ಪುಟ:ಮಿಂಚು.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

152

ಮಿಂಚು

“ನಗರದ ದಕ್ಷಿಣ ವಲಯದಲ್ಲಿ ಹೆದ್ದಾರಿಯ ಹತ್ತಿರ ಭೀಮಗಾತ್ರದ ಒಂದು
ಹುಣಸೇಮರ ಇದೆ. ನನಗೆ ಬಹಳ ಇಷ್ಟವಾದದ್ದು, ನಿಮ್ಮ ಕಾರಿನಲ್ಲಿ ಕುಳಿತು ಅಲ್ಲಿ
ತನಕ ಹೋಗಿ ಬರೋಣ.”
ಸುವಾಸನೆ ಹಜಾರವನ್ನು ವ್ಯಾಪಿಸಿತು. ರಂಗಧಾಮನ ಮೂಗಿನ ಹೊಳ್ಳೆಗಳಿಗೆ
ಅಪ್ಪಳಿಸಿತು. ಬೆಳಗ್ಗೆಯೇ ಮೂಡಿದ್ದ ಸಂದೇಹ ದಟ್ಟವಾಯಿತು,
ರಾಮ್‌ಧನ್, ಬೋಲಾನಾಥ್ ಬಂದರು ; ಸರಕಾರೀ ಪೋಲೀಸ್ ಪೇದೆಗಳೂ
ಬಂದರು.
ಮುಖ್ಯಮಂತ್ರಿ ಅಂದಳು : -
“ಇಲ್ಲೇ ಇರಿ. ಮಿನಿಸ್ಟರ ಮನೇಲಿ ಶ್ರೀಮತಿಯವರಿಗೆ ತುಸು ಅನಾರೋಗ್ಯ,
ನೋಡಿ ಬರ್ತೇನೆ.”
ಅಂಗರಕ್ಷಕರೂ ಪೋಲೀಸರೂ ಸುಮ್ಮನಾದರು, ಕಾರು ಹೊರಟೊಡನೆ
ಪರಸ್ಪರರ ಮುಖಗಳನ್ನು ಮಿಕಿಮಿಕಿ ನೋಡಿದರು. ಸುಮ್ಮನಾದರು.
ಟೋಲ್‌ಗೇಟನ್ನು ಹಿಂದಿಕ್ಕಿ ಸಾಲು ಮರಗಳ ಮಧ್ಯೆ ಕಾರು ಓಡತೊಡಗಿದ
ಮೇಲೆ ಸೌದಾಮಿನಿ ಚಾಲಕನು ಸರಿದು ಕುಳಿತಳು. “ಸ್ಟೀಯರಿಂಗ್ ವೀಲಿಗೆ
ಒಂದು ಕೈ ಸಾಲದಾ ?” ಎಂದಳು. ಅವನ ಇನ್ನೊಂದು ಕೈ ಆಕೆಯ ಕತ್ತನ್ನು
ಬಳಸಿ, ಸಿಕ್ಕಿದುದನ್ನು ತಡವಿತ್ತು, “ಕೈ ಹಾಗೇ ಇರಲಿ.” ಎಂದಳಾಕೆ.
ಟೆನ್ನಿಸ್ ಆಟದಲ್ಲಿ ಮುಖ್ಯಮಂತ್ರಿಯನ್ನು ವಿಜಯಿಯಾಗಿ ಮಾಡಿದ ಮೇಲೆ
ಇನ್ನು ಬೇರೆ ಆಟ ಇಲ್ಲ” ಎನಿಸಿತ್ತು ರಂಗಧಾಮನಿಗೆ ಈಗ ಮತ್ತೆ ಅದೇ ಬೆಂಕಿಯ
ಸಮೀಪದಲ್ಲಿದ್ದೇನೆ, ಮೈ ಕಾಯಿಸುತ್ತೇನೋ, ಉರಿದು ಹೋಗುತ್ತೇನೋ.
“ಹತ್ತು ಹದಿನೈದು ಮೈಲು ಬಂದೆವಲ್ಲ ?”
“ಹ, ಇನ್ನೆಷ್ಟು ದೂರ ?"
“ವೇಗ ಕಮ್ಮಿ ಮಾಡಿ.... ಎಡಕ್ಕೊಂದು ದಾರಿ ಕಾಣ್ತದೆ, ಅದರಲ್ಲಿ ಫರ್ಲಾಂಗು
ಹೋದರಾಯ್ತು.”
ದಾರಿ ಅಸ್ಪಷ್ಟವಾಗಿ ಕಾಣಿಸಿತು.
“ಆ ಮರವಾ ?”
"ಅದೇ, ಅದೇ !"
“ಇಲ್ಲಿಗೆ ಈ ಮೊದಲು ನೀವು ಬಂದಿದೀರಾ ?”
“ಹೋದ ಜನ್ಮದಲ್ಲಿ ಕೆಲವು ಸಾರೆ, ಕನಸಿನಲ್ಲಿ ಅನೇಕ ಸಲ.”
“........"
“ನಿಲ್ಲಿಸಿ.”
ಬೆಲ್ಲ ವಿನಿಮಯ: ಬಾಗಿಲು ತೆರೆದರು, ಇಳಿದರು. ಬಾಗಿಲು ತೆರೆದರು.
ಹತ್ತಿದರು.