಿಯವರನ್ನೂ ಕರೆಸಬೇಕೆನ್ನುವುದು ಆಗಾಗ್ಗೆ
ಅವಳಿಗೆ ನೆನಪಾಗುತ್ತಿತ್ತು. ಸರಕಾರದ ಕೆಲಸ ದೇವರ ಕೆಲಸ. ಆ ದೇವರೊ ಯಾವಾ
ಗಲೂ ನಿಧಾನಿ.
ಈಗಲೊ ಕಾಗದ ಬಂದಿದೆ. ಇನ್ನು ವಿಲಂಬ ಸಲ್ಲದು. ಇಂದೇ ಉತ್ತರ
ಬರೆಯಬೇಕು. ಬನ್ನಿ ಎನ್ನಬೇಕು.
“ಪರಶುರಾಮ್, ಒಂದು ಕಾಗೂ ಬರಕೊ, ಇಂಗ್ಲಿಷಿನಲ್ಲಿ."
“ಸಿದ್ಧ, ಮಾತಾಜಿ."
"ಶ್ರೀಮತಿ ಮೃದುಲಾಬೆನ್, ಅಧ್ಯಕ್ಷೆ, ಭಾರತಿ ಅನಾಥ ಆಶ್ರಮ ಪ್ರತಿಷ್ಠಾನ
ವಿಳಾಸ ಈ ಕಾಗದದಲ್ಲಿದೆ. ಮುಂದಕ್ಕೆ__

ಪ್ರಿಯ ದೀದಿಜಿ,
ಪತ್ರ ತಲಪಿ, ನಿಮ್ಮೆಲ್ಲರ ಕ್ಷೇಮ ಸಮಾಚಾರ ತಿಳಿದು, ಖುಶಿ
ಯಾಯಿತು.
ಧರ್ಮೇಂದರ್ ಬಾಬಾರ ಮಠದಲ್ಲಿ ನಾನು ಮರುಹುಟ್ಟ ಪಡೆದೆ.
ನಾನು ಈಗ ಉಪಾಸನೆ ಮಾಡುತ್ತಿರುವ ದೇವಿ ಜಗದಲಪುರದ ದಂತೇಶ್ವರಿ.
ಎಲ್ಲ ಅವಳ ಕೃಪೆ ಎನ್ನಲೆ? ಮುಖ್ಯಮಂತ್ರಿಯದು ತಂತಿಯ ಮೇಲಿನ ನಡಿಗೆ.
ವಿನೋದರನ್ನು ಕೇಳಿ. ಎಲ್ಲಾ ವಿವರ ತಿಳಿದೀತು, ಸೇವಾಕ್ಷೇತ್ರದ ವಿಸ್ತರಣೆ
ಎಂಬ ಭಾವನೆಯಿಂದಲೇ ಈ ಅಧಿಕಾರ ಸ್ಥಾನ ಸ್ವೀಕರಿಸಿದ್ದೇನೆ. ತಂಡದೊಡನೆ
ನೀವು ಬಂದು ಕಿಷ್ಕಿಂಧೆಯ ಕಿಂಚಿತ್ ಸೇವೆ ಸ್ವೀಕರಿಸುತ್ತೀರೆಂದು ನನಗೆ ಆನಂದ
ವಾಗಿದೆ.

ನಿಮಗೆ ಆತಿಥ್ಯ ನೀಡುವುದರಲ್ಲಿ ಈ ನಗರದ ಅನಾಥ ಆಶ್ರಮ
ಪ್ರಮುಖ ಪಾತ್ರ ವಹಿಸಲಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ಋತುಗಳು ಬದಲಾಗುತ್ತವೆ, ಕಾಲ ಬದಲಾಗುತ್ತದೆ. ಇತ್ತೀಚೆಗಷ್ಟೆ ಆ